ಕೃಷಿಪಶುಪಾಲನೆ

Sun stress in livestock : ಜಾನುವಾರುಗಳಲ್ಲಿ ಬಿಸಿಲಿನ ಒತ್ತಡ | ಪಶು ವೈದ್ಯರ ಸಲಹೆಗಳು

WhatsApp Group Join Now
Telegram Group Join Now

Sun stress in livestock : ಬರಗಾರದಿಂದ ಕಂಗಾಲಾಗಿರುವ ರೈತರು ಬಿಸಿಲಿನಿ ಶಾಖದಿಂದ ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳುವುಯದೇ ಸವಾಲಿನ ಕೆಲಸವಾಗುತ್ತಿದೆ. ಹಸು, ಎಮ್ಮೆ, ಆಡು-ಕುರಿ, ಕೋಳಿಗಳು ಬಿಸಿಲಿನ ಒತ್ತಡದಿಂದ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಹೈನುಗಾರಿಕೆಯಲ್ಲಿ ಹಾಲಿನ ಡಿಗ್ರಿ, ಫ್ಯಾಟ್ ಕುಸಿತವಾಗಿದ್ದು; ಹಾಲಿನ ಇಳುವರಿ ಕೂಡ ಕಮ್ಮಿಯಾಗಿದೆ.

ಬೇಸಿಗೆಯ ಬಿಸಿಲು, ನೀರಿನ ಕೊರತೆ, ಒಣಹವೆ, ಹಸಿ ಮೇವಿನ ಕೊರತೆ, ಬಿಸಿಗಾಳಿಯಿಂದಾಗಿ ಜಾನುವಾರುಗಳು ವಿಪರೀತ ಒತ್ತಡ ಅನುಭವಿಸುತ್ತವೆ. ಇದರಿಂದಾಗಿ ಜಾನುವಾರುಗಳಲ್ಲಿ ಉತ್ಪಾದನೆ, ಕೆಲಸ ಮಾಡುವ ಸಾಮರ್ಥ್ಯ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ.

ಜಾನುವಾರುಗಳಲ್ಲಿ ಬಿಸಿಲಿನ ಒತ್ತಡದ ಲಕ್ಷಣಗಳು

ಉಸಿರಾಟ ಹಾಗೂ ಎದೆ ಬಡಿತ ಹೆಚ್ಚಾಗುತ್ತದೆ. ಬಾಯಿಂದ ಉಸಿರಾಟ, ಸುಸ್ತಾಗುವುದು, ತೇಕುವುದು, ಕಡಿಮೆ ಆಹಾರ ಸೇವನೆ, ಅತಿಯಾದ ಭೇದಿ, ಹೆಚ್ಚು ನೀರನ್ನು ಕುಡಿಯುವುದು, ಹಾಲಿನ ಉತ್ಪಾದನೆಯಲ್ಲಿ ಕುಸಿತ, ನೀರ್ಜಲೀಕರಣ, ಅತಿಯಾದ ಉಷ್ಣತೆಯಿಂದ ಬಾಯಿಯಲ್ಲಿ ಹುಣ್ಣು, ಜೊಲ್ಲು ಸೋರುವುದು, ಹಳದಿಮೂತ್ರ, ಉರಿಮೂತ್ರ, ರಕ್ತ ಮೂತ್ರ ಸೇರಿದಂತೆ ಹಲವಾರು ಆರೋಗ್ಯ ಸಂಬ೦ಧಿತ ತೊಂದರೆಗಳು ಉಂಟಾಗುತ್ತವೆ.

