ಕುರಿ ಸಾಕಾಣಿಕೆಗೆ ₹50,000 ಸಹಾಯಧನ | ಅರ್ಜಿ ಆಹ್ವಾನ Sheep Farming and Food Cart Scheme Subsidy
ಸಮಾಜ ಕಲ್ಯಾಣ ಇಲಾಖೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದಿಂದ (Dr. BR Ambedkar Development Corporation) ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಪೈಕಿ 2024-2025ನೇ ಸಾಲಿನ ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ (Sheep Farming) ಹಾಗೂ ಸ್ವಾವಲಂಬಿ ಸಾರಥಿ-ಫುಡ್ ಕಾರ್ಟ್ (Food Cart) ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕುರಿ ಸಾಕಾಣಿಕೆಗೆ ₹50,000 ಸಹಾಯಧನ
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುರಿ ಸಾಕಾಣಿಕೆ ಉದ್ದೇಶಕ್ಕಾಗಿ ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ.
ಸದರಿ ಯೋಜನೆಯಡಿ ಕುರಿ ಸಾಕಾಣಿಕೆಗಾಗಿ 1 ಲಕ್ಷ ರೂಪಾಯಿ ಘಟಕ ವೆಚ್ಚವಾಗಿದ್ದು; ಇದರಲ್ಲಿ ನಿಗಮದ ವತಿಯಿಂದ ಸಹಾಯಧನದ ರೂಪದಲ್ಲಿ ತಲಾ 50,000 ರೂಪಾಯಿ ಉಚಿತವಾಗಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಫುಡ್ ಕಾರ್ಟ್ ಉದ್ಯೋಗಕ್ಕೆ ₹4 ಲಕ್ಷ ಸಹಾಯಧನ
ಇನ್ನು ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ ಮಾತ್ರ ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ಫುಡ್ ಕಾರ್ಟ್ ಉದ್ದೇಶಕ್ಕಾಗಿ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಈ ಯೋಜನೆಯಡಿ ಸಾಲದ ಮೊತ್ತಕ್ಕೆ ಶೇ.75ರಷ್ಟು ಅಥವಾ ಗರಿಷ್ಠ 4 ಲಕ್ಷ ರೂಪಾಯಿ ಸಹಾಯಧನ ಸಿಗಲಿದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿದ್ದು; ಕಡಿಮೆ ಬಡ್ಡಿದರದಲ್ಲಿ ಕಂತುಗಳಲ್ಲಿ ಪಾವತಿಸಲು ಅವಕಾಶವಿರುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಈ ಎರಡೂ ಸಹಾಯಧನ ಸೌಲಭ್ಯ ಪರಿಶಿಷ್ಟ ಜಾತಿಯವರಿಗೆ ಮಾತ್ರ ಅನ್ವಯವಾಗಿದ್ದು; ಆ ಸಮುದಾಯದ ಅರ್ಹ, ಆಸಕ್ತ ಫಲಾನುಭವಿಗಳು ಸರ್ಕಾರದ https://sevasindhu.karnataka.gov.in ಜಾಲತಾಣದ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಸೇವಾ ಕೇಂದ್ರಗಳ ಮೂಲಕ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿಸಲ್ಲಿಸಬಹುದು. 2023-24 ಮತ್ತು 2024-25ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್‌ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ / ಎಸ್.ಟಿ ಸಹಾಯವಾಣಿ 9482-300-400 ಸಂಪರ್ಕಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-12-2024
2 Comments