ಪಶುಪಾಲನೆ

Sheep-Goat & Dairy Farminf Free training : ರೈತರಿಗೆ ಉಚಿತ ಆಡು ಕುರಿ, ಹೈನುಗಾರಿಕೆ ತರಬೇತಿ | ಊಟ ವಸತಿ ಕೂಡ ಪ್ರೀ | ಮೊಬೈಲ್‌ನಲ್ಲೇ ಹೆಸರು ನೋಂದಾಯಿಸಿ

WhatsApp Group Join Now
Telegram Group Join Now

ಈ ಸಂಸ್ಥೆಯ ಮೂಲಕ ಆಸಕ್ತರು ಆಡು-ಕುರಿ, ಹೈನುಗಾರಿಕೆ ಸೇರಿದಂತೆ ವಿವಿಧ ಉಚಿತ ತರಬೇತಿಗಳನ್ನು ಪಡೆಯಬಹುದಾಗಿದೆ. ಹೆಸರು ನೋಂದಣಿಯ ಸಂಪೂರ್ಣ ಮಾಹಿತಿ ಇಲ್ಲಿದೆ…

Sheep-Goat & Dairy Farminf Free training : ಬಾಗಲಕೋಟೆಯ ‘ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ’ವು (kfrcbagalkot) ರೈತರು, ರೈತ ಮಕ್ಕಳು ಹಾಗೂ ಕೃಷಿ-ಪಶುಪಾಲನೆಯಲ್ಲಿ ಆಸಕ್ತಿಯುಳ್ಳವರಿಗೆ ಆಡು-ಕುರಿ, ಹೈನುಗಾರಿಕೆ ಸೇರಿದಂತೆ ವಿವಿಧ ಉಚಿತ ತರಬೇತಿಗಳನ್ನು ಆಯೋಜಿಸಿದೆ. ಉತ್ತರ ಕರ್ನಾಟಕದ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದ್ದು; ವಸತಿ, ಊಟೋಪಚಾರದೊಂದಿಗೆ ಕೃಷಿ, ತೋಟಗಾರಿಕೆ, ಪಶುಪಾಲನೆಯ ತಜ್ಞರಿಂದ ತರಬೇತಿ ಪಡೆಯುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ.

ಗ್ರಾಮೀಣ ಸಮುದಾಯದಲ್ಲಿ ಉದ್ಯಮಶೀಲ ಸಂಸ್ಕೃತಿ ಬೆಳೆಸುವ, ಸ್ವ-ಸಹಾಯ ಸಂಸ್ಕೃತಿ ಬೆಳೆಸುವ ಹಾಗೂ ಆರೋಗ್ಯಕರ ಬ್ಯಾಂಕಿ೦ಗ್ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ವಿವಿಧ ಪ್ರಾಯೋಜಕರ ನೆರವಿನಿಂದ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರವು ಕಾರ್ಯಾರಂಭ ಮಾಡಿದೆ. ಈ ಉದ್ದೇಶಗಳ ಸಾಧನೆಗಾಗಿ ಸಂಸ್ಥೆಯು ಮೂರು ದಿನಗಳ ಉಚಿತ ತರಬೇತಿ ನೀಡುತ್ತಿದೆ.

ಇದನ್ನೂ ಓದಿ: NLM Scheme Loan : ಕುರಿ-ಮೇಕೆ, ಕೋಳಿ, ಹಂದಿ ಸಾಕಾಣೆಗೆ ₹20 ಲಕ್ಷದಿಂದ ₹1 ಕೋಟಿ ಸಾಲ ಸೌಲಭ್ಯ | ಸಾಲದ ಅರ್ಧ ಭಾಗ ಸಬ್ಸಿಡಿ

ಯಾವೆಲ್ಲ ತರಬೇತಿ ನೀಡಲಾಗುತ್ತದೆ?

 • ಆಡು ಮತ್ತು ಕುರಿ ಸಾಕಾಣಿಕೆ
 • ಹೈನುಗಾರಿಕೆ
 • ಕೋಳಿ ಸಾಕಾಣಿಕೆ
 • ಜೇನು ಕೃಷಿ
 • ಹಣ್ಣು ಬೆಳೆಗಳ ಕೃಷಿ
 • ದ್ರಾಕ್ಷಿ, ದಾಳಿಂಬೆ ಕೃಷಿ
 • ಪುಷ್ಪ, ತರಕಾರಿ ಬೆಳೆಗಳ ಕೃಷಿ
 • ಅಣಬೆ ಕೃಷಿ
 • ಸಾವಯವ ಕೃಷಿ
 • ಸಮಗ್ರ ಕೃಷಿ ರೇಷ್ಮೆ ಕೃಷಿ
 • ಆಹಾರ ಧಾನ್ಯಗಳು ಹಾಗೂ ರೈತರ ಬೇಡಿಕೆಗಳಿಗೆ ಅನುಗುಣವಾಗಿ ಇತರೆ ತರಬೇತಿಗಳನ್ನು ಆಯೋಜಿಸುತ್ತಿದೆ.

