ಸರಕಾರಿ ಯೋಜನೆ

RTE facility for farmer children : ರೈತರ ಮಕ್ಕಳಿಗೆ ಶಾಲೆಗಳಲ್ಲಿ RTE ಉಚಿತ ಸೀಟು | ಶಿಕ್ಷಣ ಇಲಾಖೆ ಸುತ್ತೋಲೆ

WhatsApp Group Join Now
Telegram Group Join Now

RTE facility for farmer children : ಶಿಕ್ಷಣ ಹಕ್ಕು ಕಾಯ್ದೆ (Right To Education – RTE) ಮೂಲಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. 1 ರಿಂದ 8ನೇ ತರಗತಿ ವರೆಗೆ ಅರ್ಹ ಮಕ್ಕಳನ್ನು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಅಡ್ಮಿಷನ್ ಮಾಡಿಸಲು ಬಯಸುವ ಪೋಷಕರು ಏಪ್ರಿಲ್ 22, 2024ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಗಮನಾರ್ಹವೆಂದರೆ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ರೈತ ಮಕ್ಕಳಿಗೆ ವಿಶೇಷ ಅವಕಾಶ ನೀಡಲು ಶಿಕ್ಷಣ ಇಲಾಖೆಯು ಮಹತ್ವದ ಸುತ್ತೋಲೆ ಹೊರಡಿಸಿದ್ದು; ಅರ್ಹ ರೈತರು ತಮ್ಮ ಮಕ್ಕಳನ್ನು ತಮಗಿಷ್ಟವಾದ ಉತ್ತಮ ಶಾಲೆಗಳಿಗೆ ಉಚಿತವಾಗಿ ಅಡ್ಮಿಷನ್ ಮಾಡಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Gram Panchayat Recruitment 2024 : ಪಿಯುಸಿ ಪಾಸಾದವರಿಂದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಉಚಿತ

Education Department Circular 1

ಯಾವೆಲ್ಲ ರೈತ ಮಕ್ಕಳು ಅರ್ಹರು?

ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಅನೇಕ ರೈತರು ಸಾಲಕ್ಕೆ ಹೆದರಿಯೋ, ಜೀವನ ನಿರ್ವಹಣೆಗೆ ತೊಂದರೆಯಾಗಿಯೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವರ್ಷ ವರ್ಷ ಸಾವಿಗೆ ಶರಣಾಗುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಕುಟುಂಬಗಳ ನೆರವಿಗೆ ಸರಕಾರ ವಿವಿಧ ರೀತಿಯ ಸೌಲಭ್ಯ ಕಲ್ಪಿಸಿದ್ದು; ಇದೀಗ ಇಂತಹ ರೈತರ ಮಕ್ಕಳಿಗೆ ಆರ್‌ಟಿಇ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಮಾತ್ರ ಈ ಅವಕಾಶ ನೀಡಲಾಗಿದ್ದು; 2015ರ ನಂತರ ಸಾಲದ ಬಾಧೆ ಸೇರಿದಂತೆ ವಿವಿಧ ಕಾರಣಗಳಿಂದ ಅತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಅನುಕೂಲ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. 2024-25 ಶಿಕ್ಷಣ ಹಕ್ಕು ಕಾಯ್ದಿಡಿ ಪ್ರವೇಶ ಪ್ರಕ್ರಿಯೆ ನಡೆಸಲು ಸರ್ಕಾರದ ಆದೇಶದಂತೆ ನೆರೆಹೊರೆಯ ಶಾಲೆಗಳನ್ನು ಕೈಬಿಡದಂತೆ ತಿಳಿಸಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಾಲೆಗಳ ಮ್ಯಾಪಿಂಗ್ ಮಾಡುವ ಕುರಿತು ಕಳುಹಿಸಿರುವ ಸುತ್ತೋಲೆಯನ್ನು ಮುಂದುವರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು (ಆಡಳಿತ) ಕ್ರಮ ಕೈಗೊಳ್ಳಲು ತಿಳಿಸಿದೆ.

Education Department Circular 2

ಇದನ್ನೂ ಓದಿ: Kotak Suraksha Scholarship Program 2024 : 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ | ಅರ್ಹ ಅಭ್ಯರ್ಥಿಗಳೇ ಈಗಲೇ ಅರ್ಜಿ ಸಲ್ಲಿಸಿ