ಬೇಸಿಗೆಯಲ್ಲಿ ಜಾನುವಾರುಗಳಿಗೆ ಬರುವಂತಹ ರೋಗಗಳು

ಬೇಸಿಗೆಯ ಆರಂಭದಲ್ಲಿ ಕುರಿ ಹಾಗೂ ಆಡುಗಳಲ್ಲಿ ಹೀರೆ ಬೇನೆ ಕಂಡು ಬರುತ್ತದೆ. ಕೋಳಿಗಳಲ್ಲಿ ರಾಣಿಖೇತ ರೋಗ ಕಂಡುಬರುತ್ತದೆ. ಪ್ರಾಣಿಗಳಲ್ಲಿ ಕಾಲು ಮತ್ತು ಬಾಯಿ ರೋಗ ಸಹ ಕಂಡುಬರುತ್ತದೆ. ಬಿಸಿಲಿನ ಒತ್ತಡದಿಂದಾಗಿ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದಾಗಿ ವಿವಿಧ ರೋಗೋದ್ರೇಕಗಳು ಕಂಡುಬರುತ್ತವೆ. ಬೇಸಿಗೆಯಲ್ಲಿ ಉಣ್ಣೆಗಳ ಸಂತಾನೋತ್ಪತ್ತಿ ಅಧಿಕವಾಗಿರುವುದರಿಂದಾಗಿ ರಕ್ತ ಪರಾವಲಂಬಿ ಜೀವಿಗಳ ರೋಗಗಳಾದ ಬಬೇಸಿಯಾ, ಥಯಲೇರೀಯಾ ರೋಗಗಳು ಕಂಡುಬರುತ್ತವೆ.

ಬಿಸಿಲಿನ ಒತ್ತಡದಿಂದ ಜಾನುವಾರುಗಳ ಮೇಲಾಗುವ ಪರಿಣಾಮಗಳು

ಬಿಸಿಲು ಹಾಗೂ ಬಿಸಿ ಗಾಳಿಯಿಂದಾಗಿ ಜಾನುವಾರುಗಳ ದೇಹದ ತಾಪಮಾನ ಹೆಚ್ಚಾಗುತ್ತದೆ. ನಿರ್ಜಲೀಕರಣ ಹಾಗು ಬೇಧಿ ಕಂಡುಬರುತ್ತದೆ. ಹೆಚ್ಚಾದ ತಾಪಮಾನ ಹೋರ ಹಾಕಲು ಜಾನುವಾರುಗಳು ಹೆಚ್ಚು ಉಸಿರಾಡುತ್ತವೆ. ಹೆಚ್ಚು ನೀರು ಕುಡಿಯುತ್ತವೆ ಮತ್ತು ಕಡಿಮೆ ಮೇವು ತಿನ್ನುತ್ತವೆ. ಇದರಿಂದಾಗಿ ಎತ್ತುಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೈನು ರಾಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ.

ಕುರಿ ಹಾಗೂ ಆಡುಗಳಲ್ಲಿ ದೇಹದ ತೂಕ ಕಡಿಮೆಯಾಗುತ್ತದೆ. ಕುಕ್ಕುಟಗಳು ಇದ್ದಕ್ಕಿದ್ದಂತೆ ಮರಣ ಹೊಂದುತ್ತವೆ. ದೇಹದ ತೂಕ ಕಡಿಮೆಯಾಗುತ್ತದೆ. ಎಮ್ಮೆಗಳಲ್ಲಿ ಬೇವರು ಗ್ರಂಥಿಗಳು ಇರುವುದಿಲ್ಲ, ಇದರಿಂದ ಹೆಚ್ಚು ಒತ್ತಡಕ್ಕೆ ಒಳಗಾಗುತ್ತವೆ. ಆದ್ದರಿಂದ ಮಧ್ಯಾಹ್ನದ ಅವಧಿಯಲ್ಲಿ ನೀರಿನ ತೊಟ್ಟಿಯಲ್ಲಿ ಬಿಡಬೇಕು. ಇಲ್ಲವೇ ನೀರು ಸಿಂಪಡಿಸುವ ಯಂತ್ರಗಳನ್ನು ಅಳವಡಿಸಬೇಕು.

