ಸಗಣಿ ಗೊಬ್ಬರವನ್ನು ಬಳಸುವ ವೈಜ್ಞಾನಿಕ ವಿಧಾನ | ಹೀಗೆ ಬಳಸಿದರೆ ಸಿಗಲಿದೆ ಹತ್ತಾರು ಲಾಭ Nadep Compost Dung Manure

ಸಗಣಿ ಗೊಬ್ಬರ ಅಥವಾ ತಿಪ್ಪೆ/ಕೊಟ್ಟಿಗೆ ಗೊಬ್ಬರ ಬಳಸುವ ಸರಿಯಾದ ವಿಧಾನ ಯಾವುದು? ಹೇಗೆ ಬಳಸಿದರೆ ಅದರಲ್ಲಿರುವ ಪೋಷಕಾಂಶಗಳು ಬೆಳೆಗೆ ಸಮೃದ್ಧವಾಗಿ ಲಭ್ಯವಾಗುತ್ತವೆ? ಅತೀ ಕಡಿಮೆ ಸಗಣಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಹೇಗೆ? ವೈಜ್ಞಾನಿಕ ಮಾಹಿತಿ ಇಲ್ಲಿದೆ….
ಅರೆಬೆಂದ ಗೊಬ್ಬರವನ್ನು ಭೂಮಿಗೆ ಸೇರಿದಾಗ ವಿಷ ಅನಿಲ ಬಿಡುಗಡೆಗೊಂಡು ಬೆಳೆಗಳ ಬೇರು ಸುಟ್ಟು ಹೋಗುತ್ತದೆ. ಬೆಳೆಗಳು ಸಾಕಷ್ಟು ರೋಗ ಮತ್ತು ಕೀಟಬಾಧೆಗೆ ತುತ್ತಾಗುತ್ತವೆ. ಆದ್ದರಿಂದ ಇಂತಹ ಗೊಬ್ಬರವನ್ನು ರೈತರು ಭೂಮಿಗೆ ಹಾಕದೇ ಇರುವುದೇ ಒಳ್ಳೆಯದು.
ಹಾಗಾದರೆ ಸಗಣಿ ಗೊಬ್ಬರ ಅಥವಾ ತಿಪ್ಪೆ/ಕೊಟ್ಟಿಗೆ ಗೊಬ್ಬರ ಬಳಸುವ ಸರಿಯಾದ ವಿಧಾನ ಯಾವುದು? ಹೇಗೆ ಬಳಸಿದರೆ ಅದರಲ್ಲಿರುವ ಪೋಷಕಾಂಶಗಳು ಬೆಳೆಗೆ ಸಮೃದ್ಧವಾಗಿ ಲಭ್ಯವಾಗುತ್ತವೆ? ಅತೀ ಕಡಿಮೆ ಸಗಣಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಹೇಗೆ? ಇತ್ಯಾದಿ ಮಾಹಿತಿಯನ್ನು ಇಲ್ಲಿ ತಿಳಿಯೋಣ…
ಇದನ್ನೂ ಓದಿ: Postman Recruitment 2025 : SSLC ಪಾಸಾದವರಿಗೆ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೇಗಿರಬೇಕು ತಿಪ್ಪೆಗುಂಡಿ?
ಬಹುಮುಖ್ಯವಾಗಿ ತಿಪ್ಪೆಗುಂಡಿಯನ್ನು ಗಾಳಿಯಾಡುವಂತೆ ಅಗೆಯಬೇಕು, ಮಳೆಗಾಲದಲ್ಲಿ ಮಳೆ ನೀರು ತುಂಬಿಕೊಳ್ಳದAತೆ ನೋಡಿಕೊಳ್ಳಬೇಕು. ಇವೆಲ್ಲಾ ಸಮಯಕ್ಕೆ ಸರಿಯಾಗಿ ಮಾಡದೇ ಹೋದಾಗ ಅದು ಕೊಳೆಯಲಾರಂಭಿಸಿ ಕೆಟ್ಟ ವಾಸನೆ ಬಂದು, ಅರೆಬರೆ ಕೊಳೆತ ಗೊಬ್ಬರವಾಗುತ್ತದೆ.