ಯಾವೆಲ್ಲ ಶಾಲೆಗಳಲ್ಲಿ ಪ್ರವೇಶ

ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಎಲ್ಲ ಸರ್ಕಾರಿ, ಬಿಬಿಎಂಪಿ ಶಾಲೆಗಳು ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಮ್ಯಾಪ್ ಮಾಡುವುದು, ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಣಾ ಪತ್ರ ಪಡೆದಿರುವ, ಈಗಾಗಲೇ ಮುಚ್ಚಿರುವ ಮತ್ತು ನ್ಯಾಯಾಲಯದ ತಡೆಯಾಜ್ಞೆ ಪಡೆದಿರುವ ಶಾಲೆಗಳನ್ನು ಪಟ್ಟಿಯಿಂದ ಕೈಬಿಡುವುದು. ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಮಾತ್ರ ನಡೆಸುವ ಶಾಲೆಗಳನ್ನು ಪಟ್ಟಿಯಲ್ಲಿ ಸೇರಿಸಬಾರದು. ಅಲ್ಪ ಸಂಖ್ಯಾತವಲ್ಲದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 31-12-2023ರಲ್ಲಿ ಇದ್ದಂತೆ ಎಲ್.ಕೆ.ಜಿ. ಮತ್ತು 1ನೇ ತರಗತಿಯ ಒಟ್ಟು ದಾಖಲಾತಿ ಸಂಖ್ಯೆಯನ್ನು ಎಸ್.ಎ.ಟಿ.ಎಸ್ ತಂತ್ರಾ೦ಶದ ಆಧಾರದ ಮೇಲೆ ಶೇ.25 ಸೀಟು ಹಂಚಿಕೆಗೆ ಪರಿಗಣಿಸಲಾಗುವುದು.

Education Department Circular 3

ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿವರ

ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರ ಕಡ್ಡಾಯವಾಗಿದೆ.

ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಸೀಟು ಬಯಸುವ ಪಾಲಕರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಆಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್’ನಲ್ಲಿ ಶಾಲೆಗಳ ಆದ್ಯತೆ ನಮೂದಿಸಿ ಅರ್ಜಿ ಸಲ್ಲಿಸಬಹುದು.

ವಿಶೇಷ ಪ್ರವರ್ಗದಡಿ ಮೀಸಲಾತಿ ಕೋರುವ ಪೋಷಕರು ಸೂಕ್ತ ಕಾಲಂನಲ್ಲಿ ನಿರ್ದಿಷ್ಟವಾಗಿ ಮೀಸಲಾತಿ ಕೋರಿರುವ ಪ್ರವರ್ಗವನ್ನು ನಮೂದಿಸುವುದು ಹಾಗೂ ಸದರಿ ಪ್ರವರ್ಗಕ್ಕೆ ಸಂಬ೦ಧಿಸಿದ ದಾಖಲೆಯನ್ನು ತಂತ್ರಾ೦ಶದಲ್ಲಿ ಅಪಲೋಡ್ ಸೇರಿ ಇತರೆ ಕ್ರಮ ಸೂಚನೆಯನ್ನು ಪಾಲಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

Education Department Circular 4

ಇದನ್ನೂ ಓದಿ: Karnataka Rain Report 2024 : ಈ ವರ್ಷ ಭರ್ಜರಿ ಮುಂಗಾರು ಮಳೆ | ಬೇಸಿಗೆ ಮಳೆ ನೀಡಿದ ಮುನ್ಸೂಚನೆ

ನಿಮ್ಮ ಹತ್ತಿರದ ಶಾಲೆಗಳನ್ನು ಪರಿಶೀಲಿಸುವ ವಿಧಾನ

  • ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್ ಹೊಸ ಹೋಂ ಪೇಜ್’ನಲ್ಲಿ Neighborhood School List for RTE 2024 (Provisional) – Know My School ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ನಂತರದಲ್ಲಿ ಓಪನ್ ಆಗುವ ವೆಬ್ ಪೇಜ್’ನಲ್ಲಿ ನಿಮ್ಮ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿ.
  • ಬಳಿಕ ಕಾಣುವ ಅಲ್ಲಿ ಕಾಣುವ View in GIS-MAP ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮ ಅಥವಾ ಏರಿಯಾ ಅಕ್ಕಪಕ್ಕದ ಶಾಲೆಗಳ ಮಾಹಿತಿಯನ್ನು ನೀವು ನೋಡಬಹುದು.
Education Department Circular 5

ಶಾಲೆ ಅಡ್ಮಿಷನ್ ಕುರಿತ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 22-04-2024
  • ಅರ್ಹ ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ : 26-04-2024
  • 1ನೇ ಸುತ್ತಿನ ಸೀಟು ಹಂಚಿಕೆ ಬಿಡುಗಡೆ : 30-04-2024
  • ಶಾಲಾ ಪ್ರವೇಶಾತಿಗೆ ಕೊನೆಯ ದಿನಾಂಕ : 13-05-2024
  • 2ನೇ ಸುತ್ತಿನ ಸೀಟು ಹಂಚಿಕೆ ಬಿಡುಗಡೆ : 22-05-2024

ಅಧಿಕೃತ ವೆಬ್‌ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Labour department scholarship 2024 : ಕಾರ್ಮಿಕ ಇಲಾಖೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಈ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಆರ್ಥಿಕ ನೆರವು

WhatsApp Group Join Now
Telegram Group Join Now

Related Posts

error: Content is protected !!