ಸುದ್ದಿಗಳುಹಣಕಾಸು

ಬ್ಯಾಂಕ್ ಡೆಬಿಟ್ ಕಾರ್ಡ್ ಸರ್ವಿಸ್ ಶುಲ್ಕ ಹೆಚ್ಚಳ | ಹೊಸ ಶುಲ್ಕದ ಮಾಹಿತಿ ಇಲ್ಲಿದೆ… Debit Card Service Fee Increase

WhatsApp Group Join Now
Telegram Group Join Now

Debit Card Service Fee Increase : ಈಗಾಗಲೇ ಬ್ಯಾಂಕುಗಳ ಸೇವಾ ಶುಲ್ಕಗಳಿಂದ ಕಂಗಾಲಾಗಿರುವ ಗ್ರಾಹಕರಿಗೆ ಏಪ್ರಿಲ್ 1ರಿಂದ ಮತ್ತಷ್ಟು ‘ಶುಲ್ಕಭಾರ’ ಎದುರಾಗಿದೆ. ಡೆಬಿಟ್ ಕಾರ್ಡ್ ಶುಲ್ಕವನ್ನು ದೇಶದ ಬಹುದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರಮುಖವಾಗಿರುವ ಎಸ್‌ಬಿಐ ಅರ್ಥಾತ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India – SBI) ತನ್ನ ಬಳಕೆದಾರರಿಗೆ ಡೆಬಿಟ್ ಕಾರ್ಡ್ ಶುಲ್ಕ ಹೆಚ್ಚಿಸಿದೆ.

ದೇಶದಲ್ಲಿ ಅನೇಕರು ಡೆಬಿಟ್ (Debit Card) ಮತ್ತು ಕ್ರೆಡಿಟ್ ಕಾರ್ಡ್’ಗಳನ್ನು (Credit Card) ಸಾಮಾನ್ಯವಾಗಿ ಬಳಸುತ್ತಾರೆ. ಈ ಕಾರ್ಡ್’ಗಳ ಬಳಕೆಗೆ ಸೇವಾ ಶುಲ್ಕದ ಜತೆಗೆ ಇತರ ಹಲವು ನಿಯಮಗಳಿವೆ. ಇದೀಗ ನಿರ್ವಹಣಾ ಶುಲ್ಕಕ್ಕೆ ಸಂಬಂಧಿಸಿದಂತೆ ಎಸ್‌ಬಿಐ ಮಹತ್ವದ ನಿರ್ಧಾರ ಪ್ರಕಟಿಸಿದ್ದು; ಇನ್ಮುಂದೆ ಹೊಸ ಡೆಬಿಟ್ ಕಾರ್ಡ್ ಸೇವಾ ಶುಲ್ಕಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಎಸ್‌ಬಿಐ ತಿಳಿಸಿದೆ.

ಯಾವುದಕ್ಕೆ ಎಷ್ಟು ಶುಲ್ಕ ಹೆಚ್ಚಳ?

ಒಂದು ಬ್ಯಾಂಕಿನಿ೦ದ ಮತ್ತೊಂದು ಬ್ಯಾಂಕಿಗೆ ಡೆಬಿಟ್ ಕಾರ್ಡ್ ಸೇವಾ ಶುಲ್ಕಗಳು ಬದಲಾಗುತ್ತವೆ. ಮಾತ್ರವಲ್ಲ, ಒಂದೊ೦ದು ವಿಧದ ಕಾರ್ಡ್’ಗೆ ಒಂದೊ೦ದು ರೀತಿಯ ಬೆಲೆ ಕೂಡ ನಿಗಧಿ ಮಾಡಲಾಗುತ್ತದೆ. ಎಸ್‌ಬಿಐ ಬ್ಯಾಂಕ್ ವಿವಿಧ ಡೆಬಿಟ್ ಕಾರ್ಡ್’ಗಳಿಗೆ ನಿಗದಿಪಡಿಸಿರುವ ಹೊಸ ಹೆಚ್ಚುವರಿ ಶುಲ್ಕಗಳ ವಿವರ ಈ ಕೆಳಗಿನಂತಿದೆ:

