ಪಶುಪಾಲನೆ

Summer sun danger to dairy farming : ಹೈನುಗಾರಿಕೆಗೆ ಆಪತ್ತು | ಬಿಸಿಲಿನಿಂದ ಹಾಲಿನ ಫ್ಯಾಟು, ಡಿಗ್ರಿ, ಇಳುವರಿ ಕುಸಿತ

WhatsApp Group Join Now
Telegram Group Join Now

Summer sun danger to dairy farming  : ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ದಿನೇ ದಿನೆ ತೀವ್ರವಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್’ಗಿಂತ ಹೆಚ್ಚು ದಾಖಲಾಗುತ್ತಿದೆ. ಹೀಗೆ ಮಿತಿ ಮೀರಿದ ಉಷ್ಣಾಂಶ ದಾಖಲಾದರೆ ಅದನ್ನು ‘ಉಷ್ಣ ಅಲೆ’ಯ ಮುನ್ಸೂಚನೆ ಎಂದು ಹೇಳಲಾಗುತ್ತದೆ. ಈ ರೀತಿಯ ವಾತಾವರಣ ಹಲವು ಸಂಕಷ್ಟಗಳಿಗೆ ಕಾರಣವಾಗಲಿದೆ. ಈ ಪೈಕಿ ಹೈನುಗಾರಿಕೆಯೂ ಒಂದಾಗಿದೆ.

ಹೌದು, ಉರಿ ಬಿಸಿಲಿನ ಕಾರಣಕ್ಕೆ ಹೈನುಗಾರಿಕೆ ನೆಲಕಚ್ಚಿದೆ. ನೀರು ಮೇವಿನ ತತ್ವಾರ ಒಂದು ಕಡೆಗಾದರೆ, ಮತ್ತೊಂದು ಕಡೆಗೆ ಅತಿಯಾದ ಉಷ್ಣತೆಯಿಂದ ಹಾಲಿ ಇಳುವರಿ ಕಮ್ಮಿಯಾಗುತ್ತಿದೆ. ಮಾತ್ರವಲ್ಲ ಹಾಲಿನ ಗುಣಮಟ್ಟ (milk degree) ಹಾಗೂ ಕೊಬ್ಬಿನಾಂಶ (milk fat) ಕಡಿಮೆ ಆಗುತ್ತಿರುವುದು ಹೈನುಗಾರರನ್ನು ಕಂಗಾಲು ಮಾಡಿದೆ.

ಸಮಸ್ಯೆಗಳ ನಡುವೆ ಹೊಸ ಕುತ್ತು!

ಮೊದಲೇ ‘ಹೈನುಗಾರಿಕೆ’ ಎಂಬುವುದು ಸಮಸ್ಯೆಗಳ ಸರಮಾಲೆಯುಳ್ಳ ಸವಾಲಿನ ಉದ್ಯಮವಾಗಿದೆ. ಸ್ವಂತ ಜಮೀನು ಇದ್ದೂ ಹೈನುಗಾರಿಕೆಯಿಂದ ಕೂಡ ನಿರೀಕ್ಷಿತ ಲಾಭ ಗಳಿಕೆ ಕಷ್ಟವಿದೆ. ಜತೆಗೆ ಸಕಾಲಕ್ಕೆ ಬಾರದ ಸರಕಾರದ ಹಾಲಿನ ಸಹಾಯಧನ (Milk subsidy), ಹಾಲಿನ ಬೆಲೆ ಕಡಿತ, ಪಶು ಆಹಾರ ದರ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಹೈನು ರೈತರಿಗೆ ಇದೀಗ ‘ಬಿಸಿಲು’ ಹೊಸ ಕುತ್ತಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಬಿಸಿಲ ತಾಪ ಹೆಚ್ಚುತ್ತಿದ್ದು, ನೀರಿನ ಕೊರತೆ ತೀವ್ರವಾಗುತ್ತಿದೆ. ನೀರಿನ ಕೊರತೆಯಿಂದ ಉತ್ತಮ ಮೇವಿನ ಅಭಾವ ತಲೆದೋರಿದೆ. ಜಾನುವಾರುಗಳಿಗೆ ಗುಣಮಟ್ಟದ ಆಹಾರ ನೀಡಲು ಪಶು ಆಹಾರ ದರ ಕೂಡ ಗಗನಮುಖಿಯಾಗಿದೆ. ಕಡಮೆ ಗುಣಮಟ್ಟದ ಮೇವು ನೀಡುತ್ತಿರುವುದರಿಂದ ಹಾಲಿನ ಗುಣಮಟ್ಟ ಮತ್ತು ಕೊಬ್ಬಿನಾಂಶದ ಹೇರಾಪೇರು ಆಗುತ್ತಿದೆ.

ಜೀವನಕ್ಕೆ ಆಸರೆಯಾಗಿದ್ದ ಹೈನುಗಾರಿಕೆ

ಕಳೆದ ಹಿಂಗಾರು ಮಳೆ ಹಾಗೂ ಮುಂಗಾರು ಮಳೆಗಳೆರಡೂ ವಿಫಲವಾಗಿದ್ದರಿಂದ ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದೆ. ಮಳೆ ಕೊರತೆಯಿಂದ ಕೃಷಿ ಆದಾಯಕ್ಕೆ ಕುತ್ತು ಬಂದ ಈ ಸಂದರ್ಭದಲ್ಲಿ ರೈತರಿಗೆ ಹಾಗೂ ಗ್ರಾಮೀಣ ಮಹಿಳೆಯರಿಗೆ ಬದುಕಿಗೆ ಆಗಿದ್ದೇ ಹೈನುಗಾರಿಕೆ. ಬೆಳೆ ನಷ್ಟದಿಂದ ಕಂಗಾಲಾಗಿದ್ದ ರೈತರು ಹೈನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದರು.

