ಉದ್ಯೋಗ

RDPR Recruitment 2024 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ | ಸಂಬಳ : ₹61,500 | Panchayat Raj fellowship recruitment

WhatsApp Group Join Now
Telegram Group Join Now

RDPR Recruitment 2024

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ‘ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್’ ಕಾರ್ಯಕ್ರಮದ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಕಲ್ಯಾಣ ಕರ್ನಾಟಕ ಭಾಗದ 07 ಜಿಲ್ಲೆಗಳ ಪ್ರತಿ ತಾಲ್ಲೂಕಿಗೆ ಒಬ್ಬರನ್ನು ನಿಯುಕ್ತಿಗೊಳಿಸಲು ಅರ್ಹ ಮತ್ತು ಅನುಭವ ಹೊಂದಿರುವ ಯುವ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅಧಿಕೃತ ಅಧಿಸೂಚನೆ, ಅರ್ಹತೆ, ವಿದ್ಯಾರ್ಹತೆ ಸೇರಿದಂತೆ ಇತರೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ..

ಇದನ್ನೂ ಓದಿ: WCD Karnataka Anganwadi Recruitment 2024 : ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

RDPR Recruitment 2024 ನೇಮಕಾತಿ ಸಂಕ್ಷಿಪ್ತ ವಿವರ

  • ನೇಮಕಾತಿ ಇಲಾಖೆ : ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಖಾಲಿ ಹುದ್ದೆಗಳ ಸಂಖ್ಯೆ : 51
  • ಹುದ್ದೆಗಳ ಹೆಸರು : ಫೆಲೋ
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಕರ್ನಾಟಕ ಭಾಗದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು

ಇದನ್ನೂ ಓದಿ: HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

ಅರ್ಹತೆಗಳೇನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಾಮಾಜಿಕ ವಿಜ್ಞಾನ ವಿಷಯಗಳಾದ ಸಮಾಜಶಾಸ್ತ್ರ ಅಥವಾ ಅರ್ಥಶಾಸ್ತ್ರ ಅಥವಾ ಗ್ರಾಮೀಣಾಭಿವೃದ್ಧಿ ಅಥವಾ ಸಮಾಜ ಕಾರ್ಯ ಅಥವಾ ಸಾರ್ವಜನಿಕ ನೀತಿ ವಿಷಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

ಶೈಕ್ಷಣಿಕ ವಿದ್ಯಾರ್ಹತೆಯೊಂದಿಗೆ ನೇಮಕಾತಿಯಲ್ಲಿ ಸ್ನಾತಕೋತ್ತರ ಪದವೀಧರರು ಅಭಿವೃದ್ಧಿ ವಲಯದಲ್ಲಿ ಕನಿಷ್ಠ 1-2 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿದ್ದಲ್ಲಿ ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು. ಗ್ರಾಮೀಣಾಭಿವೃದ್ಧಿಯಲ್ಲಿ ಕ್ಷೇತ್ರಮಟ್ಟದ ಅನುಭವ ಹೊಂದಿದ್ದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

ಕ್ಷೇತ್ರ ಮಟ್ಟದ ಅನುಭವ ಹೊಂದಿರುವ ಸ್ನಾತಕೋತ್ತರ ಪದವೀಧರರನ್ನು ಕಾರ್ಯಕ್ಷಮತೆ ಮೌಲ್ಯಮಾಪನಕ್ಕೆ ಒಳಪಟ್ಟು ಆದ್ಯತೆ ನೀಡಲಾಗುವುದು. ಜೊತೆಗೆ M.Phil ಅಥವಾ Ph.D ಉನ್ನತ ವಿದ್ಯಾರ್ಹತೆ ಅಪೇಕ್ಷಣೀಯವಾಗಿದ್ದು, ಹೆಚ್ಚುವರಿ Weightage ಅನ್ನು ನೀಡಲಾಗುವುದು.

ವಯೋಮಿತಿ : RDPR Recruitment 2024 ಫೇಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ಕನಿಷ್ಠ ವಯಸ್ಸು ನೇಮಕಾತಿಯ ಅಧಿಸೂಚನೆಯ ನಿಯಮಗಳ ಪ್ರಕಾರ ಇರಬೇಕು ಹಾಗೂ ಗರಿಷ್ಠ ವಯೋಮಿತಿ 32 ವರ್ಷ ಮೀರಿರಬಾರದು.

ಇದನ್ನೂ ಓದಿ: Rajiv Gandhi Housing Scheme 2024 : ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ | ರಾಜೀವ್ ಗಾಂಧಿ ವಸತಿ ನಿಗಮದಿಂದ ಅರ್ಜಿ ಆಹ್ವಾನ

ಮಾಸಿಕ ಸಂಬಳ : ಫೇಲೋ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಮಾಸಿಕ ಸಂಬಳವು 60,000 ರೂಪಾಯಿ ಇರುತ್ತದೆ ಮತ್ತು ಸಂಬಳದ ಜೊತೆಗೆ ಗ್ರಾಮ ಪಂಚಾಯಿತಿಗಳಿಗೆ ಪ್ರಯಾಣ ಮಾಡಲು ಪ್ರತಿ ತಿಂಗಳು 1500 ರೂಪಾಯಿಯ ಪ್ರಯಾಣ ಭತ್ಯೆಯನ್ನು ಕೂಡ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಫೆಲೋ ನೇಮಕಾತಿ ಮಾಡಿಕೊಳ್ಳಲು ಮೊದಲು ಮೆರಿಟ್ ಕಮ್ ಅಪ್ಟಿಟ್ಯೂಡ್ ಮೌಲ್ಯಮಾಪನ ನಡೆಸಲಾಗುತ್ತದೆ. ನಂತರದಲ್ಲಿ ಲಿಖಿತ ಪರೀಕ್ಷೆ ನಡೆಸಿ ಅರ್ಹರಾದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಇದನ್ನೂ ಓದಿ: NLM Scheme Loan : ಕುರಿ-ಮೇಕೆ, ಕೋಳಿ, ಹಂದಿ ಸಾಕಾಣೆಗೆ ₹20 ಲಕ್ಷದಿಂದ ₹1 ಕೋಟಿ ಸಾಲ ಸೌಲಭ್ಯ | ಸಾಲದ ಅರ್ಧ ಭಾಗ ಸಬ್ಸಿಡಿ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 22-01-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05-02-2024

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ : Click here
ಅಧಿಸೂಚನೆ : Download
ಸಹಾಯವಾಣಿ : 9740790530

Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

WhatsApp Group Join Now
Telegram Group Join Now

Related Posts

error: Content is protected !!