ಜಾನುವಾರುಗಳಿಗೆ ಮಾಡಬೇಕಾದ ಪ್ರಥಮ ಚಿಕಿತ್ಸೆ

ಬಿಸಿಲಿನಿಂದಾಗಿ ಸುಸ್ತಾಗಿರುವ ಜಾನುವಾರುಗಳಿಗೆ ಕೂಡಲೇ ಶುದ್ಧವಾದ ನೀರಿನೊಂದಿಗೆ 400-500 ಗ್ರಾಂ ಬೆಲ್ಲ ಸೇರಿಸಿ ಕೊಡಬೇಕು. ಜಾನುವಾರು ಮೈ ಮೇಲೆ ತಂಪಾದ ಹತ್ತಿ ಬಟ್ಟೆ ಹಾಕಬೇಕು. 2 ರಿಂದ 3 ದಿನಗಳ ವರೆಗೆ ತಿನ್ನಲು ಹಸಿ ಮೇವನ್ನು ನೀಡಬೇಕು. ಆದಷ್ಟು ಹಿಂಡಿ ಮತ್ತು ಚುನ್ನಿ ಮಿಶ್ರಣ ಕೊಡಬಾರದು.

ನೀರು ಹಾಗೂ ಎಲೆಕ್ಟಿçರೋಲೈಟ ಮಿಶ್ರಣಗಳನ್ನು ನಿಯಮಿತವಾಗಿ ನೀಡಬೇಕು. ಚನ್ನಾಗಿ ಗಾಳಿ ಹಾಗೂ ಬೆಳಕು ಬರುವ ಕೋಣೆಯಲ್ಲಿ ಜಾನುವಾರುಗಳನ್ನು ಸ್ಥಳಾಂತರಿಸಬೇಕು. ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೋಡಿಸಬೇಕು.

ರೈತರು ಕೈಗೊಳಬೇಕಾದ ಮುನ್ನೆಚರಿಕೆ ಕ್ರಮಗಳು

ಬೇಸಿಗೆ ಆರಂಭಕ್ಕಿ೦ತ ಮುಂಚೆ ಜಾನುವಾರುಗಳಿಗೆ ಜಂತುನಾಶಕ ಔಷಧಿ ಕುಡಿಸಬೇಕು. ಚಳಿಗಾಲದ ಅಂತ್ಯದಲ್ಲಿ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗದ ಲಸಿಕೆ ಹಾಕಿಸಬೇಕು. ಕುರಿ ಹಾಗೂ ಆಡುಗಳಿಗೆ ಪಿಪಿಆರ್ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು. ಕುಕ್ಕುಟಗಳಿಗೆ ರಾಣಿಖೇತ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು.

ಜಾನುವಾರುಗಳಿಗೆ ಆದಷ್ಟು ಬಿಸಿಲಿನ ನೇರ ಸಂಪರ್ಕ ತಪ್ಪಿಸಿ. ಜಾನುವಾರುಗಳ ಮೈಮೇಲಿರುವ ಹೋರ ಪರೋಪ ಜೀವಿಗಳ ನಿಯಂತ್ರಣ ಮಾಡಬೇಕು. ಬಿಸಿಲಿನಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಬಾರದು. ಬಿಸಿಲಿನಲ್ಲಿ ಎತ್ತುಗಳಿಂದ ಕೆಲಸ ಮಾಡಿಸಬಾರದು. ಬೇಸಿಗೆಯಲ್ಲಿ ಕಟಾವಿಗೆ ಬರುವಂತೆ ಹಸಿ ಮೇವನ್ನು ಬೆಳೆಸಬೇಕು.