ಸಗಣಿಯಲ್ಲಿರುವ ನೈಟ್ರೇಟ್ ಅಂಶ ಮಳೆ ನೀರಿನೊಂದಿಗೆ ಭೂಮಿಯಲ್ಲಿ ಇಂಗಿ ಬೋರ್ವೆಲ್ ನೀರು ಉಪ್ಪಾಗುತ್ತಿದೆ. ಗೊಬ್ಬರದ ಗುಂಡಿ ಮಾಡದೇ, ಭೂಮಿಯ ಮೇಲೆ ನೇರವಾಗಿ ಬಿಸಿಲು ಬೀಳುವ ಕಡೆ ಗುಡ್ಡೆ ಹಾಕುವುದರಿಂದ 30 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ಇದ್ದಾಗ ಸಗಣಿ ರಾಶಿಯಿಂದ ಸರಾಜನಕ ಅಂಶ ಆವಿಯಾಗಿ ಹೋಗುತ್ತದೆ.
ಭೂಮಿಗೆ ನೇರವಾಗಿ ಸಗಣಿ ಹಾಕುವುದರಿಂದ ಅದರಲ್ಲಿರುವ ವಿಷ ಅನಿಲ ಬಿಡುಗಡೆಯಾಗುತ್ತದೆ. ಸಗಣಿಯಲ್ಲಿರುವ hydrosulphide, carbon monoxide, methane ಇವುಗಳು ಬೆಳೆಯ ಬೇರು ಸುಡಲು ಕಾರಣವಾಗುತ್ತದೆ. ರೋಗಕಾರಕ ವೈರಸ್, ಬ್ಯಾಕ್ಟೀರಿಯಾ ಉತ್ಪತಿಯಾಗುತ್ತದೆ. ಸಗಣಿಯಲ್ಲಿರುವ ಕಳೆ ಬೀಜಗಳು ಮರು ಹುಟ್ಟು ಪಡೆಯುತ್ತವೆ. ಸೂಕ್ತ ಸಾರಜನಕ : ಇಂಗಾಲ ಅನುಪಾತ ಇಲ್ಲದೇ ಹೋದರೆ ಪೋಷಕಾಂಶ ದೊರೆಯುವುದಿಲ್ಲ.
ಇದನ್ನೂ ಓದಿ: PM Kisan 19th installment : ರೈತರ ಖಾತೆಗೆ ಪಿಎಂ ಕಿಸಾನ್ 19ನೇ ಕಂತಿನ ಹಣ ಜಮಾ
ನೆಡೆಪ್ ವಿಧಾನ ಬೆಸ್ಟ್
ಇವೆಲ್ಲಾ ಕಾರಣಕ್ಕೆ ಕಾಂಪೋಸ್ಟ್ ಗೊಬ್ಬರ ಮಾಡುವುದು ಒಳ್ಳೆಯದು. ಹಾಗಂತ ಕಾಂಪೋಸ್ಟ್ ಗೊಬ್ಬರಕ್ಕೆ ಲೋಡುಗಟ್ಟಲೇ ಸಗಣಿ ಏನು ಬೇಕಾಗಿಲ್ಲ. ಉತ್ತಮ ಕಾಂಪೋಸ್ಟ್ ತಯಾರು ಮಾಡಲು ಬಹಳ ಕಡಿಮೆ ಪ್ರಮಾಣದ ಸಗಣಿ ಸಾಕು. ಸಸ್ಯಗಳ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದು ಕಾಂಪೋಸ್ಟ್ ಗೊಬ್ಬರದಿಂದ ಮಾತ್ರ ಸಾಧ್ಯ
ತಿಪ್ಪೆಗುಂಡಿಯಲ್ಲಿನ ಲೋಪ ಸರಿಪಡಿಸಲು ಮತ್ತು ಗುಂಡಿ ಅಗೆಯುವ ಶ್ರಮ ತಪ್ಪಿಸಿ ಎಲ್ಲಾ ರೀತಿಯಿಂದಲು ಉತ್ತಮವಾದ, ಹೆಚ್ಚು ಶ್ರಮವಿಲ್ಲದ, ಸರಳ ವಿಧಾನವೆಂದರೆ ನೆಡೆಪ್ ವಿಧಾನ. ಮಹಾರಾಷ್ಟçದ ರೈತ ನಾರಾಯಣ ಡಿ ಪಂಧರಿಪಾAಡೆ ಎನ್ನುವವರು ಈ ವಿಧಾನ ಕಂಡುಹಿಡಿದದ್ದುದರಿAದ ಇದಕ್ಕೆ ಅವರ ಹೆಸರಿನನ್ವಯ ‘ನೆಡೆಪ್’ ಎಂದು ಕರೆಯಲಾಗಿದೆ.
