ಕೃಷಿಸರಕಾರಿ ಯೋಜನೆ

Solar Power for Agricultural Pumpsets : 40,000 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ | ಯಾವೆಲ್ಲ ರೈತರಿಗೆ ಸಿಗಲಿದೆ ಸೋಲಾರ್ ಭಾಗ್ಯ?

WhatsApp Group Join Now
Telegram Group Join Now

Solar Power for Agricultural Pumpsets : ಕಡೆಗೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯ ಸರಕಾರ ಅಧಿಕೃತ ತಯಾರಿ ನಡೆಸಿದೆ. ರಾಜ್ಯದಲ್ಲಿ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳಿದ್ದು; ಈ ಪೈಕಿ 40,000 ಪಂಪ್‌ಸೆಟ್‌ಗಳು ಶೀಘ್ರದಲ್ಲಿಯೇ ಸಕ್ರಮವಾಗಲಿವೆ. ಈ ಎಲ್ಲ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ (Solar power connection to pumpsets) ಸಿಗಲಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ (K J George) ತಿಳಿಸಿದ್ದಾರೆ.

ಇದನ್ನೂ ಓದಿ: Rain Information 2024 : ಮಾರ್ಚ್’ನಿಂದ ಮೇ ವರೆಗೂ ರಣ ಬಿಸಿಲು; ಜೂನ್‌ನಿಂದ ಭರ್ಜರಿ ಮುಂಗಾರು ಮಳೆ | ಸಿಹಿಕಹಿ ಸುದ್ದಿಕೊಟ್ಟ ಹವಾಮಾನ ಇಲಾಖೆ

ಸೋಲಾರ್ ವಿದ್ಯುತ್ ಜತೆಗೆ ಪಂಪ್‌ಸೆಟ್’ಗಳು ಸಕ್ರಮ

ನಿನ್ನೆ (ಮಾರ್ಚ್ 6) ಸುದ್ದಿಗಾರರಿಗೆ ಮಾಹಿತಿ ನೀಡಿದ ಇಂಧನ ಸಚಿವರು, ರಾಜ್ಯದಲ್ಲಿ 2008 ರಿಂದ 2023ರ ಸೆಪ್ಟೆಂಬರ್ 22ರ ವರೆಗೆ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕಕ್ಕೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಇವುಗಳಲ್ಲಿ 40,000 ಕೃಷಿ ಪಂಪ್‌ಸೆಟ್‌ಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ‘ಕುಸುಮ್ ಬಿ ಯೋಜನೆ’ಯಡಿ (Kusum B Solar Scheme) ಸೌರ ವಿದ್ಯುತ್ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಲಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ ಸದ್ಯ 34 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. ಪ್ರತಿ ವರ್ಷ ಸುಮಾರು 1.20 ಲಕ್ಷ ಕೃಷಿ ಪಂಪ್‌ಸೆಟ್‌ಗಳು ಹೊಸದಾಗಿ ಸೇರ್ಪಡೆಯಾಗುತ್ತಿವೆ. ನೀರಾವರಿ ಪಂಪ್‌ಸೆಟ್’ಗಳಿಗೆ ಪ್ರತಿ ದಿನ ಸುಮಾರು 4,500 ಮೆ.ವ್ಯಾ ವಿದ್ಯುತ್ ಬೇಕು. ಈ ವರ್ಷ 40,000 ಪಂಪ್‌ಸೆಟ್‌ಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು; ಇದರಿಂದ 3,000 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.

ಇದನ್ನೂ ಓದಿ: Free Horticulture training with stipend : ರೈತರಿಗೆ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ತರಬೇತಿ ಜೊತೆಗೆ ₹17,500 ಶಿಷ್ಯವೇತನ

ಯಾವೆಲ್ಲ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ?

ಮಾಮೂಲಿ ವಿದ್ಯುತ್ ಮಾರ್ಗ ಜಾಲದಿಂದ ಅರ್ಧ ಕಿಲೋ ಮೀಟರ್, ಅಂದರೆ 500 ಮೀಟರ್’ಗಿಂತ ಹೆಚ್ಚು ದೂರವಿರುವ ನೀರಾವರಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ ಸಿಗಲಿದೆ. ವಿದ್ಯುತ್ ಮಾರ್ಗ ಜಾಲದಿಂದ 500 ಮೀಟರ್ ಒಳಗಿದ್ದರೆ ಫೀಡರ್‌ನಿಂದ ವಿದ್ಯುತ್ ಸಂಪರ್ಕ ಮತ್ತು ಮೂಲಸೌಕರ್ಯ ಕಲ್ಪಿಸಲಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಸೌರ ಪಂಪ್‌ಸೆಟ್ ಅಳವಡಿಕೆಗೆ ರೈತರನ್ನು ಉತ್ತೇಜಿಸಲು ರಾಜ್ಯ ಸರ್ಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ.30 ರಷ್ಟು ಸಹಾಯಧನವನ್ನು ಶೇ.50 ಕ್ಕೆ ಹೆಚ್ಚಿಸಿದೆ. ಒಟ್ಟಾರೆ ಮೊತ್ತದಲ್ಲಿ ಶೇ.20 ರಷ್ಟನ್ನು ಮಾತ್ರ ರೈತರು ಭರಿಸಬೇಕಾಗಿರುತ್ತದೆ. ಇದಲ್ಲದೇ, ಯೋಜನೆಯಡಿ ರೈತರಿಗೆ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸಲಿದೆ ಎಂದು ಇಂಧನ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: PM-Surya Ghar Muft Bijli yojana 2024 : ಮನೆ ತಾರಸಿ ಸೋಲಾರ್ ವಿದ್ಯುತ್‌ಗೆ ₹78,000 ಸಬ್ಸಿಡಿ | ಸೋಲಾರ್ ವಿದ್ಯುತ್ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

