JobsNews

Canara Bank Recruitment 2025 : ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ

ಪದವೀಧರರಿಂದ ಅರ್ಜಿ ಆಹ್ವಾನ | ವಾರ್ಷಿಕ 18ರಿಂದ 27 ಲಕ್ಷ ರೂ. ವೇತನ

ಪ್ರತಿಷ್ಠಿತ ಕೆನರಾ ಬ್ಯಾಂಕ್’ನಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಲಾಗಿದೆ. ಗುತ್ತಿಗೆಯ ಆಧಾರದ ಈ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 24ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಅಪ್ಲಿಕೇಶನ್ ಡೆವಲಪರ್, ಕ್ಲಡ್ ಅಡ್ಮಿನಿಸ್ಟ್ರೇಟರ್, ಕ್ಲಡ್ ಸೆಕ್ಯೂರಿಟಿ ಅನಾಲಿಸ್ಟ್, ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್, ಡೇಟಾ ಇಂಜಿನಿಯರ್, ಡಾಟಾ ಮೈನಿಂಗ್ ಎಕ್ಸ್ಪರ್ಟ್, ಡೇಟಾ ಸೈಂಟಿಸ್ಟ್, ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್ ಒಟ್ಟು 22 ವಿವಿಧ ಪದನಾಮದ 60 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Loan Information : ಸಾಲ ಪಡೆಯುವ ಮುನ್ನ ಈ ಮಾಹಿತಿ ತಿಳಿದಿರಿ

ಶೈಕ್ಷಣಿಕ ಅರ್ಹತೆ

ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಬಿಇ ಅಥವಾ ಬಿಟೆಕ್, ಬಿಸಿಎ, ಎಂಟೆಕ್, ಎಂಸಿಎ, ಎಂಎ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ ವಿವರ

ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 2024ರ ಡಿಸೆಂಬರ್ 1ಕ್ಕೆ ಅನ್ವಯವಾಗುವಂತೆ ಗರಿಷ್ಠ 35 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.

ಇದನ್ನೂ ಓದಿ: NHM Recruitment 2025 : ಆರೋಗ್ಯ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನವೆಷ್ಟು?

ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ವಾರ್ಷಿಕ 18 ಲಕ್ಷದಿಂದ 27 ಲಕ್ಷ ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆನ್‌ಲೈನ್ ಪರೀಕ್ಷೆಯನ್ನು ಪ್ರೊಫೆಷನಲ್ ನಾಲೆಜ್ ಇನ್ ದಿ ಏರಿಯಾ ಆಫ್ ಸ್ಪೆಷಲೈಜೇಶನ್ 75 ಅಂಕ, ಲಾಜಿಕಲ್ ರೀಸನಿಂಗ್ 25 ಅಂಕ ಸೇರಿ ಒಟ್ಟು 100 ಅಂಕಗಳಿಗೆ ನಡೆಸಲಾಗುತ್ತದೆ. ಆನ್‌ಲೈನ್ ಪರೀಕ್ಷೆ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುತ್ತದೆ.

ಇದನ್ನೂ ಓದಿ: CBSE Recruitment 2025 : ಸಿಬಿಎಸ್‌ಇ ನೇಮಕಾತಿ 2025

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಕೆನರಾ ಬ್ಯಾಂಕ್ ಅರ್ಜಿ ಲಿಂಕ್ ಮೂಲಕ ಜನವರಿ 24ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಒಂದೇ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06-01-2025
  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ : 24-01-2025

ಅಧಿಸೂಚನೆ : Download
ಅರ್ಜಿ ಲಿಂಕ್ : Apply Now

ಇದನ್ನೂ ಓದಿ: IPPB SO Recruitment 2025 : ಪೋಸ್ಟ್ ಪೇಮೆಂಟ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Raitapi Jagattu

ಮಾಲತೇಶ ಮಾಳಮ್ಮನವರ್, ಸಂಪಾದಕರು ಮಾಲತೇಶ ಮಾಳಮ್ಮನವರ್ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!