ಸರಕಾರಿ ಯೋಜನೆ

RTC aadhar card link : ರೈತರ ಮನೆ ಬಾಗಿಲಲ್ಲೇ ಪಹಣಿಗೆ ಆಧಾರ್ ಕಾರ್ಡ್ ಜೋಡಣೆ | ಕಂದಾಯ ಸಚಿವರ ಸೂಚನೆ

WhatsApp Group Join Now
Telegram Group Join Now

RTC aadhar card link : ಕಂದಾಯ ಇಲಾಖೆಯು ರೈತರ ಜಮೀನು ಪಹಣಿಗೆ ಆಧಾರ್ ಕಾರ್ಡ್ ಲಿಂಕ್ (RTC aadhar card link) ಮಾಡುವ ಪ್ರಕ್ರಿಯೆಯನ್ನು ಅಭಿಯಾನದ ರೀತಿಯಲ್ಲಿ ಕೈಗೊಂಡಿದೆ. ಈ ಮೊದಲು ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು; ನಿನ್ನೆಯಿಂದ ಅಂದರೆ ಮಾರ್ಚ್ 12ರಿಂದ ರಾಜ್ಯಾದ್ಯಂತ ಜಾರಿಗೊಳಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byregowda) ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು ಕಂದಾಯ ಇಲಾಖೆಯನ್ನು ಆಧುನೀಕರಣ ಮಾಡಬೇಕು, ಬೆರಳ ತುದಿಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸುಧಾರಣೆ ಮಾಡಲಾಗುತ್ತಿದೆ. ಇದರ ಭಾಗವಾಗಿ ಪಹಣಿಗಳಿಗೆ ಆಧಾರ್ ಜೋಡಣೆಗೆ ಚಾಲನೆ ನೀಡಲಾಗಿದೆ. ‘ನನ್ನ ಆಸ್ತಿ’ (Nanna Aasti) ಯೋಜನೆಯಡಿ ‘ನನ್ನ ಆಸ್ತಿ ನನ್ನ ಗುರುತು’ ಎಂಬ ಉದ್ದೇಶದಿಂದ ಈ ಮಹತ್ವದ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: Free fodder distribution to dairy farmers : ಹೈನು ರೈತರಿಗೆ ಉಚಿತ ಮೇವು ಕಿಟ್ ವಿತರಣೆ | ಯಾವೆಲ್ಲ ರೈತರಿಗೆ ಸಿಗಲಿದೆ?

ಪಹಣಿ-ಆಧಾರ್ ಜೋಡಣೆ ಕಡ್ಡಾಯ

ಹಾಗೇ ನೋಡಿದರೆ ರೈತರ ಜಮೀನು ಆರ್‌ಟಿಸಿಗೆ ಆಧಾರ್ ಸಂಖ್ಯೆ ಜೋಡಿಸುವ ಕಾರ್ಯಕ್ಕೆ 7 ವರ್ಷದ ಹಿಂದೆಯೇ ಸರಕಾರ ಚಾಲನೆ ನೀಡಿತ್ತು. ಆಗ ಬಹಳಷ್ಟು ರೈತರು ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಿದ್ದರು. ಇದೀಗ ಮತ್ತೆ ಆರ್‌ಟಿಸಿ ದಾಖಲೆಗೆ ರೈತರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಲೇಬೇಕು ಎಂಬ ಆದೇಶವನ್ನು ಸರಕಾರ ಹೊರಡಿಸಿದೆ.

ಕಳೆದ ಫೆಬ್ರವರಿ 12, 2024ರಂದು ಆರ್‌ಟಿಸಿ ದಾಖಲೆಗೆ ಆಧಾರ್ ಸಂಖ್ಯೆ ಜೋಡಿಸುವ ಕುರಿತಂತೆ ಸರಕಾರ ಆದೇಶ ಹೊರಡಿಸಿತ್ತು. ಬಹಳಷ್ಟು ರೈತರು ಆನ್‌ಲೈನ್‌ನಲ್ಲಿ ಆಧಾರ್ ಜೋಡಣೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ತಾಂತ್ರಿಕ ದೋಷದಿಂದಾಗಿ ಬಹಳಷ್ಟು ರೈತರಿಗೆ ಆರ್‌ಟಿಸಿ-ಆಧಾರ್ ಜೋಡಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾರ್ಚ್ 12ರಿಂದ ಮನೆ ಬಾಗಿಲಿಗೇ ಆಧಾರ್ ಜೋಡಣೆ ಕಾರ್ಯ ಆರಂಭಿಸಲಾಗಿದೆ.