ಬೆಂಗಳೂರಿನಲ್ಲಿ ರೈತ ಸೌರಶಕ್ತಿ ಮೇಳ

ಸೌರಶಕ್ತಿಯ ಬಳಕೆ ಮೂಲಕ ರೈತರನ್ನು ಸ್ವಾವಲಂಬನೆ ಆಗಿಸುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ‘ಕುಸುಮ್ ಬಿ’ ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ. ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್‌ಸೆಟ್ ಬಳಕೆಯೇ ಉತ್ತಮ ಪರಿಹಾರವಾಗಿದ್ದು; ಈ ಬಗ್ಗೆ ರೈತರಿಗೆ ಅರಿವು ಮೂಡಿಸಲು ಇದೇ ಮಾರ್ಚ್ 9 ರಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ‘ರೈತ ಸೌರಶಕ್ತಿ ಮೇಳ’ (Raita Solar Shakti Mela) ಆಯೋಜಿಸಲಾಗಿದೆ.

ಸೋಲಾರ್ ವಿದ್ಯುತ್ ಕುರಿತು ರೈತರಲ್ಲಿರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ರೈತ ಸೌರಶಕ್ತಿ ಮೇಳವು ಅತ್ಯುತ್ತಮ ವೇದಿಕೆಯಾಗಿದೆ. ಮೇಳದಲ್ಲಿ ವಿನೂತನ ಮಾದರಿಯ ಸೋಲಾರ್ ಪಂಪ್‌ಸೆಟ್‌ಗಳ ಪ್ರಾತ್ಯಕ್ಷಿಕೆಯನ್ನು ನೋಡಿ, ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿದೆ.

ಇದನ್ನೂ ಓದಿ: PM Kisan 16th Installment : ಸಣ್ಣ ರೈತರ ಬ್ಯಾಂಕ್ ಖಾತೆಗೆ 2,000 ರೂಪಾಯಿ ಜಮಾ | ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ರೈತ ಸೌರಶಕ್ತಿ ಮೇಳದಲ್ಲಿ ಏನಿರುತ್ತೆ?

  • ರೈತ ಸೌರಶಕ್ತಿ ಮೇಳದಲ್ಲಿ ವಿವಿಧ ಸೌರ ವಿದ್ಯುತ್ ಉತ್ಪನ್ನಗಳ ಮಳಿಗೆಗಳು ಇಲಿದ್ದು; ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ರೈತರಿಗೆ ಈ ಮೇಳದಲ್ಲಿ ಸೌರ ಪಂಪ್‌ಸೆಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.
  • ಸೌರ ಪಂಪ್‌ಸೆಟ್‌ಗಳು ಹೇಗೆ ಕೆಲಸ ಮಾಡುತ್ತವೆ. ಅದರಿಂದ ರೈತರಿಗಾಗುವ ಅನುಕೂಲವನ್ನು ನೇರವಾಗಿ ನೋಡಲು ಸೌರ ಘಟಕಗಳ ಪ್ರಾತ್ಯಕ್ಷಿಕೆ ಆಯೋಜಿಸಲಾಗುತ್ತದೆ.
  • ರೈತರಿಗಾಗಿ ಸಂವಾದ ಕಾರ್ಯಕ್ರಮ ಏರ್ಪಡಿಸಲಿದ್ದು; ಸೌರ ಪಂಪ್‌ಸೆಟ್‌ಗಳ ಉತ್ಪಾದಕರು, ಮಾರಾಟಗಾರರು, ಬ್ಯಾಂಕ್ ಅಧಿಕಾರಿಗಳು, ಕೃಷಿ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ಸಂವಾದದಲ್ಲಿ ಪಾಲ್ಗೊಂಡು ರೈತರಿಗೆ ಮಾಹಿತಿ ಒದಗಿಸಲಿದ್ದಾರೆ.

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್ ಲಿಂಕ್ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ಅರ್ಜಿ ಸಲ್ಲಿಕೆಗೆ ಸೌರಮಿತ್ರ ಆ್ಯಪ್ (Souramitra App)

ಮೊದಲೇ ಹೇಳಿದಂತೆ ಈಗಾಗಲೇ 2008 ರಿಂದ 2023ರ ಸೆಪ್ಟೆಂಬರ್ 22ರ ವರೆಗೆ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳ ರೈತರು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 40,000 ರೈತರಿಗೆ ಈ ವರ್ಷ ಸೋಲಾರ್ ಸಂಪರ್ಕ ದೊರೆತು, ಅಷ್ಟೂ ಪಂಪ್‌ಸೆಟ್’ಗಳು ಸಕ್ರಮವಾಗಲಿವೆ.

ಇನ್ನು ಹೊಸದಾಗಿ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಆಸಕ್ತಿ ಇರುವ ರೈತರಿಗಾಗಿ ಆನ್‌ಲೈನ್ ಪೋರ್ಟಲ್ ಸಿದ್ಧಪಡಿಸಲಾಗಿದೆ. ಜತೆಗೆ ಮೇಳದಲ್ಲಿ ‘ಸೌರ ಮಿತ್ರ’ (Souramitra App) ಮೊಬೈಲ್ ಆ್ಯಪ್ ಬಿಡುಗಡೆಯಾಗಲಿದ್ದು, ಈ ಆ್ಯಪ್ ಮೂಲಕ ರೈತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Solar Agriculture Pumpset : ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಭಾಗ್ಯ | ಇಂಧನ ಇಲಾಖೆಗೆ ಬಜೆಟ್ ಕೊಡುಗೆ

PM Surya Ghar Muft Bijli Jojana 2024 : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

WhatsApp Group Join Now
Telegram Group Join Now

Related Posts

error: Content is protected !!