ಹವಾಮಾನ

Rain Forecast 2024 : ರಾಜ್ಯಕ್ಕೆ ವರವಾಗಲಿದೆ ಪೂರ್ವ ಮುಂಗಾರು ಮಳೆ | ಯುಗಾದಿ ಹೊತ್ತಿಗೆ ಎಲ್ಲೆಲ್ಲೂ ಮಳೆ

WhatsApp Group Join Now
Telegram Group Join Now

Rain Forecast 2024 : ರಾಜ್ಯದ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದು; ಬಹುತೇಕ ಕಡೆಗೆ ಮಿತಿ ಮೀರಿದ ತಾಪಮಾನ ದಾಖಲಾಗುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ಕಲಬುರಗಿಯಲ್ಲಿ ದಾಖಲಾಗಿದ್ದು; ಉದ್ಯಾನನಗರಿ ಎಂದೇ ಖ್ಯಾತವಾಗಿರುವ ಬೆಂಗಳೂರು ಕೂಡ ಅಧಿಕ ತಾಪಮಾನಕ್ಕೆ (high temperature) ಬಸವಳಿಯುತ್ತಿದೆ. ಈ ವಾತಾವರಣ ಇನ್ನೂ ಮೂರು ವಾರ ಮುಂದುವರೆಯಲಿದ್ದು ಆನಂತರ ರಾಜ್ಯದ ಬಹುತೇಕ ಕಡೆಗೆ ಮಳೆ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ.

ರಾಜ್ಯದಲ್ಲಿ ಮುಂದಿನ ಎರಡು ವಾರಗಳ ಕಾಲ ಬಿರು ಬಿಸಿಲು, ಉಷ್ಣ ಹವೆ ಹೆಚ್ಚಾಗಲಿದ್ದು, ಬರಗಾಲದ (drought) ಬವಣೆ ಮತ್ತಷ್ಟು ಹೆಚ್ಚಲಿದೆ. ಉಷ್ಣಾಂಶ ಏರಿಕೆಯ ಕಾರಣಕ್ಕೆ ಏಪ್ರಿಲ್ 15ರ ವರೆಗೂ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶ ರಾಜ್ಯದ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದೆ.

ರಾಜ್ಯಕ್ಕೆ ವರವಾಗುವ ಪೂರ್ವ ಮುಂಗಾರು ಮಳೆ

ಅಂದಾಜಿನ೦ತೆ ಮುಂದಿನ ಏಪ್ರಿಲ್ 3ನೇ ವಾರದ ಬಳಿಕ ತಾಪಮಾನ ಸಾಧಾರಣ ಸ್ಥಿತಿಗೆ ಬರಲಿದ್ದು; ಪೂರ್ವ ಮುಂಗಾರು ಮಳೆ (East Monsoon) ರಾಜ್ಯದ ಪಾಲಿಗೆ ವರದಾನವಾಗುವ ಭರವಸೆ ವ್ಯಕ್ತವಾಗಿದೆ. ಏಕೆಂದರೆ ಮಾರ್ಚ್ ತಿಂಗಳಲ್ಲಿ ರಾಜ್ಯದ ಅಲ್ಲಲ್ಲಿ ವಾಡಿಕೆಯ ಮಳೆಗಿಂತ ಹೆಚ್ಚಿಗೆ ಬೇಸಿಗೆ ಮಳೆಯಾಗಿದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ವಾಡಿಕೆಯಂತೆ 9 ಮಿ.ಮೀ ಬೇಸಿಗೆ ಮಳೆಯಾಗುವುದುಂಟು. ಆದರೆ ಈ ವರ್ಷ 10 ಮಿ.ಮೀ ಮಳೆಯಾಗಿದೆ. ತಾಪಮಾನ ಏರಿಕೆಯಿಂದ ಮಳೆಯ ಪ್ರಮಾಣ ಮುಂದಿನ ದಿನಗಳಲ್ಲಿ ಉತ್ತಮವಾಗಿರುತ್ತದೆ ಎಂಬ ಮುನ್ಸೂಚನೆ ಸಿಕ್ಕಿದೆ.