ರೈತರು ಕೈಗೊಳಬೇಕಾದ ಸಂರಕ್ಷಣ ಕ್ರಮಗಳು

ಜಾನುವಾರುಗಳಿಗೆ ಆದಷ್ಟು ಬಿಸಿಲಿನ ನೇರ ಸಂಪರ್ಕ ತಪ್ಪಿಸಬೇಕು. ಶುದ್ದವಾದ ನೀರನ್ನು ಕುಡಿಯಲು ಕೊಡಬೇಕು. ಬೇಸಿಗೆಯಲ್ಲಿ ಜಾನುವಾರುಗಳನ್ನು ತಂಪಾದ ಅವಧಿಯಲ್ಲಿ ಮಾತ್ರ ಮೇಯಲು ಬೀಡಬೇಕು. (ಬೆಳ್ಳಿಗೆ 6 ರಿಂದ 10ರ ವರೆಗೆ ಮತ್ತು ಸಾಯಂಕಾಲ 5 ರಿಂದ 7ರ ವರೆಗೆ) ಬೆದೆಗೆ ಬಂದ ರಾಸುಗಳಿಗೆ ತಂಪಾದ ಹೊತ್ತಿನಲ್ಲಿ ಕೃತಕ ಗರ್ಭಧಾರಣೆ ಮಾಡಿಸಬೇಕು.

ಹೆಚ್ಚು ಹಸಿರು ಮೇವನ್ನು ತಿನ್ನಿಸಬೇಕು. ಬೇಸಿಗೆಯಲ್ಲಿ ಹಸಿ ಮೇವಿನ ಕೊರತೆ ಉಂಟಾಗದ೦ತೆ ನುಗ್ಗೆ, ಹಿಪ್ಪು ನೆರಳೆ, ಬಸವನಪಾದ, ಸುಬಾಬುಲ, ಕರಿಬೇವು, ಕಬ್ಬಿನ ಏಲೆಗಳನ್ನು ಹಸಿ ಮೇವಾಗಿ ಬಳಸಬಹುದು.

ಕುರಿ ಮತ್ತು ಆಡುಗಳನ್ನು ಮಧ್ಯಾಹ್ನ ಹೊತ್ತಿನಲ್ಲಿ ಮರಗಳ ಕೆಳಗೆ ನಿಲ್ಲಿಸಬೇಕು. ಕೋಳಿ ಫಾರಂ ಸುತ್ತಲು ಮರಗಿಡಗಳನ್ನು ನೆಡಬೇಕು. ಕರುಗಳಿಗೆ ದಿನಕ್ಕೆ 3 ಬಾರಿ ನೀರನ್ನು ಕುಡಿಸುವ ಮೂಲಕ ನಿರ್ಜಲೀಕರಣ, ಬೇಧಿಯಂತಹ ಸಮಸ್ಯೆಗಳನ್ನು ನಿಯಂತ್ರಿಸಬೇಕು. ಜಾನುವಾರು ಕೊಟ್ಟಿಗೆಯ ಮೇಲ್ಭಾಗದಲ್ಲಿ ಒಣ ಹುಲ್ಲನ್ನು ಹಾಕುವ ಮೂಲಕ ಕೊಟ್ಟಿಗೆಯ ವಾತಾವರಣ ತಂಪಾಗುವAತೆ ಮಾಡಬೇಕು.

ದನಗಳ ಕೊಟ್ಟಿಗೆಯಲ್ಲಿ ಗಾಳಿ ಸರಾಗವಾಗಿ ಬರುವಂತೆ ಇರಬೇಕು. ಕೊಟ್ಟಿಗೆಯನ್ನು ಸ್ವಚ್ಛವಾಗಿಡಬೇಕು. ಕೊಟ್ಟಿಗೆಯ 2 ಭಾಗದಲ್ಲಿ ಗೋಣಿ ಚೀಲ ಕಟ್ಟಿ ಹಸಿ ಮಾಡಬೇಕು.

  • ಡಾ. ಅಣ್ಣಾರಾವ ಪಾಟೀಲ್, ಹಿರಿಯ ಪಶು ವೈಧ್ಯಾಧಿಕಾರಿಗಳು
WhatsApp Group Join Now
Telegram Group Join Now

Related Posts

error: Content is protected !!