ಉದ್ಯೋಗ

SSC Sub Inspector Recruitment 2024 : 4,000+ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ | ಸಂಬಳ ₹1,12,400 ರೂಪಾಯಿ | ಈಗಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

SSC Sub Inspector Recruitment 2024 : ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ನಿರೀಕ್ಷೆಯಲ್ಲಿರುವವರಿಗೆ ಸಿಬ್ಬಂದಿ ನೇಮಕಾತಿ ಆಯೋಗವು 4,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…

ಕೇಂದ್ರ ಸಿಬ್ಬಂದಿ ಆಯೋಗವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (Central Armed Police Force-CAPF) ಹಾಗೂ ದೆಹಲಿ ಪೊಲೀಸ್ (Delhi Police) ಇಲಾಖೆಗಳಲ್ಲಿ ಖಾಲಿ ಇರುವ ಸಬ್ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅರ್ಹತೆ, ವಯೋಮಿತಿ ವಿವರ, ಮಾಸಿಕ ಸಂಬಳ, ಅರ್ಜಿ ಸಲ್ಲಿಸುವ ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ…

ಇದನ್ನೂ ಓದಿ: KLA Recruitment 2024 : ಎಸ್ಸೆಎಸ್ಸೆಲ್ಸಿ ಪಾಸಾದವರಿಂದ ಕರ್ನಾಟಕ ವಿಧಾನ ಪರಿಷತ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 42,000 ರೂಪಾಯಿ ಸಂಬಳ

SSC Sub Inspector Recruitment 2024 ಹುದ್ದೆಗಳ ಸಂಕ್ಷಿಪ್ತ ವಿವರ

 • ನೇಮಕಾತಿ ಸಂಸ್ಥೆ : ಕೇಂದ್ರ ಸಿಬ್ಬಂದಿ ಆಯೋಗ (Staff Selection Commission-SSC)
 • ಖಾಲಿ ಹುದ್ದೆಗಳು : 4,187 ಹುದ್ದೆಗಳು
 • ಹುದ್ದೆಗಳ ಹೆಸರು : ಪೊಲೀಸ್ ಸಬ್ಇನ್ಸ್‌ಪೆಕ್ಟರ್ (Police Sub Inspector)
 • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
 • ಉದ್ಯೋಗ ಸ್ಥಳ : ಭಾರತದಾದ್ಯಂತ

ಇಲಾಖಾವಾರು ಖಾಲಿ ಹುದ್ದೆಗಳ ವಿವರ

 • ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) : 4,001 ಹುದ್ದೆಗಳು
 • ದೆಹಲಿ ಪೊಲೀಸ್ ಇಲಾಖೆಯಲ್ಲಿ : 186 ಹುದ್ದೆಗಳು
 • ಒಟ್ಟು ಹುದ್ದೆಗಳು – 4,187 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ (Educational qualification)

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದ ಅಭ್ಯರ್ಥಿಗಳು ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಪದವಿ ಮುಗಿಸಿದವರು ಅಷ್ಟೇ ಅಲ್ಲದೆ, ಪದವಿ ಶಿಕ್ಷಣದ ಅಂತಿಮ ಸೆಮಿಸ್ಟರ್’ನಲ್ಲಿ (Final semester) ಓದುತ್ತಿರುವವರು ಕೂಡ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ ವಿವರ (Age limit)

SSC Sub Inspector recruitment 2024 ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ದೆಹಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಟ 25 ವರ್ಷದೊಳಗಿರಬೇಕು.

ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ನಿಯಮಗಳ ಅನುಸಾರ OBC ಅಭ್ಯರ್ಥಿಗಳಿಗೆ 03 ವರ್ಷ ಹಾಗೂ SC / ST ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: NWKRTC Driver recruitment 2024 : ಪಿಯುಸಿ ಪಾಸಾದವರಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಾಸಿಕ ಸಂಬಳ ಮತ್ತು ಆಯ್ಕೆ ವಿಧಾನ ಹೇಗೆ?

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ದೆಹಲಿ ಪೊಲೀಸ್ ಇಲಾಖೆಯಲ್ಲಿ ಸಬ್ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ – ₹35,400 ರಿಂದ ₹1,12,400 ವರೆಗೆ ಮಾಸಿಕ ಸಂಬಳವಿರುತ್ತದೆ.

ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಜನರಲ್ ನಾಲೆಜ್ ಮತ್ತು ಅವರ್ನೆಸ್, ಎಲಿಮೆಂಟರಿ ಮ್ಯಾಥೆಮ್ಯಾಟಿಕ್ಸ್ ಮತ್ತು ಇಂಗ್ಲಿಷ್ ವಿಷಯದ 4 ಪತ್ರಿಕೆಗಳಿರುತ್ತವೆ. ಇದರಲ್ಲಿ ಪಾಸಾದವರಿಗೆ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು

SSC Sub Inspector recruitment 2024 ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಮಂಗಳೂರು, ಕಲಬುರಗಿ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ.

ಇದನ್ನೂ ಓದಿ: Land Surveyor Recruitment 2024 : ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ | ₹47,650 ರೂಪಾಯಿ ಸಂಬಳ

ಅರ್ಜಿ ಶುಲ್ಕಗಳ ವಿವರ

ಸಬ್ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

ನೇಮಕಾತಿಯ ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 04-03-2024
 • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 28-03-2024

ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು

 • ಅಧಿಸೂಚನೆ : Download
 • ಅರ್ಜಿ ಸಲ್ಲಿಸುವ ಲಿಂಕ್ : Click here
 • ಸಹಾಯವಾಣಿ : 080-25502520, 9483862020

ಇದನ್ನೂ ಓದಿ: Village accountant recruitment 2024 :1000 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಪ್ರಕಟಣೆ | ಕಂದಾಯ ಸಚಿವರಿಂದ ಅಧಿಕೃತ ಮಾಹಿತಿ

WhatsApp Group Join Now
Telegram Group Join Now

Related Posts

error: Content is protected !!