ಸರಕಾರಿ ಯೋಜನೆ

RTC aadhar card link : ಜಮೀನು ಪಹಣಿಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್ ಲಿಂಕ್ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

WhatsApp Group Join Now
Telegram Group Join Now

RTC aadhar card link : ಜಮೀನ ಇರುವವರು ತಮ್ಮ ಉತಾರ ಅಥವಾ ಪಹಣಿಗಳಿಗೆ ಆಧಾರ್ ಕಾರ್ಡ್ ಲಿಂಕ್ (Aadhar card) ಮಾಡಿಸುವುದು ಕಡ್ಡಾಯ ಎಂದು ಕಂದಾಯ ಇಲಾಖೆ ಘೋಷಿಸಿದ್ದು, ನಿಮ್ಮ ಮೊಬೈಲ್‌ನಲ್ಲಿ ಆಧಾರ್ ಲಿಂಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಸರ್ಕಾರದಿಂದ ಜಮೀನಿಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳ ಲಾಭವನ್ನು ಪಡೆಯಲು ಮತ್ತು ರೈತರ ಜಮೀನಿನ ಸುರಕ್ಷತೆಗಾಗಿ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸುವುದನ್ನು ಕಂದಾಯ ಇಲಾಖೆಯು ಕಡ್ಡಾಯ ಮಾಡಿದೆ. ರೈತರ ಜಮೀನಿನ ಪಹಣಿ ಅಥವಾ ಉತಾರಗಳಿಗೆ ಆಧಾರ್ ಲಿಂಕ್ ಮಾಡಿಸುವುದು ಏಕೆ ಕಡ್ಡಾಯ? ಅದರಿಂದೇನು ಪ್ರಯೋಜನ? ಮತ್ತು ಮೊಬೈಲ್‌ನಲ್ಲಿ ಆಧಾರ್ ಲಿಂಕ್ ಮಾಡಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: BMTC Conductor recruitment 2024 : ಪಿಯುಸಿ ಪಾಸಾದವರಿಗೆ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಪಹಣಿ-ಆಧಾರ್ ಲಿಂಕ್ ಮಾಡುವುದರಿಂದೇನು ಪ್ರಯೋಜನ?

ರೈತರು ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಭೂ ವಂಚನೆಗಳಿ೦ದ ಪಾರಾಗಬಹುದು. ಜಮೀನು ಸಂಬಂಧಿತ ಎಲ್ಲ ರೀತಿಯ ಅಕ್ರಮಗಳಿಗೂ ಇದರಿಂದ ಕಡಿವಾಣ ಬೀಳುತ್ತದೆ. ಜಮೀನು ಮಾಲೀಕತ್ವ ಖಾತರಿಪಡಿಸಲು ಸಹಕಾರಿಯಾಗುತ್ತದೆ.

ಪಹಣಿ-ಆಧಾರ್ ಲಿಂಕ್ ಮಾಡುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಅನುಕೂಲವಾಗುತ್ತದೆ. ಸರ್ಕಾರ ಒದಗಿಸಿದ ಆಧಾರ್ ಆಧಾರಿತ ದತ್ತಾಂಶಗಳಿ೦ದ ಬರ ಪರಿಹಾರ ಸೇರಿದಂತೆ ಎಲ್ಲ ರೀತಿಯ ಬೆಳೆ ಪರಿಹಾರವನ್ನು ನೇರವಾಗಿ ಪಡೆಯಲು ಅನುಕೂಲವಾಗುತ್ತದೆ.

ಇದನ್ನೂ ಓದಿ: Karnataka Heat Waves : ಕರ್ನಾಟಕದಲ್ಲಿ ‘ಶಾಖದ ಅಲೆ’ ಮುನ್ಸೂಚನೆ : ಹೇಗಿರಲಿವೆ ಮುಂದಿನ ದಿನಗಳು?

ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸುವುದು ಹೇಗೆ?

ರೆಕಾರ್ಡ್ ಆಫ್ ರೈಟ್ಸ್ (RTC), ಟೆನನ್ಸಿ ಆಂಡ್ ಕ್ರಾಪ್ಸ್ (ಪಹಣಿ) ಇದನ್ನೇ ಉತಾರ, ಪಹಣಿ ಎಂದೂ ಸಹ ಕರೆಯಲಾಗುತ್ತದೆ. ಪಹಣಿಯಲ್ಲಿ ಜಮೀನು ಮಾಲೀಕರ ವಿವರ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವಾಧೀನದ ಸ್ವರೂಪ, ಋಣ, ಬೆಳೆದ ಬೆಳೆಗಳು ಮತ್ತು ಮುಂತಾದ ಮಾಹಿತಿಗಳಿರುತ್ತವೆ.

