ಸುದ್ದಿಗಳುಹವಾಮಾನ

Summer diseases : ಹೆಚ್ಚಿದ ಉರಿ ಬಿಸಿಲಿಗೆ ಸಾಂಕ್ರಾಮಿಕ ರೋಗಗಳ ಹಾವಳಿ | ಆರೋಗ್ಯ ಇಲಾಖೆ ಕಟ್ಟೆಚ್ಚರ

WhatsApp Group Join Now
Telegram Group Join Now

Summer diseases : ರಾಜ್ಯಾದ್ಯಂತ ಉಲ್ಬಣಿಸಿರುವ ಬಿರು ಬಿಸಿಲು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ರಾಜ್ಯದಲ್ಲಿ ಗರಿಷ್ಠ ತಾಪಮಾನ (Maximum temperature) 40 ಡಿಗ್ರಿಯ ಆಸುಪಾಸಿನಲ್ಲಿ ಇರುವುದರಿಂದ ಆರೋಗ್ಯ ಸಂಬ೦ಧಿ ಸಮಸ್ಯೆಗಳು ದಿನೇದಿನೆ ತೀವ್ರವಾಗುತ್ತಿವೆ. ಒಂದೆಡೆ ಕುಡಿಯುವ ನೀರಿನ ತತ್ವಾರ ಎದುರಾದರೆ, ಮತ್ತೊಂದು ಕಡೆಗೆ ಶುಷ್ಕ ವಾತಾವರಣದ ದೆಸೆಯಿಂದ ಅನೇಕ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ.

ಬಿರುಬಿಸಿಲು, ಅಧಿಕ ಉಷ್ಣಾಂಶಕ್ಕೆ ಸಂಬ೦ಧಿಸಿದ ಸನ್ ಸ್ಟ್ರೋಕ್, ಮೈಗ್ರೇನ್ (Migraine), ಚರ್ಮ ರೋಗ, ಟೈಫಾಯ್ಡ್ ಸೇರಿದಂತೆ ವಿವಿಧ ಜ್ವರದ ಸಮಸ್ಯೆಗಳಿಂದ ರಾಜ್ಯದ ಹಲವು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಬ್ಯಾಕ್ಟೀರಿಯಾ, ವೈರಸ್‌ಗಳು ಹರಡುವ ಮೂಲಕ ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಇದನ್ನೂ ಓದಿ: Kotak Suraksha Scholarship Program 2024 : 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ | ಅರ್ಹ ಅಭ್ಯರ್ಥಿಗಳೇ ಈಗಲೇ ಅರ್ಜಿ ಸಲ್ಲಿಸಿ

ಯಾವೆಲ್ಲ ಕಾಯಿಲೆಗಳ ಹಾವಳಿ?

ಬೇಸಿಗೆಯಲ್ಲಿ ಕರಳುಬೇನೆ, ನಿರ್ಜಲೀಕರಣ (Dehydration), ಮೂಗಿನಲ್ಲಿ ರಕ್ತಸ್ರಾವ, ವಾಂತಿ-ಭೇದಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಜತೆಗೆ ಕಣ್ಣಿನ ತೊಂದರೆ, ಮಕ್ಕಳನ್ನು ಬಾಧಿಸುವ ಚಿಕನ್ ಫಾಕ್ಸ್ (ಅಮ್ಮ), ಟೈಫಾಯ್ಡ್ ಜ್ವರ (typhoid fever), ತಲೆ ಸುತ್ತು, ಸನ್ ಸ್ಟ್ರೋಕ್ (Sun stroke), ಅರೆತಲೆನೋವು, ತುರಿಕೆಯಂತಹ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ.

ವೈರಾಣು ಜ್ವರ ಹಾಗೂ ಟೈಫಾಯ್ಡ್ ಜ್ವರದಿಂದಾಗಿ ಮೈಕೈ ನೋವು, ಮೂಗಿನಲ್ಲಿ ಸೋರುವಿಕೆಯಂತಹ ಸಮಸ್ಯೆಯಿಂದ ಆಸ್ಪತ್ರೆಗೆ ದೌಡಾಯಿಸುವವರ ಸಂಖ್ಯೆ ಶೇ.30ರಷ್ಟು ಹೆಚ್ಚಾಗಿದೆ ಎನ್ನುತ್ತಾರೆ ವೈದ್ಯರು. ಅದರಲ್ಲೂ ಹೆಚ್ಚುತ್ತಿರುವ ಉಷ್ಣಾಂಶ ಹಾಗೂ ಬಿಸಿ ಗಾಳಿಯಿಂದ ನಿರ್ಜಲೀಕರಣ, ಅತಿಸಾರದಂತಹ ಸಮಸ್ಯೆಯನ್ನು ಅನೇಕರು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: Karnataka Rain Report 2024 : ಈ ವರ್ಷ ಭರ್ಜರಿ ಮುಂಗಾರು ಮಳೆ | ಬೇಸಿಗೆ ಮಳೆ ನೀಡಿದ ಮುನ್ಸೂಚನೆ

