ಕೃಷಿಹವಾಮಾನ

Rain forecast : ಬರಗಾಲ ಮುಕ್ತಾಯ ಜೂನ್’ನಿಂದ ಉತ್ತಮ ಮುಂಗಾರು | ಈ ವರ್ಷದ ಮಳೆ ಭರವಸೆ ನೀಡಿದ ಹವಾಮಾನ ಇಲಾಖೆ

WhatsApp Group Join Now
Telegram Group Join Now

Rain forecast

ಭಾರತೀಯ ಹವಾಮಾನ ಇಲಾಖೆಯು ವಿವಿಧ ಅಧ್ಯಯಮಗಳ ಆಧಾರದಲ್ಲಿ ಈ ವರ್ಷ ಉತ್ತಮ ಮಳೆಯಾಗಿ ಬರಗಾಲ ಮುಕ್ತಾಯವಾಗಲಿದೆ ಎಂದಿದೆ…

2023ರ ಮುಂಗಾರು ಮತ್ತು ಹಿಂಗಾರು ಮಳೆ ಎರಡೂ ಕೈಕೊಟ್ಟಿದ್ದರಿಂದ ಇಡೀ ರಾಜ್ಯ ಭೀಕರ ಬರಗಾಲಕ್ಕೆ ತುತ್ತಾಗಿದೆ. ರಾಜ್ಯದ ಬಹುತೇಕ ತಾಲೂಕುಗಳು ಬರಪೀಡಿತ ಪಟ್ಟಿಗೆ ಒಳಪಟ್ಟಿದ್ದು; ಬರ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಹೀಗಿರುವಾಗಲೇ ಭಾರತೀಯ ಹವಾಮಾನ ಇಲಾಖೆ (Indian Meteorological Department – IMD) ಈ ವರ್ಷ ಅಂದರೆ 2024ರಲ್ಲಿ ಅತ್ಯುತ್ತಮ ಮುಂಗಾರು ಸುರಿಯಲಿದೆ ಎಂಬ ಭರವಸೆ ನೀಡಿದೆ.

ಹೌದು, ಭಾರತದಲ್ಲಿ ಸುರಿಯುವ ಒಟ್ಟು ಮಳೆಯಲ್ಲಿ ಬರೋಬ್ಬರಿ ಶೇ.70 ಮಳೆ ನೈಋತ್ಯ ಮಾರುತಗಳಿಂದ ಸುರಿಯುತ್ತದೆ. ಅಂದರೆ ಮುಂಗಾರು ಮಳೆಯೇ ಭಾರತದ ಜೀವಾಳ. ಆದರೆ 2023ರ ಜೂನ್ 1ರಿಂದ ಸೆಪ್ಟೆಂಬರ್ 30ರ ವರೆಗಿನ ನಾಲ್ಕು ತಿಂಗಳುಗಳ ಕಾಲ ಮುಂಗಾರು ಹುಟ್ಟಿಸಿದ ಹತಾಶೆ ಸಣ್ಣದೇನಲ್ಲ. ರೈತರ ನಿರೀಕ್ಷೆಗಳನ್ನು ಬುಡಮೇಲು ಮಾಡಿದ ಮಳೆ ಭೀಕರ ಬರಗಾಲವನ್ನು ಬಿಟ್ಟು ಹೋಗಿದೆ.

ಇದನ್ನೂ ಓದಿ: bara parihara release : ಈ ರೈತರಿಗೆ ಬರ ಪರಿಹಾರ ಹಣ ಜಮಾ | ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…

ಈ ವರ್ಷ ಉತ್ತಮ ಮುಂಗಾರು

ಕಳೆದ ವರ್ಷ ಮುಂಗಾರು ವೈಫಲ್ಯಕ್ಕೆ ಪ್ರಮುಖ ಕಾರಣವೇ ‘ಎಲ್ ನಿನೊ’ (El Nino) ಪರಿಸ್ಥಿತಿ ಎಂದು ಎಂಬುವುದು ತಜ್ಞರ ಅಭಿಪ್ರಾಯ. ದಕ್ಷಿಣ ಭಾರತದಲ್ಲಿನ ‘ಎಲ್ ನಿನೊ’ ಪರಿಣಾಮದಿಂದಾಗಿ ಮಳೆ ವ್ಯವಸ್ಥೆ ಸ್ವರೂಪವೇ ಬದಲಾವಣೆ ಆಗಿದೆ ಎನ್ನುತ್ತದೆ ಹವಾಮಾನ ಇಲಾಖೆ. ಕರ್ನಾಟಕವು ಸೇರಿದಂತೆ ದೇಶದ ಬಹುಪಾಲು ರಾಜ್ಯಗಳು ಮಳೆ ಕೊರತೆಯನ್ನು ಕಂಡಿವೆ.

ಹವಾಮಾನ ಇಲಾಖೆಯು ವಿವಿಧ ಅಧ್ಯಯಮಗಳ ಆಧಾರದಲ್ಲಿ ಈ ವರ್ಷ ಉತ್ತಮ ಮಳೆಯಾಗಿ ಕೃಷಿ ಕ್ಷೇತ್ರ ಚೇತರಿಸಿಕೊಳ್ಳಲು ಸಹಕಾರಿ ಆಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ. ಭೂವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಮಾಧವನ್ ರಾಜೀವನ್ ಅವರು ‘ಹಿಂದಿನ ವರ್ಷಕ್ಕಿಂತ ಈ ವರ್ಷ ಮುಂಗಾರು ಮಳೆಯು ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ’ ಎಂದಿದ್ದಾರೆ.