  • ಇಷ್ಟು ದಿನ ವಾರ್ಷಿಕ 125 ರೂಪಾಯಿ ಸೇವಾ ಶುಲ್ಕವನ್ನು ಹೊಂದಿದ್ದ ಸಿಲ್ವರ್, ಗ್ಲೋಬಲ್, ಕ್ಲಾಸಿಕ್ ಮತ್ತು ಕಾಂಟ್ಯಾಕ್ಟ್’ಲೆಸ್ ಡೆಬಿಟ್ ಕಾರ್ಡ್ಗಳ ನಿರ್ವಹಣೆ ಶುಲ್ಕವನ್ನು 200 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ 75 ರೂಪಾಯಿ ಏರಿಕೆಯಾಗಿದೆ.
  • ಅದೇ ರೀತಿ 175 ರೂಪಾಯಿ ವಾರ್ಷಿಕ ಸೇವಾ ಶುಲ್ಕವನ್ನು ಹೊಂದಿದ್ದ ಯುವ, ಗೋಲ್ಡ್, ಕಾಂಬೋ ಡೆಬಿಟ್ ಕಾರ್ಡ್ ಮತ್ತು ಮೈ ಕಾರ್ಡ್’ಗಳ ನಿರ್ವಹಣಾ ಶುಲ್ಕವನ್ನು 250 ರೂಪಾಯಿಗೆ ಹೆಚ್ಚಿಸಲಾಗಿದೆ.
  • ಇನ್ನು ವಾರ್ಷಿಕ 250 ರೂಪಾಯಿ ಸೇವಾ ಶುಲ್ಕವನ್ನು ಹೊಂದಿದ್ದ ಪ್ಲಾಟಿನಂ ಡೆಬಿಟ್ ಕಾರ್ಡ್ ಶುಲ್ಕವನ್ನು 325 ರೂಪಾಯಿ ಹೆಚ್ಚಿಸಲಾಗಿದೆ. ಇದು ಸಹ 75 ರೂಪಾಯಿ ಹೆಚ್ಚಳವಾಗಿದೆ.
  • ಹಾಗೇನೇ ವಾರ್ಷಿಕ 350 ರೂಪಾಯಿ ಸೇವಾ ಶುಲ್ಕ ನಿಗದಿಪಡಿಸಲಾಗಿದ್ದ ಪ್ಲಾಟಿನಂ ಬ್ಯುಸಿನೆಸ್ ಕಾರ್ಡ್ (Business card) ಶುಲ್ಕವನ್ನು ಅನಾಮತ್ತು 425 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಇತರ ಬ್ಯಾಂಕುಗಳ ನಿರ್ಧಾರವೇನು?

ಗಮನಾರ್ಹವೆಂದರೆ ಮೇಲ್ಕಾಣಿಸಿದ ಎಲ್ಲ ವಿಧದ ಡೆಬಿಟ್ ಕಾರ್ಡ್ ಸೇವಾಶುಲ್ಕಗಳ ಮೇಲೆ ಹೆಚ್ಚುವರಿಯಾಗಿ ಜಿಎಸ್‌ಟಿ (GST) ಬೇರೆ ಇರಲಿದೆ. ಇದೇ ಏಪ್ರಿಲ್ 1 ರಿಂದ ಈ ಹೊಸ ‘ಶುಲ್ಕಭಾರ’ ಎಸ್‌ಬಿಐ ಗ್ರಾಹಕರಿಗೆ ಅನ್ವಯವಾಗಲಿದೆ. ಅಂದಹಾಗೇ ಈ ಹಿಂದೆ ಇದ್ದಂತೆ ಎಸ್‌ಬಿಐ ಕ್ರೆಡಿಟ್ ಕಾರ್ಡ್’ನೊಂದಿಗೆ ರೆಂಟ್ ಪಾವತಿಸುವಾಗ ಇದ್ದ ರಿವಾರ್ಡ್ ಪಾಯಿಂಟ್‌ಗಳು (Reward Points) ಇನ್ಮುಂದೆ ಇರುವುದಿಲ್ಲ.

ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್‌ಬಿಐ (SBI) ಮಾತ್ರ ಈ ಡೆಬಿಟ್ ಕಾರ್ಡ್ ಸೇವಾಶುಲ್ಕವನ್ನು ಹೆಚ್ಚಳ ನಿರ್ಧಾರ ಕೈಗೊಂಡಿದೆ. ಉಳಿದ ಬ್ಯಾಂಕುಗಳು ಸದ್ಯಕ್ಕೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲವಾದರೂ ಇಷ್ಟರಲ್ಲೇ ಅವುಗಳು ಕೂಡ ಸೇವಾಶುಲ್ಕ ಹೆಚ್ಚಳ ಮಾಡುವುದು ನಿಶ್ಚಿತ!

ಇವುಗಳನ್ನೂ ಓದಿ:

Gram Panchayat Recruitment 2024 : ಪಿಯುಸಿ ಪಾಸಾದವರಿಂದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಉಚಿತ

Rain Forecast 2024 : ರಾಜ್ಯಕ್ಕೆ ವರವಾಗಲಿದೆ ಪೂರ್ವ ಮುಂಗಾರು ಮಳೆ | ಯುಗಾದಿ ಹೊತ್ತಿಗೆ ಎಲ್ಲೆಲ್ಲೂ ಮಳೆ

Kotak Suraksha Scholarship Program 2024 : 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ | ಅರ್ಹ ಅಭ್ಯರ್ಥಿಗಳೇ ಈಗಲೇ ಅರ್ಜಿ ಸಲ್ಲಿಸಿ

RTC aadhar card link : ರೈತರ ಮನೆ ಬಾಗಿಲಲ್ಲೇ ಪಹಣಿಗೆ ಆಧಾರ್ ಕಾರ್ಡ್ ಜೋಡಣೆ | ಕಂದಾಯ ಸಚಿವರ ಸೂಚನೆ

WhatsApp Group Join Now
Telegram Group Join Now

Related Posts

error: Content is protected !!