ಹವಾಮಾನ

Rain forecast 2024 : ಈ ವರ್ಷ ಮಳೆ ಬೆಳೆ ಸಮೃದ್ಧ | ದೈವವಾಣಿ ಮತ್ತು ಹವಾಮಾನ ಮುನ್ಸೂಚನೆ ಏನು ಹೇಳುತ್ತದೆ?

WhatsApp Group Join Now
Telegram Group Join Now

Rain forecast 2024 : ಬರದಿಂದ ಕಂಗೆಟ್ಟಿರುವ ನಾಡಿನ ರೈತರಿಗೆ ಮಳೆ ಸಂಬ೦ಧಿತ ಸಮಾಧಾನಕರ ಸಮಾಚಾರ ಹೊರ ಬೀಳತೊಡಗಿವೆ. ಹೌದು, ದೈವವಾಣಿ, ತಾಳೆಗರಿ ಭವಿಷ್ಯ ಮಾತ್ರವಲ್ಲದೇ, ಹವಾಮಾನ ಮುನ್ಸೂಚನಾ ವರದಿಗಳು (Weather forecast report) ಕೂಡ ಈ ವರ್ಷ ಮಳೆಬೆಳೆ ಸಮೃದ್ಧವಾಗಲಿದೆ ಎಂಬ ಭರವಸೆಗಳನ್ನು ನೀಡುತ್ತಿವೆ.

ಹವಾಮಾನ ಮುನ್ಸೂಚನೆ ಏನು ಹೇಳುತ್ತದೆ?

2023ರಲ್ಲಿ ಮುಂಗಾರು ಮಳೆ ಹಾಗೂ ಹಿಂಗಾರು ಮಳೆಗಳೆರಡೂ ಕೈ ಕೊಟ್ಟ ಪರಿಣಾಮ ರಾಜ್ಯದಲ್ಲಿ ಬರಗಾಲ ಆವರಿಸಲು ನೇರ ಕಾಣವಾಗಿದೆ. ಆದರೆ ಈ ಎರಡೂ ಮಳೆಗಳು ವಿಫಲವಾಗಲು ‘ಎಲ್ ನಿನೊ’ (El Nino) ಪರಿಸ್ಥಿತಿಯೇ ಕಾರಣ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ‘ಎಲ್ ನಿನೊ’ ಪರಿಸ್ಥಿತಿಯಿಂದ ಕರ್ನಾಟಕವು ಸೇರಿದಂತೆ ದೇಶದ ಬಹುಪಾಲು ರಾಜ್ಯಗಳು ಮಳೆ ಅಭಾವ ಎದುರಿಸಿವೆ.

ಸಮಾಧಾನಕರ ಸಂಗತಿ ಎಂದರೆ ‘ಎಲ್ ನಿನೊ’ ಪರಿಸ್ಥಿತಿ ದುರ್ಬಲಗೊಳ್ಳಲು ಶುರುವಾಗಿದ್ದು, ಇದೇ ಆಗಸ್ಟ್ ಹೊತ್ತಿಗೆ ‘ಲಾ ನಿನಾ’ (La Nina) ಪರಿಣಾಮ ಶುರುವಾಗುವ ಸಂಭವವಿದೆ. ಹೀಗಾಗಿ ಈ ವರ್ಷ ಉತ್ತಮ ಮುಂಗಾರು ಮಳೆಯಾಗಿ ಸಮೃದ್ಧ ಬೆಲೆ ಬರಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್ ಲಿಂಕ್ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ಮೈಲಾರ ಕಾರ್ಣಿಕದ ಭವಿಷ್ಯವೇನು?

ಇನ್ನು ಉತ್ತರ ಕರ್ನಾಟಕದ ಅನ್ನದಾತರ ಬಹುನಂಬಿಕೆ ಜನಪದರ ದೈವ ಮೈಲಾರಲಿಂಗೇಶ್ವರನ ವಾರ್ಷಿಕ ಕಾರ್ಣಿಕ ಕೂಡ ಮಳೆಬೆಳೆ ಸಮೃದ್ಧವಾಗುವ ಭರವಸೆ ಹೊಮ್ಮಿಸಿದೆ. ಕಳೆದ ಫೆಬ್ರವರಿ 26ನೇ ತಾರೀಖು ಸಂಜೆ ಹನ್ನೊಂದು ದಿನಗಳ ಉಪವಾಸ ವ್ರತ ಆಚರಿಸಿದ್ದ ಗೊರವಪ್ಪ ರಾಮಜ್ಜ ಧನಸ್ಸನ್ನು ಏರಿ ‘ಸಂಪಾಯಿತಲೇ ಪರಾಕ್’ ಎಂಬ ಒಂದೇ ವಾಕ್ಯದ ಭವಿಷ್ಯವಾಣಿ ನುಡಿದಿದ್ದಾರೆ.

ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕಿನ ಹಿರೇಮೈಲಾರದಲ್ಲಿ ನೆಲೆಸಿರುವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ (Shri Mylaralingeshwar Swami) ಗಡಿ-ಭಾಷೆ, ಜಾತಿ-ಧರ್ಮಗಳನ್ನು ಮೀರಿದ ಪ್ರಭಾವ ಹೊಂದಿರುವ ಪಶುಪಾಲಕರು ಮತ್ತು ರೈತಾಪಿ ಜನರ ಪರಮ ದೈವವಾಗಿದ್ದಾನೆ. 2024ರ ಕಾರ್ಣಿಕದ (2024 Mylara Karnika) ನುಡಿಯು ರೈತರ ಬದುಕಿನ ವಿಶ್ಲೇಷಣೆಯಾಗಿದ್ದು; ಈ ವರ್ಷ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರುತ್ತದೆ ಎಂದು ನಾಡಿನ ಜನ ಕಾರ್ಣಿಕದ ನುಡಿಯನ್ನು ವಿಶ್ಲೇಷಣೆ ಮಾಡಿದ್ದಾರೆ.

ಇದನ್ನೂ ಓದಿ: PM Surya Ghar Muft Bijli Jojana 2024 : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ಮಳೆ ಕುರಿತ ಕೋಡಿಮಠದ ಭವಿಷ್ಯವೇನು?

ಅದೇ ರೀತಿ ತಾಳೆಗರಿ ಭವಿಷ್ಯದಲ್ಲಿ ಸಾಕಷ್ಟು ಸುಪ್ರಸಿದ್ಧಿ ಪಡೆದಿರುವ ಕೋಡಿಮಠದ (Kodimath) ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು (Shivananda Shivayogi Rajendra Swamiji) ಕೂಡ ರೈತರಿಗೆ ಶುಭಕರವಾದ ಭವಿಷ್ಯ ನುಡಿದಿದ್ದಾರೆ. ಕಳೆದ ಫೆಬ್ರವರಿ 19ರಂದು ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶ್ರೀಗಳು ಈ ವರ್ಷ ಮಳೆ ಬೆಳೆ ಉತ್ತಮ ರೀತಿಯಲ್ಲಿ ಆಗುತ್ತದೆ ಎಂದಿದ್ದಾರೆ.

ಹೊಸವರ್ಷದ ಯುಗಾದಿ ಹಬ್ಬ (Ugadi Festival) ಕಳೆದ ನಂತರದಲ್ಲಿ ಪ್ರಕೃತಿಯಲ್ಲಿ ಆಶಾದಾಯಕ ಬದಲಾವಣೆಯಾಗಲಿದೆ. ಆಕಾಶದಲ್ಲಿ ಮೋಡಗಳು ಕವಿದು ಮಳೆ ಸುರಿಸುತ್ತವೆ. ಭೂಮಿಯು ಉತ್ತಮ ಬೆಳೆ ನೀಡುತ್ತದೆ. ರೈತರು ಬೆಳೆದ ಬೆಳೆಗಳಿಗೆ ಹಾಕಿದ ಬಂಡವಾಳಕ್ಕೆ ಮೋಸವಿಲ್ಲದಂತಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Heat Waves : ಕರ್ನಾಟಕದಲ್ಲಿ ‘ಶಾಖದ ಅಲೆ’ ಮುನ್ಸೂಚನೆ : ಹೇಗಿರಲಿವೆ ಮುಂದಿನ ದಿನಗಳು?

Rain forecast : ಬರಗಾಲ ಮುಕ್ತಾಯ ಜೂನ್’ನಿಂದ ಉತ್ತಮ ಮುಂಗಾರು | ಈ ವರ್ಷದ ಮಳೆ ಭರವಸೆ ನೀಡಿದ ಹವಾಮಾನ ಇಲಾಖೆ

WhatsApp Group Join Now
Telegram Group Join Now

Related Posts

error: Content is protected !!