ರಾಜ್ಯ ಸರ್ಕಾರವು ರೈತರಿಗಾಗಿ ಒದಗಿಸುವ ಹಲವಾರು ಸೌಲಭ್ಯಗಳ ಲಾಭವನ್ನು ನಿಗದಿತ ಸಮಯದಲ್ಲಿ ಪಡೆಯಲು ಆಧಾರ್ ಕಾಯ್ದೆ ಕಲಂ 4 (4) ಬಿ (2) ಅಡಿಯಲ್ಲಿ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸುವುದನ್ನು ಕಡ್ಡಾಯ ಮಾಡಿ, ಆಧಾರ್ ಲಿಂಕ್ ಮಾಡಿಸಲು ಅನುಮತಿ ಕೂಡ ನೀಡಲಾಗಿದೆ.

ಇದನ್ನೂ ಓದಿ: Akrama Sakrama : ಸರಕಾರಿ ಜಾಗದಲ್ಲಿ ಕಟ್ಟಿದ ಅನಧಿಕೃತ ಮನೆಗಳು ಸಕ್ರಮ? ಕಂದಾಯ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

ಹೇಗೆಲ್ಲ ಲಿಂಕ್ ಮಾಡಬಹುದು?

ರೈತರು ತಮ್ಮ ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಅನ್ನು ಹಲವಾರು ವಿಧಾನದಲ್ಲಿ ಮಾಡಬಹುದಾಗಿದೆ. ಹತ್ತಿರವಿರುವ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಮಾಡಿಸಬಹುದು, ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಯವರಿಗೆ ಭೇಟಿ ನೀಡಿ ಕೂಡ ಪಹಣಿಗೆ ಆಧಾರ್ ಲಿಂಕ್ ಮಾಡಿಸಬಹುದು. ಮತ್ತೊಂದು ಸುಲಭ ಮತ್ತು ಸರಳ ವಿಧಾನವೆಂದರೆ ನಿಮ್ಮ ಮೊಬೈಲ್‌ನಲ್ಲಿ ನೀವೇ ಲಿಂಕ್ ಮಾಡಿಕೊಳ್ಳಬಹುದು.

ಮೊಬೈಲ್‌ನಲ್ಲಿ ಪಹಣಿಗೆ ಆಧಾರ್ ಲಿಂಕ್ ಮಾಡಿಸುವ ವಿಧಾನ

ಸ್ವಂತ ಜಮೀನು ಹೊಂದಿರುವ ರೈತರು ತಮ್ಮ ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸಲು ಕಂದಾಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆಧಾರ್ ಲಿಂಕ್ ಮಾಡಿಸಬಹುದು. ಪಹಣಿಗೆ ಆಧಾರ್ ಲಿಂಕ್ ಮಾಡಲು ಮೊದಲಿಗೆ 👉 ಇಲ್ಲಿ ಕ್ಲಿಕ್ ಮಾಡಿ…

ನಿಮಗೆ ಸರಕಾರದ ಅಧಿಕೃತ ‘ಭೂಮಿ ನಾಗರಿಕ ಸೇವೆಗಳು’ (Bhoomi Citizen Services) ವೆಬ್‌ಸೈಟ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚ ಕೋಡ್ ನಮೂದಿಸಿ ಸೆಂಡ್ ಓಟಿಪಿ (SEND OTP) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ನಂಬರಿಗೆ ಬರುವ ಆರು ಅಂಕಿಯ OTPಯನ್ನು ಎಂಟರ್ ಮಾಡಿ ಲಾಗಿನ್ ಎಂಬ ಆಯ್ಕೆ ನಮೂದಿಸಿ ಕ್ಲಿಕ್ ಮಾಡಿ.

ಇದನ್ನೂ ಓದಿ: Labour card Registration 2024 : ಲೇಬರ್ ಕಾರ್ಡ್ ನೋಂದಣಿ ಆರಂಭ | ಈ ಕಾರ್ಡ್ ಇದ್ರೆ ಕುಟುಂಬದ ಎಲ್ಲರಿಗೂ ಉಚಿತ ಸೌಲಭ್ಯ

ಮೊಬೈಲ್ ನಂಬರ್ ಬಳಸಿ ಲಾಗಿನ್ ಆದ ಬಳಿಕ ಹೊಸ ಪುಟ ತೆರೆದುಕೊಳ್ಳುತ್ತದೆ. ಹೊಸ ಪುಟದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ನಿಮ್ಮ ಆಧಾರ್ ಕಾರ್ಡ್’ನಲ್ಲಿರುವಂತೆ ನಿಮ್ಮ ಹೆಸರನ್ನು ಇಂಗ್ಲಿಷ್’ನಲ್ಲಿ ಟೈಪ್ ಮಾಡಿ ವೇರಿಫೈ (Verify) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಯಶಸ್ವಿಯಾಗಿ ಈ ಕೆಳಗಿನಂತೆ ಬರುತ್ತದೆ.

RTC ಆಧಾರ್ ಲಿಂಕ್ ಮಾಡುವ ಜಾಲತಾಣದ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Solar Agriculture Pumpset : ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಭಾಗ್ಯ | ಇಂಧನ ಇಲಾಖೆಗೆ ಬಜೆಟ್ ಕೊಡುಗೆ

PM Surya Ghar Muft Bijli Jojana 2024 : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

WhatsApp Group Join Now
Telegram Group Join Now

Related Posts

error: Content is protected !!