ಬೇಸಿಗೆಲ್ಲ ಕಾಡುವ ರೋಗಗಳು

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಕೆಲವು ನಿರ್ಧಿಷ್ಟ ಕಾಯಿಲೆಗಳು ಸಹಜವಾಗಿರುತ್ತವೆ. ಅದರಲ್ಲೂ ಈ ವರ್ಷ ಬರಗಾಲದ ಪರಿಸ್ಥಿತಿ ಇರುವುದರಿಂದ ಸಾಮಾನ್ಯ ಬೇಸಿಗೆಯ ತಾಪಮಾನಕ್ಕಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಯಾವೆಲ್ಲ ಬ್ಯಾಕ್ಟೀರಿಯಾ, ವೈರಸ್’ಗಳು ಬೇಸಿಗೆಯಲ್ಲಿ ಸಕ್ರೀಯವಾಗಿರುತ್ತವೆ ಹಾಗೂ ಅವುಗಳಿಂದ ಎದುರಾಗುವ ಆರೋಗ್ಯ ಸಂಬ೦ಧಿ ಸಮಸ್ಯೆಗಳೇನು? ಎಂಬುವುದನ್ನು ಇಲ್ಲಿ ನೋಡೋಣ:

  • ಬ್ಯಾಕ್ಟೀರಿಯಾ ಸೋಂಕಾಗಿರುವ ಟೈಫಾಯಿಡ್ ಜ್ವರ ಸಾಲ್ಮೊನೆಲ್ಲಾ ಎಂಟರಿಕಾ ಮತ್ತು ಸಿರೊಟೈಪ್ ಟೈಫಿ ಎಂಬ ಎರಡು ಬ್ಯಾಕ್ಟೀರಿಯಾಗಳಿಂದ ಹರಡುತ್ತದೆ.
  • ವ್ಯಾರಿಸೆಲ್ಲಾ ಝಾಸ್ಟರ್ ವೈರಸ್‌ನಿಂದ ಚಿಕನ್‌ಫಾಕ್ಸ್ (ಅಮ್ಮ) ಕಾಯಿಲೆ ಬರುತ್ತದೆ.
  • ಇನ್ನು ಹೆಪಟೈಟಿಸ್ ಎ ಎಂಬ ವೈರಸ್‌ನಿಂದ ಜಾಂಡೀಸ್ ಕಾಯಿಲೆ ಆರಂಭವಾಗುತ್ತದೆ.
  • ಎಂಟೆರೋ ವೈರಸ್‌ನಿಂದ ಮಕ್ಕಳಲ್ಲಿ ವಾಂತಿ ಭೇದಿ ಉಂಟಾಗುತ್ತದೆ.

ಕಲುಷಿತ ನೀರಿನ ಸೇವನೆ, ಶುಷ್ಕ ವಾತಾವರಣದಿಂದ ಬ್ಯಾಕ್ಟೀರಿಯಾ ಹಾವಳಿ ಹೆಚ್ಚಾಗಿ ಈ ಕಾಯಿಲೆಗಳು ಹರಡಲು ಕಾರಣವಾಗುತ್ತದೆ. ಇವುಗಳ ಜತೆಗೆ ಕಣ್ಣು ಕೆಂಪಾಗುವುದು, ಬೆವರು ತುರಿಕೆ, ಕಣ್ಣಲ್ಲಿ ನೀರು, ಮದ್ರಾಸ್ ಐ ನಂತಹ ಸಮಸ್ಯೆಗಳೂ ಹೆಚ್ಚಾಗುತ್ತಿವೆ.

ಇದನ್ನೂ ಓದಿ: karnataka Heat Wave : ರಾಜ್ಯದ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಬೆಂಕಿ ಬಿಸಿಲು | ಅಧಿಕ ಉಷ್ಣಾಂಶದ ಜಿಲ್ಲೆಗಳ ಪಟ್ಟಿ ಬಿಡುಗಡೆ

ಆರೋಗ್ಯ ಇಲಾಖೆ ಮಾರ್ಗಸೂಚಿ

ಈ ವರ್ಷದ ವಾತಾವರಣದ ವೈಪರೀತ್ಯವನ್ನು ಮೊದಲೇ ಅಂದಾಜಿಸಿರುವ ಆರೋಗ್ಯ ಇಲಾಖೆಯು ಕಳೆದ ಮಾರ್ಚ್ 2ರಂದು ತುರ್ತು ಕ್ರಮಗಳ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಇದೀಗ ಸಾಂಗ್ರಾಮಿಕ ರೋಗಗಳ ಹಾವಳಿ ಹೆಚ್ಚಾದ ಪ್ರಯುಕ್ತ ಪುನಃ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಆರೋಗ್ಯ ಇಲಾಖೆ ಆಯುಕ್ತರು ಮತ್ತೊಮ್ಮೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಈ ಕೆಳಕಂಡ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದಾರೆ:

