ರೈಲ್ವೆ ನೇಮಕಾತಿ ಮಂಡಳಿಯು (Railway Recruitment Board) ಬಹು ನಿರೀಕ್ಷಿತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಭಾರಿ ಪ್ರಮಾಣದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಹುಬ್ಬಳ್ಳಿಯ ನೈಋತ್ಯ ವಲಯವೂ (Hubli South West Zone) ಸೇರಿದಂತೆ ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಒಟ್ಟು 32,438 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದಲ್ಲಿ 503 ಹುದ್ದೆಗಳನ್ನು ಮೀಸಲಿರಿಸಿದೆ. ರೈಲ್ವೆಯ ವಿವಿಧ ವಿಭಾಗಗಳು, ವರ್ಕ್ಶಾಪ್ಗಳಲ್ಲಿ ಸಹಾಯಕ, ಟ್ರ್ಯಾಕ್ ನಿರ್ವಹಣೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಎಸ್ಎಸ್ಎಲ್ಸಿ ಅಥವಾ ಐಟಿಐ ಉತ್ತೀರ್ಣರಾದವರುವ ಈ ಅವಕಾಶ ಬಳಸಿಕೊಳ್ಳಬಹುದು.
ಇದನ್ನೂ ಓದಿ: UPI Payment Advice : ಗೂಗಲ್ ಪೇ, ಫೋನ್ ಪೇ ಬಳಸುವವರಿಗೆ ಸೈಬರ್ ಕ್ರೈಂ ಪೊಲೀಸರಿಂದ ಎಚ್ಚರಿಕೆ
ಹುಬ್ಬಳ್ಳಿಯ ನೈಋತ್ಯ ವಲಯ ಹುದ್ದೆಗಳ ವಿವರ
- ಟ್ರ್ಯಾಕ್ ಮೆಂಟೇನೆನ್ಸ್ (ಗ್ರೇಡ್-4) : 226
- ಅಸಿಸ್ಟೆಂಟ್ ಪಾಯಿಂಟ್ಸ್ಮೆನ್ ಬಿ : 165
- ಅಸಿಸ್ಟೆಂಟ್ ಸಿಗ್ನಲ್ ಆ್ಯಂಡ್ ಟೆಲಿಕಾಮ್ : 11
- ಅಸಿಸ್ಟೆಂಟ್ ವರ್ಕ್ಶಾಪ್ ಮೆಕಾನಿಕಲ್ : 34
- ಅಸಿಸ್ಟೆಂಟ್ ಕ್ಯಾರಿಯೇಜ್ ಆ್ಯಂಡ್ ವ್ಯಾಗನ್ : 13
- ಅಸಿಸ್ಟೆಂಟ್ ಲೋಕೋ ಶೆಡ್ (ಡೀಸೆಲ್, ಎಲೆಕ್ಟಿಕಲ್) : 14
- ಅಸಿಸ್ಟೆಂಟ್ ಆಪರೇಷನ್ (ಎಲೆಕ್ಟಿಕಲ್) : 09
- ಅಸಿಸ್ಟೆಂಟ್ ಟ್ರೇಡ್ : 10
ಮೇಲ್ಕಾಣಿಸಿದ ಹುದ್ದೆಗಳಲ್ಲದೆ ಅಸಿಸ್ಟೆಂಟ್ ಬ್ರಿಜ್, ಅಸಿಸ್ಟೆಂಟ್ ಟಿಎಲ್ ಆ್ಯಂಡ್ ಎಸಿ ಮತ್ತು ವರ್ಕ್ಶಾಪ್ ಮೊದಲಾದ ಹುದ್ದೆಗಳು ಸೇರಿ ಒಟ್ಟು 503 ಹುದ್ದೆಗಳಿವೆ.
ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ
ವಿದ್ಯಾರ್ಹತೆ ವಿವರ
ಈ ಹುದ್ದೆಗಳಿಗೆ ಮೊದಲು ಎಸ್ಎಸ್ಎಲ್ಸಿ ಜತೆಗೆ ಇತರ ವಿದ್ಯಾರ್ಹತೆಗಳನ್ನು ನಿಗದಿ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಎಸ್ಎಸ್ಎಲ್ಸಿ ಪಾಸಾಗಿದ್ದರೆ ಸಾಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಅಥವಾ ಆಯಾ ಐಟಿಐ ಪೂರೈಸಿರಬೇಕು ಅಥವಾ ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿಯಿ೦ದ ಪ್ರಮಾಣಪತ್ರ ಪಡೆದಿರಬೇಕು ಅಥವಾ ರಾಷ್ಟ್ರೀಯ. ಅಫ್ರೆಂಟೀಸ್ಶಿಪ್ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ ಎಷ್ಟಿರಬೇಕು?
