ರಾಜ್ಯ ಕೆಲವು ಕಡೆಗೆ ಚಳಿ, ಮತ್ತೆ ಕೆಲವು ಭಾಗಗಳಲ್ಲಿ ಮಳೆ ಸಿಂಚನವಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ ಮಳೆ ಸುರಿದಿದೆ. ಜನವರಿ 20ರ ಸೋಮವಾರ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಜನವರಿ 19ರ ಭಾನುವಾರ ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ. ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 12 ಡಿ.ಸೆ. ದಾಖಲಾಗಿದ್ದು, ಗರಿಷ್ಠ ತಾಪಮಾನ 34.3 ಡಿ.ಸೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ದಾಖಲಾಗಿದೆ.
ಇದನ್ನೂ ಓದಿ: MenasinaKayi Mela 2025 : ಜನವರಿ 31ರಿಂದ ಒಣ ಮೆಣಸಿನಕಾಯಿ ಮೇಳ
ಇಂದು ಈ ಜಿಲ್ಲೆಗಳಲ್ಲಿ ಮಳೆ
ಪೂರ್ವೋತ್ತರ ಮಾರುತಗಳು (Easterly Waves) ಹಾದು ಹೋಗುತ್ತಿರುವ ಕಾರಣದಿಂದ ಜನವರಿ 20ರಂದು ಕೂಡ ರಾಜ್ಯದ ಈ ಕೆಳಕಂಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ:
- ಉತ್ತರ ಕನ್ನಡ
- ಉಡುಪಿ
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಚಾಮರಾಜನಗರ
- ಚಿಕ್ಕಬಳ್ಳಾಪುರ
- ಚಿಕ್ಕಮಗಳೂರು
- ಚಿತ್ರದುರ್ಗ
- ದಾವಣಗೆರೆ
- ಹಾಸನ
- ಕೊಡಗು
- ಕೋಲಾರ
- ಮಂಡ್ಯ
- ಮೈಸೂರು
- ರಾಮನಗರ
ಇದನ್ನೂ ಓದಿ: Karnataka Animal Husbandry Subsidy Schemes : ಪಶುಪಾಲನಾ ಇಲಾಖೆ ಸಬ್ಸಿಡಿ ಯೋಜನೆಗಳು
ಮಾವು, ಗೇರು ರೈತರಿಗೆ ಸಂಕಷ್ಟ
ಚಳಿಗಾಲದಲ್ಲಿ ಸುರಿಯುತ್ತಿರುವ ಅನಿರೀಕ್ಷಿತ ಮಳೆಯಿಂದ ಕೆಲವು ರೈತರು ಸಂಕಷ್ಟ ಎದುರಿಸುವಂತಾಗಿದೆ. ಇದು ಮಾವು, ಗೇರು ಹೂ ಬಿಡುವ ಸಮಯವಾಗಿದ್ದು; ಅನಿರೀಕ್ಷಿತ ಮಳೆಯಿಂದಾಗಿ ಇಳುವರಿ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಭವವಿದೆ.
ವಿಶೇಷವೆAದರೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ತುಸು ಹೆಚ್ಚಿನ ಮಳೆ ಆಗಿರುವುದರಿಂದ ಹೂ, ಹಣ್ಣು, ತರಕಾರಿ ಬೆಳೆಗಳಿಗೂ ಹಾನಿ ಉಂಟಾಗಲಿದೆ. ಇದರಿಂದ ಈಗಾಗಲೇ ತರಕಾರಿ ಮತ್ತು ಹೂವಿನ ದರ ಏರಿಕೆಯಾಗಿದ್ದು; ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
E-Swathu : ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ?