ಹವಾಮಾನ

Rain Information 2024 : ಮಾರ್ಚ್’ನಿಂದ ಮೇ ವರೆಗೂ ರಣ ಬಿಸಿಲು; ಜೂನ್‌ನಿಂದ ಭರ್ಜರಿ ಮುಂಗಾರು ಮಳೆ | ಸಿಹಿಕಹಿ ಸುದ್ದಿಕೊಟ್ಟ ಹವಾಮಾನ ಇಲಾಖೆ

WhatsApp Group Join Now
Telegram Group Join Now

Rain Information 2024 : ಬರದಿಂದ ಕಂಗೆಟ್ಟಿರುವ ರೈತರಿಗೆ ಭಾರತೀಯ ಹವಾಮಾನ ಇಲಾಖೆ (Indian Meteorological Department – IMD) ಸಿಹಿಸುದ್ದಿ ನೀಡಿದೆ. ಕಳೆದ ವರ್ಷ (2023) ಕೈ ಕೊಟ್ಟಿದ್ದ ಮುಂಗಾರು ಈ ಬಾರಿ ಕೈಹಿಡಿಯಲಿದ್ದು; ಉತ್ತಮ ಮುಂಗಾರು ಮಳೆಯಾಗಲಿದೆ ಎಂಬ ಸಂದೇಶವನ್ನು ನೀಡಿದೆ. ಆದರೆ ಮಾರ್ಚ್ನಿಂದ ಏಪ್ರಿಲ್ ವರೆಗೂ ರಣಬಿಸಿಲು ಹೈರಾಣು ಮಾಡಲಿದೆ ಎಂಬ ಮಾಹಿತಿಯನ್ನೂ ಕೂಡ ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ: Free Horticulture training with stipend : ರೈತರಿಗೆ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ತರಬೇತಿ ಜೊತೆಗೆ ₹17,500 ಶಿಷ್ಯವೇತನ

ಈ ವರ್ಷ ಉತ್ತಮ ಮುಂಗಾರು

ಕಳೆದ ವರ್ಷ ತಡವಾಗಿ ಆಗಮಿಸಿದ್ದ ಮುಂಗಾರು ಮಳೆ (Monsoon rain) ರೈತರ ನಿರೀಕ್ಷೆಗಳನ್ನು ಬುಡಮೇಲು ಮಾಡಿ ದಟ್ಟ ಬರಗಾಲ ಉಳಿಸಿ ಹೋಗಿದೆ. ಜೂನ್ 1ರಿಂದ ಸೆಪ್ಟೆಂಬರ್ 30ರ ವರೆಗಿನ ನಾಲ್ಕು ತಿಂಗಳುಗಳ ಕಾಲ ಮುಂಗಾರು ಹುಟ್ಟಿಸಿದ ಹತಾಶೆ ಸಣ್ಣದೇನಲ್ಲ. ಆದರೆ, ಈ ವರ್ಷದ ಮಾನ್ಸೂನ್ ಸಮಯದಲ್ಲಿ, ದೇಶದಾದ್ಯಂತ ಭಾರಿ ಮಳೆಯಾಗುತ್ತದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ (Dr Mrutyunjay Mohapatra) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಜೂನ್​ನಿಂದ ಆರಂಭವಾಗುವ ಮುಂಗಾರು ಮಳೆ ದೇಶದಾದ್ಯಂತ ಉತ್ತಮ ರೀತಿಯಲ್ಲಿ ಸುರಿಯಲಿದೆ. ಮೇ ತಿಂಗಳ ನಂತರ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ (El Nino) ಮತ್ತು ಲಾ ನಿನಾ ಪರಿಸ್ಥಿತಿಗಳ ಪ್ರಭಾವ ಕಡಿಮೆಯಾಗಲಿದೆ ಎಂದು ಐಎಂಡಿ ಪ್ರಕಟಿಸಿದೆ.

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್ ಲಿಂಕ್ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ಮಾರ್ಚ್’ನಿಂದ ಮೇ ವರೆಗೂ ರಣ ಬಿಸಿಲು

ಇನ್ನೊಂದೆಡೆ ಈ ಬಾರಿ ದೇಶಾದ್ಯಂತ ರಣ ಬಿಸಿಲು ಆವರಿಸಲಿದ್ದು; ಮಾರ್ಚ್’ನಿಂದ ಮೇ ತಿಂಗಳ ವರೆಗೆ ಬೇಸಿಗೆಯ ಸೆಕೆ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ವರ್ಷದ ಫೆಬ್ರವರಿ ತಿಂಗಳು 1901ರ ನಂತರದ ಎರಡನೇ ಅತಿ ಹೆಚ್ಚು ಶಾಖ ಬೀರಿದ ತಿಂಗಳಾಗಿತ್ತು ಎಂದು ಪರಿಗಣಿಸಲಾಗಿದೆ.

ಸಾಮಾನ್ಯವಾಗಿ ಮಾರ್ಚ್’ನಲ್ಲಿ ತಾಪಮಾನ ಉಗ್ರ ಸ್ವರೂಪದಲ್ಲಿರುತ್ತದೆ. ಹೆಚ್ಚು ಉಷ್ಣಾಂಶ (High temperature) ಕಂಡು ಬರುವ ಕೆಲವು ಪ್ರದೇಶಗಳಲ್ಲಿ ಮಳೆ ಕೂಡ ಬರುತ್ತದೆ. ಎಲ್-ನಿನೊ ಪರಿಣಾಮದಿಂದ ಬಿಸಿ ಮಾರುತುಗಳು ಅಪ್ಪಳಿಸುತ್ತವೆ. ಮುಂಬರುವ ದಿನಗಳಲ್ಲಿ ಸೆಕೆಯು ಜನರನ್ನು ಹೈರಾಣು ಮಾಡಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Heat Waves : ಕರ್ನಾಟಕದಲ್ಲಿ ‘ಶಾಖದ ಅಲೆ’ ಮುನ್ಸೂಚನೆ : ಹೇಗಿರಲಿವೆ ಮುಂದಿನ ದಿನಗಳು?

ತೋಟಗಾರಿಕೆ ಬೆಳೆಗಳಿಗೆ ಹಾನಿ

ಈ ಮಾರ್ಚ್ ತಿಂಗಳಿನಲ್ಲಿ ಕಂಡು ಬರುವ ವಿಪತರೀತ ಬಿಸಿಯ ವಾತಾವರಣ ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊಯ್ಲಿಗೆ ಬರುವ ಬೆಳೆಗಳಿಗೆ ಹಾನಿ ಉಂಟು ಮಾಡುತ್ತದೆ. ಅಡಿಕೆಯಂತಹ ಬಹುವಾರ್ಷಿಕ ಬೆಳೆಗಳ ಮೇಲೆ ಈ ಬಿಸಿಲು ಕಡುಕೆಟ್ಟ ಪರಿಣಾಮ ಬೀರಲಿದ್ದು; ಬಿಸಿಲು ತಾಪದಿಂದ ತೋಟ ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಬಹುದು.

ಮುಂದಿನ ನಾಲ್ಕು ತಿಂಗಳಲ್ಲಿ ಉತ್ತರ ಕರ್ನಾಟಕದ ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೀದರ್, ಗದಗ ಜಿಲ್ಲೆಗಳು ಹಾಗೂ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಒಡಿಶಾದ ಅನೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆ. ಇದು ಸಾರ್ವಜನಿಕರ ಆರೋಗ್ಯ ಮತ್ತು ಕೃಷಿಯ ಮೇಲೆ ಕಟ್ಟ ಪರಿಣಾಮ ಬೀರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Rain forecast : ಬರಗಾಲ ಮುಕ್ತಾಯ ಜೂನ್’ನಿಂದ ಉತ್ತಮ ಮುಂಗಾರು | ಈ ವರ್ಷದ ಮಳೆ ಭರವಸೆ ನೀಡಿದ ಹವಾಮಾನ ಇಲಾಖೆ

PM Surya Ghar Muft Bijli Jojana 2024 : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

WhatsApp Group Join Now
Telegram Group Join Now

Related Posts

error: Content is protected !!