ಈ ನೇಮಕಾತಿಗೆ 2025ರ ಜನವರಿ 1ರ ದಿನವನ್ನು ಅನ್ವಯಿಸಿ ವಯೋಮಿತಿಯನ್ನು ನಿಗದಿ ಮಾಡಲಾಗುತ್ತಿದ್ದು, 18 ರಿಂದ 36 ವರ್ಷದೊಳಗಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಒಂದು ಬಾರಿಯ ಕ್ರಮವಾಗಿ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ವಿನಾಯ್ತಿಯನ್ನು ಒದಗಿಸಲಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: UCO Bank Recruitment 2025 : ಯುಕೋ ಬ್ಯಾಂಕ್ ನೇಮಕಾತಿ
ಕನ್ನಡದಲ್ಲೇ ಪರೀಕ್ಷೆ ಬರೆಯಿರಿ
ಕನ್ನಡ ಸೇರಿ ಆಯಾ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು. ಒಟ್ಟು ನೂರು ಅಂಕಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯ ವಿಜ್ಞಾನ, ಗಣಿತಕ್ಕೆ ತಲಾ 25 ಅಂಕ, ಸಾಮಾನ್ಯ ಬುದ್ಧಿಮತ್ತೆ ಹಾಗೂ ರೀಸನಿಂಗ್ 30, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಶ್ನೆಗಳಿಗೆ 20 ಅಂಕಗಳು ಇರಲಿವೆ. ಸಾಮಾನ್ಯ ಅಭ್ಯರ್ಥಿಗಳಿಗೆ 90 ನಿಮಿಷ ಅಂಗವಿಕಲರಿಗೆ 120 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ತಪ್ಪು ಉತ್ತರಗಳಿಗೆ 1/3 ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ.
ವೇತನವೆಷ್ಟು?
ವೇತನ ಆಯೋಗದ ಒಂದನೇ ಹಂತದ ವೇತನಶ್ರೇಣಿಯ ವಿವಿಧ ಹುದ್ದೆಗಳು ಇವಾಗಿದ್ದು; ಈ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಆರಂಭಿಕ ವೇತನ 18,000 ಇರಲಿದ್ದು, ಇತರ ಭತ್ಯೆ ಹಾಗೂ ಸೌಲಭ್ಯಗಳು ಅನ್ವಯಿಸಲಿವೆ.
ಇದನ್ನೂ ಓದಿ: Supreme Court Recruitment 2025 : ಸುಪ್ರೀಂ ಕೋರ್ಟ್ 90 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ದೈಹಿಕ ಸಹಿಷ್ಣುತೆ ಪರೀಕ್ಷೆ
ಪುರುಷರು 35 ಕೆಜಿ ಭಾರ ಹೊತ್ತು 100 ಮೀಟರ್ ದೂರವನ್ನು 2 ನಿಮಿಷಗಳಲ್ಲಿ ಕ್ರಮಿಸಬೇಕಿದೆ. 1,000 ಮೀಟರ್ ದೂರದ ಓಟವನ್ನು 4 ನಿಮಿಷ 15 ಸೆಕೆಂಡುಗಳಲ್ಲಿ ಒಂದೇ ಪ್ರಯತ್ನದಲ್ಲಿ ಓಡಬೇಕು. ಇನ್ನು ಮಹಿಳೆಯರು 20 ಕೆಜಿ ಭಾರವನ್ನು ಹೊತ್ತು 100 ಮೀಟರ್ 2 ನಿಮಿಷಗಳಲ್ಲಿ ಸಾಗಬೇಕು. 1,000 ಮೀಟರ್ ದೂರವನ್ನು 5 ನಿಮಿಷ 40 ಸೆಕೆಂಡುಗಳಲ್ಲಿ ಓಡಬೇಕು.
ಅರ್ಜಿ ಶುಲ್ಕವೆಷ್ಟು?
ಪರಿಶಿಷ್ಟರು, ಅಂಗವಿಕಲರು, ಮಹಿಳೆಯರು, ಮಾಜಿ ಸೈನಿಕರಿಗೆ 250 ರೂ. ಅರ್ಜಿ ಶುಲ್ಕ ಇರಲಿದೆ. ಉಳಿದವರು 500 ರೂ. ಪಾವತಿಸಬೇಕಿದ್ದು, ಪರೀಕ್ಷೆಗೆ ಹಾಜರಾದಲ್ಲಿ 400 ರೂ. ಗಳನ್ನು ಮರಳಿಸಲಾಗುತ್ತದೆ. 250ರೂ. ಪಾವತಿಸಿದವರಿಗೆ ಪೂರ್ಣ ಮೊತ್ತ ಹಿಂದಿರುಗಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-02-2025
ಅಧಿಸೂಚನೆ : Download
ಹೆಚ್ಚಿನ ಮಾಹಿತಿಗೆ : Click Here
rashmipa2003@gmail. Com