ಸುದ್ದಿಗಳುಹವಾಮಾನ

ವಾಯುಭಾರ ಕುಸಿತ | ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆಯೋ ಮಳೆ Storm Effect : Heavy rain in these districts

WhatsApp Group Join Now
Telegram Group Join Now

Storm Effect : Heavy rain in these districts : ರಾಜ್ಯಕ್ಕೆ ಮುಂಗಾರು ಮಳೆ ಅಡಿ ಇಡುವ ಮೊದಲೇ ಮಾನ್ಸೂನ್ ವಾತಾವರಣ ಸೃಷ್ಟಿಯಾಗಿದೆ. ಬೆಂಕಿ ಬಿಸಿಲಿನಿಂದ ಬೆಂದು ಬಸವಳಿದಿದ್ದ ಭೂಮಿ ಹಠಾತ್ ಹಸಿರು ಹೊದ್ದು; ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ 11 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಭಾರತದಲ್ಲಿ ಈ ವರ್ಷ ಮುಂಗಾರು ಮಳೆ ಸಾಮಾನ್ಯ ಪ್ರಮಾಣಕ್ಕಿಂತ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 2023ರಲ್ಲಿ ಜೂನ್ 8ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. 2022ರಲ್ಲಿ ಮೇ 29, 2021ರಲ್ಲಿ ಜೂನ್ 3 ಹಾಗೂ 2020ರಲ್ಲಿ ಜೂನ್ 1ರಂದು ಮುಂಗಾರು ಮಾರುತಗಳ ಆಗಮನವಾಗಿತ್ತು. ಈ ವರ್ಷ ಇದೇ ಮೇ 31ರಂದು ನೈರುತ್ಯ ಮಾರುತಗಳು ಕೇರಳ ಪ್ರವೇಶಿಸಲಿದ್ದು; ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ವ್ಯಾಪಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸದ್ಯ ನೈರುತ್ಯ ಮಾನ್ಸೂನ್ ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದಲಿದ್ದು, ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಭಾಗಗಳು, ಅಂಡಮಾನ್ ಸಮುದ್ರ ಮತ್ತು ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮುಂದುವರೆದಿದೆ. ಇದರಿಂದಾಗಿ ರಾಜ್ಯದಲ್ಲಿ ಕೂಡ ಮಳೆ ಮುಂದುವರೆದಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ರೈತರ ಖಾತೆಗೆ ಮುಂಗಾರು ಬೆಳೆ ವಿಮೆ ಪರಿಹಾರ | ಕೃಷಿ ಸಚಿವರ ಸೂಚನೆ 2023 Khariff Crop Insurance Settlement

ಭರ್ಜರಿ ಸುರಿದ ಮುಂಗಾರು ಪೂರ್ವ ಮಳೆ

ರಾಜ್ಯದಲ್ಲಿ ವಾಡಿಕೆಯಂತೆ ಪೂರ್ವ ಮುಂಗಾರಿನಿAದ ಮೇ 23ರ ವರೆಗೆ 90 ಮಿ.ಮೀ ಮಳೆ ಆಗಬೇಕಿತ್ತು. ಆದರೆ 128 ಮಿ.ಮೀ ಮಳೆಯಾಗಿದೆ. ರಾಜ್ಯದ 8 ಜಲ್ಲೆಗಳಲ್ಲಿ ಅತಿಹೆಚ್ಚು, 15 ಜಿಲ್ಲೆಗಳಲ್ಲಿ ಹೆಚ್ಚು ಹಾಗೂ 8 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದ್ದು; ಕೇವಲ 12 ತಾಲ್ಲೂಕುಗಳಲ್ಲಿ ಮಾತ್ರ ಪೂರ್ವ ಮುಂಗಾರು ಮಳೆ ಪ್ರಮಾಣ ಅತಿ ಕಡಿಮೆಯಾಗಿದೆ.

ಏಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 32 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಕೇವಲ 21 ಮಿ.ಮೀ ಮಳೆ ಆಗಿದೆ. ಮೇ ತಿಂಗಳಲ್ಲಿ ಮೇ 23ರ ವರೆಗೆ ವಾಡಿಕೆಯಂತೆ 48 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಎರಡು ಪಟ್ಟಿಗಿಂತ ಹೆಚ್ಚಿಗೆ (106 ಮಿ.ಮೀ) ಮಳೆಯಾಗಿದೆ. ವಾಡಿಕೆಯ ಪ್ರಕಾರ ರಾಜ್ಯದಲ್ಲಿ ಜನವರಿಯಿಂದ ಈ ತನಕ 94 ಮಿ.ಮೀ ಮಳೆಯಾಗಬೇಕಿತ್ತು. ಸದ್ಯ 137 ಮಿ.ಮೀ ಮಳೆ ಸುರಿದಿರುವುದು ವಿಶೇಷ.

Storm Effect

ಇದನ್ನೂ ಓದಿ: Rajiv Gandhi Housing Scheme 2024 : ರಾಜೀವ್ ಗಾಂಧಿ ವಸತಿ ನಿಗಮದಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಈ ಜಿಲ್ಲೆಗಳಲ್ಲಿ ಮಳೆಯೋ ಮಳೆ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಒಟ್ಟು 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳ ಕಾಲ ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಹಾವೇರಿ, ಚಿತ್ರದುರ್ಗ, ಮೈಸೂರು, ತುಮಕೂರು, ಕೊಡಗು ಹಾಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗಾಳಿ 40 ರಿಂದ 50 ಕಿ.ಮೀ. ಗಂಟೆ ವೇಗದಲ್ಲಿ ಬೇಸಲಿದೆ ಇದರ ಜತೆ ಭಾರಿ ಮಳೆ ಕೂಡ ಆಗಲಿದೆ.

ಇನ್ನು ಉತ್ತರ ಕನ್ನಡ, ಹಾಸನ, ಮಂಡ್ಯ, ದಾವಣಗೆರೆ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ. ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದಿದೆ.

ಇದನ್ನೂ ಓದಿ: PM – Surya Ghar Muft Bijli Jojana : ಮನೆಮನೆಗೂ ಉಚಿತ ಸೋಲಾರ್ ವಿದ್ಯುತ್ | ಪ್ರಧಾನ್‌ಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

WhatsApp Group Join Now
Telegram Group Join Now

Related Posts

error: Content is protected !!