ಈ ನಡುವೆ, ಮಾರ್ಚ್ ತಿಂಗಳಾ೦ತ್ಯಕ್ಕೆ ಅಂದರೆ, ಮಾರ್ಚ್ 30 ಹಾಗೂ 31ರಂದು ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ವರ್ಷ ಯುಗಾದಿ ಮಳೆಹಬ್ಬ?

ಸಾಮಾನ್ಯವಾಗಿ ಯುಗಾದಿ (Ugadi) ಭಾರತೀಯ ಪಾಲಿಗೆ ಹೊಸ ವರ್ಷವಾಗಿದ್ದು; ಹೊಸ ಚಿಗುರಿನೊಂದಿಗೆ ಪ್ರಕೃತಿ ಕಂಗೊಳಿಸುತ್ತದೆ. ಈ ವರ್ಷ ಯುಗಾದಿ ಸಮೀಪಕ್ಕೆ ಮಳೆ ಸಿಂಚನವಾಗಲಿದ್ದು; ಯುಗಾದಿಯು ಮಳೆಯ ಹಬ್ಬವಾಗುವ ಸಾಧ್ಯತೆ ಇದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (karnataka State Disaster Management Authority- KSNDMC) ಅಂದಾಜಿಸಿದೆ.

ಅ೦ದಾಜಿನ೦ತೆ ಏಪ್ರಿಲ್‌ನ ಎರಡು ವಾರ ಬಿಸಿಲು ಮತ್ತು ಒಣಹವೆ ಮತ್ತಷ್ಟು ತೀವ್ರಗೊಳ್ಳಲಿವೆ. ಯುಗಾದಿ ಆಸುಪಾಸಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. 2-3 ವಾರಗಳ ನಂತರ ಪೂರ್ವ ಮುಂಗಾರು ಉತ್ತಮವಾಗಿರುವ ಮುನ್ಸೂಚನೆ ಸಿಕ್ಕಿದ್ದು, ಪರಿಸ್ಥಿತಿ ಸುಧಾರಿಸಲಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮಾಹಿತಿಯನ್ನೂ ತಿಳಿಯಿರಿ:

Summer diseases : ಹೆಚ್ಚಿದ ಉರಿ ಬಿಸಿಲಿಗೆ ಸಾಂಕ್ರಾಮಿಕ ರೋಗಗಳ ಹಾವಳಿ | ಆರೋಗ್ಯ ಇಲಾಖೆ ಕಟ್ಟೆಚ್ಚರ

Karnataka Rain Report 2024 : ಈ ವರ್ಷ ಭರ್ಜರಿ ಮುಂಗಾರು ಮಳೆ | ಬೇಸಿಗೆ ಮಳೆ ನೀಡಿದ ಮುನ್ಸೂಚನೆ

karnataka Heat Wave : ರಾಜ್ಯದ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಬೆಂಕಿ ಬಿಸಿಲು | ಅಧಿಕ ಉಷ್ಣಾಂಶದ ಜಿಲ್ಲೆಗಳ ಪಟ್ಟಿ ಬಿಡುಗಡೆ

Rain Information 2024 : ಮಾರ್ಚ್’ನಿಂದ ಮೇ ವರೆಗೂ ರಣ ಬಿಸಿಲು; ಜೂನ್‌ನಿಂದ ಭರ್ಜರಿ ಮುಂಗಾರು ಮಳೆ | ಸಿಹಿಕಹಿ ಸುದ್ದಿಕೊಟ್ಟ ಹವಾಮಾನ ಇಲಾಖೆ

 

WhatsApp Group Join Now
Telegram Group Join Now

Related Posts

error: Content is protected !!