ಕೃಷಿಸರಕಾರಿ ಯೋಜನೆ

Solar Agriculture Pumpset : ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಭಾಗ್ಯ | ಇಂಧನ ಇಲಾಖೆಗೆ ಬಜೆಟ್ ಕೊಡುಗೆ

WhatsApp Group Join Now
Telegram Group Join Now

Solar Agriculture Pumpset : ವಿದ್ಯುತ್ ಸ್ವಾವಲಂಬನೆಗೆ ವಿಶೇಷ ಒತ್ತು ನೀಡಿರುವ ರಾಜ್ಯ ಸರಕಾರ 2024-25ನೇ ಸಾಲಿನ ಬಜೆಟ್’ನಲ್ಲಿ (Karnataka Budget 2024-25) ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ಸೋಲಾರ್ ವಿದ್ಯುತ್ ಉತ್ಪಾದನೆಗಾಗಿ ವಿಶೇಷ ಅನುದಾನ ಹಂಚಿಕೆ ಮಾಡುವುದಾಗಿ ಹೇಳಿದೆ. ಈಗಾಗಲೇ ‘ಗೃಹಜ್ಯೋತಿ’ (Gruhajyoti) ಯೋಜನೆ ಮೂಲಕ ಗೃಹ ವಿದ್ಯುತ್ ಬಳಕೆದಾರರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸಿರುವ ಸರಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಭಾಗ್ಯ ಕಲ್ಪಿಸಲು ಗಂಭೀರ ಗಮನಹರಿಸಿದೆ.

ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ಭಾಗ್ಯ

ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು PM-KUSUM Component-B ಯೋಜನೆಯಡಿ 1,174 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 40,000 ಜಾಲ ಮುಕ್ತ (Off Grid) ಸೋಲಾರ್ ಪಂಪ್‌ಸೆಟ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.30ರಷ್ಟು ಸಹಾಯಧನ ನೀಡುತ್ತಿದ್ದು; ರಾಜ್ಯ ಸರ್ಕಾರದ ಸಹಾಯಧನವನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ.

ಜತೆಗೆ, ಕೃಷಿ ಪಂಪ್‌ಸೆಟ್ ಫೀಡರ್ ಸೌರೀಕರಣ (Agriculture Pumpset Feeder Solarization) ಯೋಜನೆ ಹಂತ-1 ಅಡಿಯಲ್ಲಿ 1,320 ಮೆಗಾ ವ್ಯಾಟ್ ವಿಕೇಂದ್ರೀಕೃತ ಉತ್ಪಾದನೆಗೆ ಬಜೆಟ್‌ನಲ್ಲಿ ಕ್ರಮವಹಿಸಲಾಗಿದೆ. ಇದರಿಂದ 3.37 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಇದಲ್ಲದೆ, ಹಂತ-11 ಅಡಿಯಲ್ಲಿ 1,192 ಮೆಗಾ ವ್ಯಾಟ್ ಸೌರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ 4.30 ಉದ್ದೇಶಿಸಲಾಗಿದೆ.

ಇದನ್ನೂ ಓದಿ: Salamanna gift : ರೈತರಿಗೆ ಸಾಲಮನ್ನಾ ಕೊಡುಗೆ | 2024-25ನೇ ಸಾಲಿನ ಕರ್ನಾಟಕ ಬಜೆಟ್’ನಲ್ಲಿ ಸಿಕ್ತು ಬಂಪರ್ ಗಿಫ್ಟ್

ಹಳ್ಳಿಗಳಿಗೆ ಸಂಪೂರ್ಣ ಸೋಲಾರ್ ವಿದ್ಯುತ್

KREDLನಿಂದ ಪ್ರತೀ ಎಸ್ಕಾಂ ವ್ಯಾಪ್ತಿಯ ಆಯ್ದ ಒಂದು ಹಿಂದುಳಿದ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಮೈಕ್ರೋಗ್ರಿಡ್ ವ್ಯವಸ್ಥೆಯ (Microgrid) ಮೂಲಕ ಬ್ಯಾಟರಿ ಶೇಖರಣೆಯನ್ನು ಹೊಂದಿದ 500 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಘಟಕದ ಸ್ಥಾಪನೆಯ ಮಾಡುವ ಮೂಲಕ ಸದರಿ ಗ್ರಾಮಗಳನ್ನು ವಿದ್ಯುತ್ ಸ್ವಾವಲಂಬಿ ಗ್ರಾಮಗಳನ್ನಾಗಿ ಮಾಡಲು ಉದ್ದೇಶಿಸಿದೆ.

ನವೀಕರಿಸಬಹುದಾದ ಇಂಧನವಾದ ಸೋಲಾರ್ ವಿದ್ಯುತ್ ಅನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ ಬೇಡಿಕೆ ಹೆಚ್ಚಿರುವ ಕೇಂದ್ರಗಳು ಮತ್ತು ಗ್ರೀನ್ ಹೈಡೋಜನ್ ಹಬ್’ಗಳಿಗೆ ರವಾನಿಸಲು 765 KV Ultra High Voltage (UHV) ಟ್ರಾನ್ಸ್’ಮಿಷನ್ ಮಾರ್ಗಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು.