ಇದೀಗ ಜೀವನಕ್ಕೆ ಆಸರೆಯಾಗಿದ್ದ ಹೈನುಗಾರಿಕೆಗೆ ಅತಿಯಾದ ಬಿಸಿಲು ಕುತ್ತಾಗಿ ಪರಿಣಮಿಸಿದೆ. ರಾಜ್ಯದ ಬಹತೇಕ ಜಿಲ್ಲೆಗಳಲ್ಲಿ ಹಾಲಿನ ಶೇಖರಣೆ ಕಡಿಮೆ ಆಗುತ್ತಿದೆ. ಹಾಲಿನ ಗುಣಮಟ್ಟ (ಡಿಗ್ರಿ) ಹಾಗೂ ಕೊಬ್ಬಿನಾಂಶ (ಫ್ಯಾಟ್) ಕಡಿಮೆ ಆಗುತ್ತಿರುವುದರಿಂದ ಹಾಲು ಉತ್ಪಾದಕರ ಸಹಕಾರಿ ಸಂಘಗಳು ರೈತರ ಹಾಲು ಖರೀದಿ ವಿಚಾರವಾಗಿ ಧರ್ಮ ಸಂಕಟ ಎದುರಿಸುವಂತಾಗಿದೆ.

ಫ್ಯಾಟ್ ಬಂದರೆ ಡಿಗ್ರಿ ಇಲ್ಲ, ಡಿಗ್ರಿ ಬಂದರೆ ಫ್ಯಾಟ್ ಇಲ್ಲ

ಕಳಪೆ, ನಕಲಿ, ಕಲಬೆರಕೆ ಕಾರಣಕ್ಕೆ ಹಾಲು ಖರೀದಿಗೆ ನಿಗದಿತ ಗುಣಮಟ್ಟ ನಿಗದಿ ಮಾಡಲಾಗಿದೆ. ಡೈರಿಗಳು ನಿಗದಿ ಮಾಡಿದ ಗುಣಮಟ್ಟದ ಹಾಲು ಇದ್ದರೆ ಮಾತ್ರ ಖರೀದಿಸಲಾಗುತ್ತದೆ. ಗುಣಮಟ್ಟದಲ್ಲಿ ಹೆಚ್ಚು ಕಮ್ಮಿಯಾದರೆ ಹಾಲು ಖರೀದಿ ಕಷ್ಟ ಸಾಧ್ಯ. ಆದರೆ ಅಧಿಕ ಉಷ್ಣಾಂಶದ ದೆಸೆಯಿಂದ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವುದೇ ಹೈನುಗಾರರಿಗೆ ಸವಾಲಾಗಿದೆ.

ಸಾಮಾನ್ಯವಾಗಿ ಡಿಗ್ರಿ 29ರಷ್ಟು ಹಾಗೂ ಫ್ಯಾಟ್ 3.8ರಷ್ಟಿದ್ದರೆ ಮಾತ್ರ ಹಾಲು ಉತ್ಪಾದಕ ಸಂಘ ಹಾಗೂ ಬಲ್ಕ್ ಮಿಲ್ಕ್ ಕೂಲರ್’ಗಳಲ್ಲಿ (Bulk milk cooler) ಹಾಲು ಖರೀದಿಸಲಾಗುತ್ತದೆ. ಆದರೆ ಬಿಸಿಲಿನ ತಾಪ ಹೆಚ್ಚಾದಂತೆ ಡಿಗ್ರಿ 22ರಿಂದ 25ಕ್ಕೆ ಹಾಗೂ ಫ್ಯಾಟ್ 2.5ದಿಂದ 3.0ಕ್ಕೆ ಬರುತ್ತಿದೆ. ಕೆಲವೊಮ್ಮೆ ಡಿಗ್ರಿ ಬಂದರೆ ಫ್ಯಾಟ್ ಬರಲ್ಲ. ಫ್ಯಾಟ್ ಬಂದರೆ ಡಿಗ್ರಿ ಬರುತ್ತಿಲ್ಲ. ಡಿಗ್ರಿ ಅಥವಾ ಫ್ಯಾಟ್ ಬಾರದಿದ್ದರೆ ಹಾಲನ್ನು ವಾಪಸ್ ಕಳಿಸಲಾಗುತ್ತಿದೆ.

ಇದನ್ನೂ ಓದಿ :- 👇

Rain Forecast 2024 : ರಾಜ್ಯಕ್ಕೆ ವರವಾಗಲಿದೆ ಪೂರ್ವ ಮುಂಗಾರು ಮಳೆ | ಯುಗಾದಿ ಹೊತ್ತಿಗೆ ಎಲ್ಲೆಲ್ಲೂ ಮಳೆ

Karnataka Rain Report 2024 : ಈ ವರ್ಷ ಭರ್ಜರಿ ಮುಂಗಾರು ಮಳೆ | ಬೇಸಿಗೆ ಮಳೆ ನೀಡಿದ ಮುನ್ಸೂಚನೆ

karnataka Heat Wave : ರಾಜ್ಯದ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಬೆಂಕಿ ಬಿಸಿಲು | ಅಧಿಕ ಉಷ್ಣಾಂಶದ ಜಿಲ್ಲೆಗಳ ಪಟ್ಟಿ ಬಿಡುಗಡೆ

RTC aadhar card link : ರೈತರ ಮನೆ ಬಾಗಿಲಲ್ಲೇ ಪಹಣಿಗೆ ಆಧಾರ್ ಕಾರ್ಡ್ ಜೋಡಣೆ | ಕಂದಾಯ ಸಚಿವರ ಸೂಚನೆ

WhatsApp Group Join Now
Telegram Group Join Now

Related Posts

error: Content is protected !!