ಇದನ್ನೂ ಓದಿ: Udyoga Mela Govt of Karnataka 2024 : ಸರಕಾರಿ ಉದ್ಯೋಗ ಮೇಳದಲ್ಲಿ ಭರ್ಜರಿ ಉದ್ಯೋಗಾವಕಾಶ | ಎಲ್ಲಾ ರೀತಿ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳಿಗೂ ಅವಕಾಶ

ಎಲ್ ನಿನೋ ತಟಸ್ಥ (El Nino is neutral)

ಹವಾಮಾನದ ಮೇಲೆ ಪರಿಣಾಮ ಕೆಟ್ಟ ಬೀರುವ ‘ಎಲ್ ನಿನೊ’ ಪರಿಸ್ಥಿತಿ ದುರ್ಬಲಗೊಳ್ಳಲು ಶುರುವಾಗಿದ್ದು, ಬರಲಿರುವ ಆಗಸ್ಟ್ ಹೊತ್ತಿಗೆ ‘ಲಾ ನಿನಾ’ (La Nina) ಪರಿಣಾಮ ಶುರುವಾಗುವ ಸಾಧ್ಯತೆ ಇದೆ. ಹೀಗಾಗಿ ಈ ವರ್ಷ ಉತ್ತಮ ಮುಂಗಾರು ಮಳೆ ಸುರಿಯಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶೇ.79ರಷ್ಟು ಎಲ್ ನಿನೊ ಪರಿಣಾಮವು ಎನ್ನೊ ತಟಸ್ಥ ಸ್ಥಿತಿಯಾಗಿ ಪರಿವರ್ತನೆ ಕಾಣುವ ಸಾಧ್ಯತೆ ಇದೆ ಎಂದು ಅಮೆರಿಕದ ಎನ್‌ಒಎಎ ಸಂಸ್ಥೆ ಅಂದಾಜಿಸಿದೆ. ಅದೇ ರೀತಿ ಜೂನ್-ಆಗಸ್ಟ್ ಹೊತ್ತಿಗೆ ಶೇ.55ರಷ್ಟು ‘ಲಾ ನಿನಾ’ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಕೂಡ ಅಮೆರಿಕ ಎನ್‌ಒಎಎ ಸಂಸ್ಥೆ ಹೇಳಿದೆ.

ಇದನ್ನೂ ಓದಿ: Farmers Loan Waiver : ರಾಜ್ಯ ಬಜೆಟ್‌ನಲ್ಲಿ ಸಿಗುತ್ತಾ ರೈತರಿಗೆ ಸಾಲಮನ್ನಾ ಭಾಗ್ಯ? | ರೈತರ ಬೇಡಿಕೆಗಳೇನು?

ಉತ್ತಮ ಮಳೆ ಸಾಧ್ಯತೆ

ಕೆಲವು ಅಧ್ಯಯನಗಳು ಲಾ ನಿನಾ ಪರಿಸ್ಥಿತಿ ಉಂಟಾಗಬಹುದು ಎನ್ನುತ್ತವೆ. ಇನ್ನು ಕೆಲವು ಅಧ್ಯಯನಗಳು ಎನ್ನೊ ತಟಸ್ಥ ಸ್ಥಿತಿ, ಅಂದರೆ ಎಲ್ ನಿನೊ ಮತ್ತು ಲಾ ನಿನಾ ಎರಡೂ ಇಲ್ಲದ ತಟಸ್ಥ ಸ್ಥಿತಿ ನಿರ್ಮಾಣವಾಗಬಹುದು ಎನ್ನುತ್ತಿವೆ. ಆದರೆ ಬಹುತೇಕ ಅಧ್ಯಯನಗಳು ಎಲ್ ನಿನೊ ಕೊನೆಗೊಳ್ಳುವುದನ್ನು ಒತ್ತಿ ಹೇಳುತ್ತಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಿ. ಶಿವಾನಂದ ಪೈ ತಿಳಿಸಿದ್ದಾರೆ.

ನಿರೀಕ್ಷೆಯಂತೆ ‘ಎಲ್ ನಿನೊ’ ಪರಿಸ್ಥಿತಿಯು ತಟಸ್ಥ ಸ್ಥಿತಿಯಾಗಿ ಬದಲಾವಣೆಯಾದರೆ ಖಂಡಿತವಾಗಿಯೂ ಈ ವರ್ಷ ಮುಂಗಾರು ಮಳೆ ಹಿಂದಿನ ವರ್ಷಕ್ಕಿಂತ ಚೆನ್ನಾಗಿ ಸುರಿಯಲಿದೆ. ಬರಗಾಲ ಮುಕ್ತಾಯವಾಗಿ ಕೃಷಿ ಕ್ಷೇತ್ರ ಚೇತರಿಸಿಕೊಳ್ಳಲಿದೆ. ಆದರೆ ಯಾವುದನ್ನೂ ಖಚಿತವಾಗಿ ಹೇಳಲಾಗದು ಎಂಬುವುದು ಹವಾಮಾನ ಇಲಾಖೆಯ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Coconut Farming : ಮೂರೇ ವರ್ಷಕ್ಕೆ ಭರ್ಜರಿ ಇಳುವರಿ ಕೊಡುವ ಗಿಡ್ಡ ತಳಿ ತೆಂಗು | Malaysian Green Dwarf High Yielding Coconut

WhatsApp Group Join Now
Telegram Group Join Now

Related Posts

error: Content is protected !!