ಇದನ್ನೂ ಓದಿ: Apply for New Ration card : ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳು

ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡಲು 2,500 EV Charging ಕೇಂದ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಅಲ್ಲದೇ, ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ 35 ಕೋಟಿ ರೂಪಾಯಿ ವೆಚ್ಚದಲ್ಲಿ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಕರ್ನಾಟಕ ವಿದ್ಯುತ್ ನಿಗಮವು Tehri Hydro Development Corporation India Limited (THDCIL) ಸಹಯೋಗದೊಂದಿಗೆ ತೇಲುವ (Floating) ಸೌರ ಹಾಗೂ ಭೂಸ್ಥಾಪಿತ (Ground mounted) ಸೌರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಇದನ್ನೂ ಓದಿ: Farmers Loan Waiver : ರಾಜ್ಯ ಬಜೆಟ್‌ನಲ್ಲಿ ಸಿಗುತ್ತಾ ರೈತರಿಗೆ ಸಾಲಮನ್ನಾ ಭಾಗ್ಯ? | ರೈತರ ಬೇಡಿಕೆಗಳೇನು?

ಮನೆಮನೆಗೆ ಉಚಿತ ವಿದ್ಯುತ್ ಭಾಗ್ಯ

ಕಳೆದ ಜುಲೈ 1, 2023ರಿಂದ ಗೃಹ ವಿದ್ಯುತ್ ಬಳಕೆದಾರರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಯೋಜನೆಯಡಿ 1.65 ಗ್ರಾಹಕರು ನೋಂದಾಯಿಸಿಕೊ೦ಡಿದ್ದು, ಅಂದಾಜು 5 ಕೋಟಿಯಷ್ಟು ಜನರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ.

ಜತೆಗೆ ಗೃಹಜ್ಯೋತಿ ಯೋಜನೆಯ ವ್ಯಾಪ್ತಿಗೆ ಈ ಹಿಂದಿನ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಇತ್ಯಾದಿ ವಿದ್ಯುತ್ ಯೋಜನೆಗಳ ಫಲಾನುಭವಿಗಳನ್ನೂ ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ, 48 ಯುನಿಟ್ ಒಳಗಿನ ಸರಾಸರಿ ಬಳಕೆಗೆ ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಬದಲಿಗೆ 10 ಯುನಿಟ್‌ಗಳಷ್ಟು ಹೆಚ್ಚುವರಿ ವಿದ್ಯುತ್ ಒದಗಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Udyoga Mela Govt of Karnataka 2024 : ಸರಕಾರಿ ಉದ್ಯೋಗ ಮೇಳದಲ್ಲಿ ಭರ್ಜರಿ ಉದ್ಯೋಗಾವಕಾಶ | ಎಲ್ಲಾ ರೀತಿ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳಿಗೂ ಅವಕಾಶ

ಸೋಲಾರ್ ವಿದ್ಯುತ್ ಉತ್ಪಾದನೆಗೆ ಒತ್ತು

ರಾಜ್ಯವು ಉತ್ಪಾದಿಸುತ್ತಿರುವ ವಿದ್ಯುತ್ತಿನ ಶೇ.63 ರಷ್ಟು ಇಂಧನವು ನವೀಕರಿಸಬಹುದಾದ ಇಂಧನದಿ೦ದ ಆಗಿರುತ್ತದೆ. ಸರ್ಕಾರದ ಸಕಾರಾತ್ಮಕ ನೀತಿಗಳಿಂದ ಈ ವಲಯದಲ್ಲಿ ಸಾವಿರಾರು ಕೋಟಿ ರೂಪಾಯಿ ಖಾಸಗಿ ಹೂಡಿಕೆಯನ್ನು ಮಾಡಲಾಗುತ್ತಿದೆ. ಈ ನೀತಿಗಳನ್ನು ಇನ್ನಷ್ಟು ಹೂಡಿಕೆದಾರರ ಸ್ನೇಹಿಯನ್ನಾಗಿ ಮಾಡಲು ಕ್ರಮವಹಿಸಲಾಗುವುದು.

ಗ್ರೀನ್ ಹೈಡೋಜನ್ ಭವಿಷ್ಯದ ಇಂಧನ ಖಾಸಗಿ ಬಂಡವಾಳವನ್ನು ಈ ವಲಯಕ್ಕೆ ಆಕರ್ಷಿಸಲು 300 ಕಿಲೋ ವ್ಯಾಟ್ ಸಾಮರ್ಥ್ಯದ ಗ್ರೀನ್ ಹೈಡೋಜನ್ ಸ್ಥಾವರವನ್ನು (Green Hydrogen Plant) ಪ್ರಾಯೋಗಿಕವಾಗಿ ಅಂದಾಜು 10 ಕೋಟಿ ರೂಪಾಯಿ ವೆಚ್ಚದಲ್ಲಿ MNRE ನಿಧಿಯಿಂದ ಸ್ವಯಂ-ಸುಸ್ಥಿರ ಘಟಕದ ಆಧಾರದ ಮೇಲೆ KREDL ವತಿಯಿಂದ ಅನುಷ್ಠಾನಗೊಳಿಸಲಾಗುವುದು ಮತ್ತು ಗ್ರೀನ್ ಹೈಡೋಜನ್ ನೀತಿಯನ್ನು ರೂಪಿಸಲಾಗುವುದು.

Karnataka Budget 2024-25 pdf : Download

ಇದನ್ನೂ ಓದಿ: RDPR Recruitment 2024 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ | ಸಂಬಳ : ₹61,500 | Panchayat Raj fellowship recruitment

Karnataka government recruitment 2024 : 30,000 ಸರಕಾರಿ ಹುದ್ದೆಗಳ ನೇಮಕಾತಿ | ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

WhatsApp Group Join Now
Telegram Group Join Now

Related Posts

error: Content is protected !!