ಸರಕಾರಿ ಯೋಜನೆಸಾಲ ಯೋಜನೆ

Salamanna gift : ರೈತರಿಗೆ ಸಾಲಮನ್ನಾ ಕೊಡುಗೆ | 2024-25ನೇ ಸಾಲಿನ ಕರ್ನಾಟಕ ಬಜೆಟ್’ನಲ್ಲಿ ಸಿಕ್ತು ಬಂಪರ್ ಗಿಫ್ಟ್

WhatsApp Group Join Now
Telegram Group Join Now

Salamanna gift  : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಿರುವ ೨೦೨೪-೨೫ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್’ನಲ್ಲಿ ಬಹು ನಿರೀಕ್ಷಿತ ರೈತರ ಸಾಲಮನ್ನಾ ವಿಶೇಷ ಕೊಡುಗೆ ವಿಶೇಷ ಕೊಡುಗೆ ನೀಡಿದ್ದಾರೆ. ಸಹಕಾರ ಇಲಾಖೆಯ ಮಹತ್ವದ ಘೋಷಣೆಗಳ ವಿವರ ಇಲ್ಲಿದೆ…

ತೆಲಂಗಾಣ ಮಾದರಿಯಲ್ಲಿ ರಾಜ್ಯ ಸರಕಾರ ರೈತರ ಸಂಪೂರ್ಣ ಸಾಲ ಮನ್ನಾ (farmers loan waiver) ಆಗಬೇಕು ಎಂಬುವುದು ರೈತರ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಬರದಿಂದ ಕಂಗೆಟ್ಟಿರುವ ರೈತರಿಗೆ ಹೊಸದಾಗಿ ಸಾಲಮನ್ನಾ ಘೋಷಣೆ ಮಾಡದೇ ಈ ಹಿಂದೆ ಘೋಷಣೆಯಾಗಿದ್ದ ಸಾಲಮನ್ನಾ ಯೋಜನೆಯ ಬಾಕಿ ಅನುದಾನವನ್ನು ಬಿಡುಗಡೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Apply for New Ration card : ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

ಸೊಸೈಟಿ ಸಾಲದ ಮೊತ್ತ ಏರಿಕೆ (Increase in society loan)

ವಿಶೇಷವೆಂದರೆ ಕಾಂಗ್ರೆಸ್ ಪ್ರಣಾಳಿಕೆಯಂತೆ 2024-25ನೇ ಸಾಲಿನಲ್ಲಿ ರಾಜ್ಯದ 36 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಒಟ್ಟು 27,000 ಕೋಟಿ ರೂಪಾಯಿಗಳಷ್ಟು ದಾಖಲೆಯ ಸಾಲವನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಪ್ರಸಕ್ತ ಸಾಲಿನ ಬಜೆಟ್’ನಲ್ಲಿ ವ್ಯಾಖ್ಯಾನಿಸಲಾಗಿದೆ.

ಸಹಕಾರ ಸಂಘಗಳ ಮೂಲಕ ನೀಡುವ ಬಡ್ಡಿ ರಹಿತ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷದ ವರೆಗೆ ಏರಿಕೆ ಮಾಡಿದ್ದಾರೆ. ಜೊತೆಗೆ ಮಧ್ಯಮ ಮತ್ತು ದೀರ್ಘಾವಧಿ ಸಾಲವನ್ನು ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿಗಳಿಗೆ ಏರಿಸುವ ಅಧಿಕೃತ ತೀರ್ಮಾನವನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: Rain forecast : ಬರಗಾಲ ಮುಕ್ತಾಯ ಜೂನ್’ನಿಂದ ಉತ್ತಮ ಮುಂಗಾರು | ಈ ವರ್ಷದ ಮಳೆ ಭರವಸೆ ನೀಡಿದ ಹವಾಮಾನ ಇಲಾಖೆ

132 ಕೋಟಿ ರೂಪಾಯಿ ಸಾಲಮನ್ನಾ ನಿಧಿ ಬಿಡುಗಡೆ 

ಹಿಂದಿನ ಸರ್ಕಾರದ ಅವಧಿಯಲ್ಲಿ 50,000 ರೂಪಾಯಿ ವರೆಗಿನ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ 21 ಲಕ್ಷ ರೈತರಿಗೆ 7,631 ಕೋಟಿ ರೂಪಾಯಿ ಬೆಳೆ ಸಾಲ ಮನ್ನ ಮಾಡಲಾಗಿತ್ತು. 2018 ಆಗಸ್ಟ್ 14ರ ಆದೇಶದ ಪ್ರಕಾರ, 2018 ಜುಲೈ 10ರ ವರೆಗೆ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿAದ ಬೆಳೆ ಸಾಲ ಪಡೆದಿದ್ದ ರೈತ ಸದಸ್ಯರ ಹೊರ ಬಾಕಿ ಸಾಲಗಳಿಗೆ ಗರಿಷ್ಟ ಒಂದು ಲಕ್ಷ ರೂಪಾಯಿ ವರೆಗೆ ಸಾಲ ಮನ್ನಾ ಭಾಗ್ಯ ನೀಡಲಾಗಿತ್ತು.

