Govt SchemesNews

Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಸುವಂತಿಲ್ಲ

ಹೊಸ ನಿಯಮ ಉಲ್ಲಂಘಿಸಿ ಕೊಳವೆ ಬಾವಿ ಕೊರೆಸಿದರೆ ಜೈಲುವಾಸ, ದಂಡ

ಇನ್ಮುಂದೆ ಬೇಕೆಂದಾಗ, ಬೇಕಾದಲ್ಲಿ ಬೋರ್‌ವೆಲ್ (Borewell) ಕೊರೆಸುವಂತಿಲ್ಲ. ಕೊಳವೆಬಾವಿ ಕೊರೆಸಲು ಸ್ಥಳೀಯ ಪ್ರಾಧಿಕಾರಗಳ ಅನುಮತಿ ಪಡೆಯಲೇ ಬೇಕು. ಹಾಗೊಂದು ವೇಳೆ ಅನುಮತಿ ಇಲ್ಲದೇ ಕೊಳವೆ ಬಾವಿ ಕೊರೆಸಿದರೆ ಜೈಲುವಾಸ ಮತ್ತು ದಂಡ ತೆರಬೇಕಾಗುತ್ತದೆ.

ಹೌದು, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ-2024ಕ್ಕೆ ಕಳೆದ ಜನವರಿ 09ರಂದು ರಾಜ್ಯಪಾಲರ ಒಪ್ಪಿಗೆ (Governor’s consent) ದೊರೆತಿದ್ದು, ಸರ್ಕಾರ ಅಧಿಕೃತ ಮುದ್ರೆ ಒತ್ತಿ ರಾಜ್ಯಪತ್ರ ಪ್ರಕಟಿಸಿದೆ.

ಇದನ್ನೂ ಓದಿ: PM-Kisan FID : ಪಿಎಂ ಕಿಸಾನ್ ಯೋಜನೆ ಕೇಂದ್ರ ಕೃಷಿ ಇಲಾಖೆ ಹೊಸ ನಿಯಮ

ಹೊಸ ನಿಯಮಗಳೇನು?

ರೈತರನ್ನು ಹೊರತುಪಡಿಸಿ ಭೂಮಿ ಅಥವಾ ಆವರಣಗಳ ಮಾಲೀಕ ಅಥವಾ ಅನುಷ್ಠಾನ ಏಜೆನ್ಸಿಯು ಕೊರೆಬಾವಿ ಅಥವಾ ಕೊಳವೆಬಾವಿ ತೋಡುವ ಮೊದಲು ಕನಿಷ್ಠ 15 ದಿನ ಮುಂಚೆ ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರ ಸ್ಥಳೀಯ ಸಂಸ್ಥೆಗೆ ಲಿಖಿತ ರೂಪದಲ್ಲಿ ತಿಳಿಸಬೇಕು.

ವಿಫಲಗೊಂಡ ಅಥವಾ ಅಪೂರ್ಣವಾಗಿ ಕೊರೆಸಲಾದ ಕೊಳವೆ ಬಾವಿಗಳನ್ನು 24 ಗಂಟೆಯೊಳಗೆ ಮುಚ್ಚಬೇಕು. ಮುಚ್ಚಿರುವ ಕುರಿತು ಛಾಯಾಚಿತ್ರದೊಂದಿಗೆ ಪ್ರಾಧಿಕಾರಕ್ಕೆ ತಿಳಿಸಬೇಕು.

ವಿಫಲವಾದ ಕೊಳವೆಬಾವಿ ತಪಾಸಣೆ ಹಾಗೂ ಮೇಲ್ವಿಚಾರಣೆಗಾಗಿ ಪ್ರತಿಯೊಂದು ಸ್ಥಳೀಯ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಅಥವಾ ಮಂಡಳಿಗಳ ಒಬ್ಬ ಅಧಿಕಾರಿಯನ್ನು ಗೊತ್ತುಪಡಿಸಲು ಕಾಯ್ದೆಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: Multiple Bank Accounts : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ದಂಡ ಬೀಳುತ್ತಾ?

ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು?

ಸ್ಥಳೀಯ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆಗಳ ಅನುಮತಿ ಪಡೆಯದೆ ಬೋರ್‌ವೆಲ್ ಕೊರೆಸಿದರೆ ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಮೂರು ತಿಂಗಳ ಕಾರಾಗೃಹ ವಾಸ ಹಾಗೂ ದಂಡ ಬೀಳಲಿದೆ.

ಭೂ ಮಾಲೀಕ ಮಾತ್ರವಲ್ಲದೆ, ಅನುಷ್ಠಾನ ಏಜೆನ್ಸಿಗಳೂ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಭೂ ಮಾಲೀಕರು, ಏಜೆನ್ಸಿಗಳಿಗೆ ಅಲ್ಲದೆ, ಕೊಳವೆಬಾವಿ ಕೊರೆಸುವಲ್ಲಿ ಮತ್ತು ನಿಷ್ಕ್ರಿಯ ಕೊಳವೆಬಾವಿ ನಿರ್ವಹಣೆ ಮಾಡುವ ವಿಚಾರದಲ್ಲಿ ಸ್ಥಳೀಯ ಪ್ರಾಧಿಕಾರಗಳಿಗೂ ಕರ್ತವ್ಯ ನಿಗದಿಪಡಿಸಲಾಗಿದೆ.

ಕರ್ನಾಟಕ ಅಂತರ್ಜಲ ಅಧಿನಿಯಮ ತಿದ್ದುಪಡಿ ಮಸೂದೆಯ ಹೊಸ ನಿಯಮಗಳ ಕುರಿತು ಸರ್ಕಾರ ಪ್ರಕಟಿಸಿರುವ ರಾಜ್ಯಪತ್ರ ಓದಲು ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: PKCC Loan : ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿ ಲೋನ್

Raitapi Jagattu

#ಮಾಲತೇಶ_ಮಾಳಮ್ಮನವರ್, ಸಂಪಾದಕರು ಮಾಲತೇಶ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!