ಇದನ್ನೂ ಓದಿ: Kisan Vikas Patra – KVP : ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ

ಮನೆ ಬಾಗಿಲಲ್ಲೇ ಪಹಣಿ-ಆಧಾರ್ ಜೋಡಣೆ

ಈಗಾಗಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆ ಸಹಾಯಧನ ಪಡೆಯಲು ಫ್ರೂಟ್ ತಂತ್ರಾ೦ಶ ಅನುಷ್ಠಾನಗೊಂಡಿದೆ. ರಾಜ್ಯದ ಬಹಳಷ್ಟು ರೈತರು ಆಧಾರ್ ಸಂಖ್ಯೆಯನ್ನು ಫ್ರೂಟ್ ತಂತ್ರಾ೦ಶಕ್ಕೆ ಜೋಡಿಸಿದ್ದಾರೆ. ಈಗ ಕಂದಾಯ ಇಲಾಖೆಯ ತಂತ್ರಾAಶಕ್ಕೆ ಆಧಾರ್ ಸಂಖ್ಯೆ ಜೋಡಿಸುವಂತೆ ಸರಕಾರ ಪ್ರತ್ಯೇಕ ಸೂಚನೆ ನೀಡಿದೆ.

ರೈತರ ಮನೆ ಮನೆಗೆ ಗ್ರಾಮಾಧಿಕಾರಿಗಳೇ ಹೋಗಿ ಪಹಣಿ-ಆಧಾರ್ ಜೋಡಣೆ ಮಾಡುತ್ತಾರೆ. ರೈತರು ಕೂಡ ಕಂದಾಯ ಕಚೇರಿಗೆ ತೆರಳಿ ಪಹಣಿ-ಆಧಾರ್ ಜೋಡಣೆ ಮಾಡಿಸಬಹುದು. ಲೋಕಸಭಾ ಚುನಾವಣೆ ಘೋಷಣೆಯಾದರೂ ಸಹ ಆಧಾರ್ ಜೋಡಣೆ ಕಾರ್ಯ ಮಾಡಬೇಕು ಎಂದು ಗ್ರಾಮಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Panchamitra whatsapp Chat Service : ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

ಅಕ್ರಮಗಳಿಗೆ ಬೀಳಲಿದೆ ಕಡಿವಾಣ

ಈಗಾಗಲೇ ಗ್ರಾಮಾಧಿಕಾರಿಗಳು (Village officials) ಆರ್‌ಟಿಸಿ-ಆಧಾರ್ ಜೋಡಣೆ ಸಂಬ೦ಧ 19 ಲಕ್ಷ ರೈತರನ್ನು ಸಂಪರ್ಕಿಸಿದ್ದಾರೆ. ಅದರಲ್ಲಿ 6 ಲಕ್ಷ ಪಹಣಿದಾರರು ಸಾವನ್ನಪ್ಪಿದ್ದಾರೆ. ಹೀಗೆ ಮೃತಪಟ್ಟವರ ಹೆಸರಿನಲ್ಲಿ ಪಹಣಿಗಳಿದ್ದರೆ ದುರಪಯೋಗವಾಗುವ ಸಾಧ್ಯತೆಗಳಿವೆ. ಹೀಗಾಗಿ ಆಧಾರ್ ಜೋಡಣೆ ಅನಿವಾರ್ಯವಾಗಿದೆ. ಇದರಿಂದ ಯಾರದ್ದೋ ಆಸ್ತಿ ಇನ್ನಾರದೋ ಹೆಸರಿಗೆ ನೋಂದಣಿ ಆಗುವ ಅಕ್ರಮಗಳಿಗೆ ಕಡಿವಾಣ ಹಾಕಬಹುದು.

ಆಸ್ತಿಗಳ ನೋಂದಣಿ ಸಮಯದಲ್ಲೂ ಕೂಡ ಆಧಾರ್ ಕಡ್ಡಾಯವಾಗಿ ಕೇಳಲಾಗುತ್ತದೆ. ಆಗ ಆಧಾರ್ ಸಂಖ್ಯೆ ಕೊಡದಿದ್ದರೆ ಅದು ಅನುಮಾನಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಖಚಿತವಾಗಿ ಆಧಾರ್ ಸಂಖ್ಯೆ ಪಡೆದು ನೋಂದಣಿ ಮಾಡಿದರೆ ಭೂ ಅಕ್ರಮಗಳನ್ನು ತಡೆದಂತಾಗುತ್ತದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Free Horticulture training with stipend : ರೈತರಿಗೆ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ತರಬೇತಿ ಜೊತೆಗೆ ₹17,500 ಶಿಷ್ಯವೇತನ

ಪಹಣಿಯಲ್ಲಿ ಮಹತ್ತರ ಬದಲಾವಣೆ

ಇನ್ಮುಂದೆ ಸಣ್ಣಪುಟ್ಟ ಬದಲಾವಣೆಗಳೆಲ್ಲವೂ ಸ್ವಯಂಚಾಲಿತವಾಗಿ ಪಹಣಿಯಲ್ಲಿ ದಾಖಲಾಲಿವೆ. ಇದಕ್ಕಾಗಿ ಗ್ರಾಮಾಧಿಕಾರಿಗಳು ಧೃಢೀಕರಣ (ಥಂಬ್ ಕೊಡುವುದು) ಮಾಡುವುದು ಅಗತ್ಯವಿಲ್ಲ ಎಂದು ಕಂದಾಯ ಸಚಿವರು ಹೇಳಿದರು. ಅಂದರೆ ರೈತರು ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ, ಸಾಲ ತೀರುವಳಿಯಾದರೆ, ವಿಭಾಗ ಮಾಡಕೊಂಡರೆ, ಆಸ್ತಿಯನ್ನು ಅಡಮಾನ ಇಟ್ಟರೆ, ಎಸಿ ನ್ಯಾಯಾಲಯದ ಆದೇಶಗಳಾಗಿದ್ದರೆ ಹೀಗೆ ಸಣ್ಣಪುಟ್ಟ ಬದಲಾವಣೆಗಳು ಪಹಣಿಯಲ್ಲಿ ಸ್ವಯಂಚಾಲಿತವಾಗಿ ದಾಖಲಾಗುತ್ತವೆ. ಇದಕ್ಕಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ರೈತರ ಸಮಯ, ಅಧಿಕಾರಿಗಳ ಸಮಯ ಉಳಿತಾಯ ಆಗುವುದರ ಜೊತೆಗೆ ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳಲಿದೆ.

ಈಗಾಗಲೇ 14,21,116 ಪಹಣಿಗಳಲ್ಲಿ ಈ ರೀತಿ ಸ್ವಯಂಚಾಲಿತ ದಾಖಲೀಕರಣ ಮಾಡಲಾಗಿದೆ. ಇದರಲ್ಲಿ ಶೇ.72ರಷ್ಟು ಸ್ವಯಂ ಚಾಲಿತ ಮಾಡಿದರೆ, ಉಳಿದ ಶೇ.28ರಷ್ಟು ಪ್ರಕರಣಗಳ ಪಹಣಿಗಳನ್ನು ಹಳೆಯ ವ್ಯವಸ್ಥೆಯಲ್ಲಿ ಉಳಿಸಿಕೊಳ್ಳಲಾಗಿದೆ. ಕಾರಣ ಹಕ್ಕು ಬದಲಾವಣೆ, ಇಂಡೀಕರಣ, ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ಇರುವಂತಹ ಪ್ರಕರಣಗಳಲ್ಲಿ 15 ದಿನಗಳ ಕಾಲ ಆಕ್ಷೇಪಣೆಗೆ ಕಾಲಾವಕಾಶ ಒದಗಿಸಿ ಆ ಬಳಿಕ ದಾಖಲೀಕರಣ ಮಾಡಬೇಕಾಗಿರುತ್ತದೆ. ಪಹಣಿಗಳಿಗೆ ಆಧಾರ್ ಜೋಡಣೆ ಪೂರ್ಣಗೊಂಡ ಬಳಿಕ ಇವುಗಳನ್ನು ಸಹ ಆಟೋಮ್ಯೂಟೇಷನ್ (Automation) ವ್ಯಾಪ್ತಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Solar Agriculture Pumpset : ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಭಾಗ್ಯ | ಇಂಧನ ಇಲಾಖೆಗೆ ಬಜೆಟ್ ಕೊಡುಗೆ

WhatsApp Group Join Now
Telegram Group Join Now

Related Posts

error: Content is protected !!