ಆದರೆ ಆ ಅವಧಿಯಲ್ಲಿ ಸಾಲಮನ್ನಾ ಯೋಜನೆಯ ಸಂಪೂರ್ಣ ಅನುದಾನ ಬಿಡುಗಡೆಯಾಗಿರಲಿಲ್ಲ. ಸುಮಾರು 132 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗದ ಪರಿಣಾಮ ಡಿಸಿಸಿ ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಈ ಬಜೆಟ್’ನಲ್ಲಿ ಡಿಸಿಸಿ ಬ್ಯಾಂಕ್‍ಗಳಿಗೆ ಬಾಕಿ ಇರುವ 132 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Farmers Loan Waiver : ರಾಜ್ಯ ಬಜೆಟ್‌ನಲ್ಲಿ ಸಿಗುತ್ತಾ ರೈತರಿಗೆ ಸಾಲಮನ್ನಾ ಭಾಗ್ಯ? | ರೈತರ ಬೇಡಿಕೆಗಳೇನು?

ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕ್‍ಗಳಿಗೆ ಸಾಲ ಮರುಪಾವತಿ (Loan repayment to DCC and Picard Banks)

ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕ್‌ಗಳ ಮಧ್ಯಮ ಅವಧಿ ಸಾಲ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಮಾಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಒಟ್ಟು 57,000 ರೈತರು ಇದರ ಲಾಭವನ್ನು ಪಡೆಯಲಿದ್ದಾರೆ. ಈಚೆಗೆ ಇದರ ಪ್ರಯೋಜನವನ್ನು ಹಲವು ರೈತರು ಪಡೆದಿದ್ದಾರೆ.

ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕ್‍ಗಳಿಗೆ ಒಟ್ಟು 496 ಕೋಟಿ ರೂಪಾಯಿ ಸಾಲ ಮರುಪಾವತಿಯಾಗುವ ನಿರೀಕ್ಷೆಯಿದ್ದು, ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿಯಲ್ಲಿ ಭಾರೀ ಸುಧಾರಣೆಯಾಗಲಿದೆ. ನಿರೀಕ್ಷೆಯಂತೆ ಈ ಅನುದಾನ ಬಿಡುಗಡೆಯಾದರೆ ರೈತರಿಗೆ 5 ಲಕ್ಷ ರೂಪಾಯಿ ವರೆಗೆ ಬಡ್ಡಿ ಸಹಿತ ಸಾಲ ಸಿಗಲಿದೆ.

ಇದನ್ನೂ ಓದಿ: Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಮನ್ನಾ ಯೋಜನೆಯ ಮಾಹಿತಿ ಪರಿಶೀಲಿಸಿ (Crop Loan Waiver System)

ಕರ್ನಾಟಕ ರೈತ ಸಾಲ ಮನ್ನಾ ಯೋಜನೆಯ ಫಲಾನುಭವಿಗಳ ಸಂಪೂರ್ಣ ಪಟ್ಟಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಕರ್ನಾಟಕ ಬೆಳೆಸಾಲ ಮನ್ನಾ ಯೋಜನೆಯ ಮಾಹಿತಿ ಪರಿಶೀಲಿಸಲು 👉  ಇಲ್ಲಿ ಕ್ಲಿಕ್ ಮಾಡಿ 

ಕರ್ನಾಟಕ ಸರಕಾರದ ಬೆಳೆಸಾಲ ಮನ್ನಾ ಯೋಜನೆ (Crop Loan Waiver System) ಅಧಿಕೃತ ಜಾಲತಾಣ ಪುಟ ತೆರೆದುಕೊಳ್ಳುತ್ತದೆ. ಜಾಲತಾಣದ ಬಲತುದಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಆಯ್ಕೆಗಳಿದ್ದು; ಸುಲಭ ಬಳಕೆಗೆ ಕನ್ನಡ ಆಯ್ಕೆ ಮಾಡಿಕೊಳ್ಳಬಹುದು.

ನಂತರ ನಾಗರಿಕ ಮೇಲೆ ಕ್ಲಿಕ್ ಮಾಡಿ. ಮುಂದೆ ‘ನಾಗರಿಕ ಸೇವೆಗಳು’ ಕೆಳಗಿರುವ ‘CLWS ನಾಗರಿಕ ವರದಿಗಳು’ ಮೇಲೆ ಕ್ಲಿಕ್ ಮಾಡಿ. ‘ರೇಷನ್ ಕಾರ್ಡ್ ನಂಬರ್’ ಅಥವಾ ಆಧಾರ್ ನಂಬರ್ ಆಯ್ಕೆಗಳು ಕಾಣಿಸಿಒಳ್ಳುತ್ತವೆ. ಅದರಲ್ಲಿ ನಿಮಗೆ ಅಗತ್ಯವಾದ ಆಪ್ಷನ್ ಸೆಲೆಕ್ಟ್ ಮಾಡಿ ಈeಣಛಿh ಡಿeಠಿoಡಿಣ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರು, ಬ್ಯಾಂಕ್ ಹೆಸರು, ಸಾಲದ ಮೊತ್ತ, ಸಾಲ ಮನ್ನಾ ಆದ ಮೊತ್ತದ ವಿವರ ಲಭ್ಯವಾಗುತ್ತದೆ.

 

  • ಮನ್ನಾ ಯೋಜನೆ ವೆಬ್‌ಸೈಟ್ : Click here
  • ಸಾಲ ಮನ್ನಾ ಪರಿಹಾರ ಯೋಜನೆ ಸಹಾಯವಾಣಿ: 080-22113255
  • Karnataka Budget 2024-25 pdf : Download 

ಇದನ್ನೂ ಓದಿ: bara parihara release : ಈ ರೈತರಿಗೆ ಬರ ಪರಿಹಾರ ಹಣ ಜಮಾ | ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…

PM Surya Ghar: Muft Bijli Yojana : ಉಚಿತ ಸೋಲಾರ್ ವಿದ್ಯುತ್ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Posts

error: Content is protected !!