  • ಸೂಕ್ತ ಚಿಕಿತ್ಸೆಗೆ ಅಗತ್ಯವಾದ ಜೀವ ರಕ್ಷಕ ಔಷಧವು ರಾಜ್ಯದ ಎಲ್ಲಾ ಆಸ್ಪತ್ರೆಯಲ್ಲೂ ಲಭ್ಯವಿರಬೇಕು.
  • ಹೆಚ್ಚಿನ ಔಷಧಿಯ ಅವಶ್ಯಕತೆ ಇದ್ದರೆ ಕರ್ನಾಟಕ ರಾಜ್ಯ ಡ್ರಗ್ಸ್ ಆ್ಯಂಡ್ ಲಾಜಿಸ್ಟಿಕ್ ವೇರ್ ಹೌಸ್ ಸೊಸೈಟಿಯಿಂದ ಔಷಧಿ ಖರೀದಿಸಬೇಕು.
  • ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರ ಬಳಿ ನಿರ್ಜಲೀಕರಣ ಸಮಸ್ಯೆ ಹಾಗೂ ನೀರಿನಿಂದ ಉಂಟಾಗುವ ಕಾಯಿಲೆಗಳ ನಿರ್ಮೂಲನೆಗಾಗಿ ಓಆರ್‌ಎಸ್ ಹಾಗೂ ಹಾಲೋಜೋನ್ ಮಾತ್ರೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ಮಾಡಬೇಕು ಎಂದು ಕಟ್ಟೆಚ್ಚರಿಕೆ ಕ್ರಮ ಹೊರಡಿಸಲಾಗಿದೆ.

ಇದನ್ನೂ ಓದಿ: Karnataka Heat Waves : ಕರ್ನಾಟಕದಲ್ಲಿ ‘ಶಾಖದ ಅಲೆ’ ಮುನ್ಸೂಚನೆ : ಹೇಗಿರಲಿವೆ ಮುಂದಿನ ದಿನಗಳು?

ಮುನ್ನೆಚ್ಚರಿಕೆ ಕ್ರಮಗಳೇನು?

ದೇಹದಲ್ಲಿ ತೇವಾಂಶ ಸಮತೋಲನವನ್ನು ಕಾಯ್ದುಕೊಳ್ಳಲು ಶುದ್ಧ ನೀರಿನ ಜತೆಗೆ ದೇಹಕ್ಕೆ ಶಕ್ತಿ ನೀಡುವಂತಹ ಹಣ್ಣಿನ ರಸ, ದ್ರವ ಆಹಾರ, ಫೈಬರ್ ಭರಿತ ತರಕಾರಿ ಸೇವನೆ, ಓರಲ್ ರೀ-ಹೈಡ್ರೇಷನ್ ಸೊಲ್ಯೂಷನ್ (Oral rehydration solution – ORS) ಕುಡಿಯಬೇಕು. ಗರ್ಭಿಣಿ ಸ್ತ್ರೀಯರು, ಮಾನಸಿಕ ಸಮಸ್ಯೆ, ಹೃದಯದ ಸಮಸ್ಯೆ ಹಾಗೂ ರಕ್ತದೊತ್ತಡ ಇರುವಂಥವರು ಆದಷ್ಟೂ ಜಾಗ್ರತೆಯಾಗಿ ಇರಬೇಕು.

ಯಾರಿಗಾದರೂ ದೇಹದ ಉಷ್ಣಾಂಶ ಹೆಚ್ಚಳವಾಗುವುದು, ಪ್ರಜ್ಞೆ ತಪ್ಪುವುದು, ಅತಿಯಾದ ಬೆವರಿಕೆ ಉಂಟಾಗಿ ಗೊಂದಲದಲ್ಲಿದ್ದರೆ ತಕ್ಷಣವೇ 108 ಅಥವಾ 102ಕ್ಕೆ ಕರೆ ಮಾಡಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Forest and Revenue Joint Survey : ರೈತರಿಗೆ ಅರಣ್ಯ ಭೂಮಿ ಮಂಜೂರಾತಿ | ಈ ಜಿಲ್ಲೆಗಳ ರೈತರಿಗೆ ಹಕ್ಕುಪತ್ರ?

WhatsApp Group Join Now
Telegram Group Join Now

Related Posts

error: Content is protected !!