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

ತರಬೇತಿಯ ವಿಶೇಷತೆಗಳು

ತರಬೇತಿಯ ಅವಧಿ ಮೂರು ದಿನವಾಗಿದ್ದು; ಮೊದಲೆರಡು ದಿನಗಳಲ್ಲಿ ಸಂಸ್ಥೆಯ ಆವರಣದಲ್ಲಿ ವಿಷಯ ತಜ್ಞರಿಂದ ತರಬೇತಿ ನಡೆಯಲಿದೆ. ಮೂರನೇ ದಿನ ಕ್ಷೇತ್ರ ಭೇಟಿ ಆಯೋಜಿಸಲಾಗುತ್ತದೆ.

ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ, ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ, ಪಶು ವೈದ್ಯಕೀಯ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ಇತರೆ ಇಲಾಖೆಯ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತದೆ.

ಇದನ್ನೂ ಓದಿ: Horticulture Subsidy Schemes : ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳು | ರೈತರಿಗಾಗಿಯೇ ಇವೆ ಈ ಹಣಕಾಸು ನೆರವಿನ ಯೋಜನೆಗಳು

ಊಟ ಮತ್ತು ವಸತಿಯೊಂದಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ತರಬೇತಿ ಸಮಯ ಬೆಳಿಗ್ಗೆ 10.30ರಿಂದ ಸಂಜೆ 5.30ರ ತನಕ. ತರಬೇತಿಗೆ ಬರುವವರು ತಮ್ಮ ಊರಿನಿಂದ ಸಂಸ್ಥೆಗೆ ಬಂದು ಹೋಗುವ ಪ್ರಯಾಣ ವೆಚ್ಚವನ್ನು ತಾವೇ ಭರಿಸಬೇಕಾಗುವುದು.

ತರಬೇತಿಗೆ ಬರುವಾಗ ಪಾಸ್’ಪೋರ್ಟ್ ಸೈಜಿನ ಎರಡು ಪೋಟೋಗಳನ್ನು ಮತ್ತು ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಯನ್ನು ತಪ್ಪದೇ ತರಬೇಕಾಗುವುದು.

ಇದನ್ನೂ ಓದಿ: Weather Report 2023 : ಸರಾಸರಿ ಮಳೆಯಾದರೂ ಬರಗಾಲ ಹೇಗೆ ಬಂತು? ಹವಾಮಾನ ಇಲಾಖೆ ರಿಪೋರ್ಟ್ ಇಲ್ಲಿದೆ…

ತರಬೇತಿಗಾಗಿ ಹೆಸರನ್ನು ನೋಂದಾಯಿಸುವ ವಿಧಾನ

ತರಬೇತಿ ಪಡೆಯಲು ಇಚ್ಛಿಸುವ ಆಸಕ್ತರು 18 ವರ್ಷ ಮೇಲ್ಪಟ್ಟವರು ಹಾಗೂ 55 ವರ್ಷದೊಳಗಿರುವ ರೈತರು ಈ ಕೆಳಕಂಡ ಫೋನ್ ನಂಬರುಗಳಿಗೆ ರಜಾ ದಿನಗಳು, ಅಂದರೆ ಎರಡನೆಯ ಶನಿವಾರ ಮತ್ತು ನಾಲ್ಕನೆಯ ಶನಿವಾರ ಹೊರತುಪಡಿಸಿ ಕೆಲಸದ ದಿನಗಳಲ್ಲಿ ಆಫೀಸ್ ವೇಳೆಯಲ್ಲಿ, ತಾವು ಪಡೆಯಲು ಇಚ್ಚಿಸುವ ತರಬೇತಿಯ ಬಗೆಗೆ ತಿಳಿಸಿ ತಮ್ಮ ಹೆಸರು ಹಾಗೂ ಮೊಬೈಲ್ ನಂಬರನ್ನು ನೊಂದಾಯಿಸಬೇಕು.

ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ತರಬೇತಿ ಕಾರ್ಯಾಕ್ರಮದ ದಿನಾಂಕ ನಿರ್ಧಾರವಾದ ನಂತರ, ತರಬೇತಿಗೆ ತಮ್ಮ ಹೆಸರನ್ನು ನೊಂದಾಯಿಸಿದ ರೈತರ ಮೊಬೈಲ್ ನಂಬರಿಗೆ ಫೋನ್ ಮಾಡಿ ತರಬೇತಿಗೆ ಹಾಜರಾಗಲು ತಿಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಣಿಗೆ ಈ ಕೆಳಗಿನ ನಂಬರ್ ಸಂಪರ್ಕಿಸಬಹುದು

 • ಮೊಬೈಲ್: 9482630790
 • ದೂರವಾಣಿ: 08354-244048
 • E-mail: kfrcbagalkot@gmail.com
 • ವಿಳಾಸ: ಬಿವಿವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ – 587102

ಇದನ್ನೂ ಓದಿ: Drought relief Release : 25 ಲಕ್ಷ ರೈತರ ಖಾತೆಗೆ ಬರ ಪರಿಹಾರ ಹಣ ಜಮಾ | ಕಂದಾಯ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Related Posts

error: Content is protected !!