ಕಾಂಪೋಸ್ಟ್ ತೊಟ್ಟಿ ಹೇಗಿರಬೇಕು?
ಪೂರ್ವ-ಪಶ್ಚಿಮಕ್ಕೆ: 6 ಅಡಿ ಅಗಲ, ಉತ್ತರ-ದಕ್ಷಿಣಕ್ಕೆ : 10 ಅಡಿ ಉದ್ದ ಮತ್ತು ತೊಟ್ಟಿಯ ಎತ್ತರ : 3 ಅಡಿ. ತೊಟ್ಟಿಯ ತಳಭಾಗ ಕಾಂಕ್ರೀಟ್ ಮಾಡದೇ ಹಾಗೆಯೇ ಬಿಡಬೇಕು. ಸೂಕ್ಷ್ಮಜೀವಿಗಳು ಮಣ್ಣಿನ ಮೂಲಕ ಬರಲು ಅನುಕೂಲವಾಗುವಂತೆ ಮಣ್ಣಿನ ನೆಲವಿರಬೇಕು. 10’X6’X3’ ತೊಟ್ಟಿಯಲ್ಲಿ 90-120 ದಿನಗಳಲ್ಲಿ 2500 ಕೆಜಿ ಕಾಂಪೋಸ್ಟ್ ಉತ್ಪಾದಿಸಬಹುದು. ವರ್ಷಕ್ಕೆ 3 ಬಾರಿ ಒಂದು ತೊಟ್ಟಿಯಿಂದ 7.5 ಟನ್ ಕಾಂಪೋಸ್ಟ್ ತಯಾರಿಸಬಹುದು. ಇದು ಒಂದು ಎಕರೆ ಪ್ರದೇಶಕ್ಕೆ ಒಂದು ವರ್ಷಕ್ಕೆ ಸಾಕಾಗುವ ಪ್ರಮಾಣ.
ಇದನ್ನೂ ಓದಿ: Micro Finance Ordinance 2025 : ಅಕ್ರಮವಾಗಿ ನೀಡಿದ ಸಾಲ ಮತ್ತು ಬಡ್ಡಿ ಸಂಪೂರ್ಣ ಮನ್ನಾ
ಬೇಕಾಗುವ ಪದಾರ್ಥ
- 150 ಕೆಜಿ ಸಗಣಿ (ಯಾವುದೇ ಸಸ್ಯಾಹಾರಿ ಪ್ರಾಣಿ/ ಪಕ್ಷಿಗಳ ಸಗಣಿ/ ಹಿಕ್ಕೆ ಬಳಸಬಹುದು)
- 1350 ಕೆಜಿ ಕೃಷಿ ತ್ಯಾಜ್ಯ (3 ಭಾಗ ಒಣ ತ್ಯಾಜ್ಯ : 810 ಕೆಜಿ, 2 ಭಾಗ ಹಸಿ ತ್ಯಾಜ್ಯ : 540 ಕೆಜಿ)
- 1500 ಕೆಜಿ ಚೌಳು ಇಲ್ಲದ ಮಣ್ಣು.
ತೊಟ್ಟಿಯ ಪ್ರತಿ ಪದರದಲ್ಲಿ 27 ಕೆಜಿ ಒಣ ತ್ಯಾಜ್ಯ, 18 ಕೆಜಿ ಹಸಿ ತ್ಯಾಜ್ಯ, 5 ಕೆಜಿ ಸಗಣಿ (70 ಲೀಟರ್ ನೀರಿನಲ್ಲಿ ಕಲಸಿ), 50 ಕೆಜಿ ಮಣ್ಣು ಈ ಪ್ರಕಾರ 30 ಪದರ ಹಾಕುವುದು. 30ನೇ ಪದರದ ಮೇಲೆ 4 ಇಂಚು ಮಣ್ಣು ಮುಚ್ಚಿ ಸಗಣಿಯಿಂದ ಸಾರಿಸುವುದು. 90-120 ದಿನಗಳಲ್ಲಿ ಗೊಬ್ಬರ ಸಿದ್ದಗೊಳ್ಳುತ್ತದೆ. ಈ ಗೊಬ್ಬರವನ್ನು ಒಂದು ವರ್ಷ ಕಾಲ ಸಂಗ್ರಹಿಸಿ ಇಟ್ಟುಕೊಳ್ಳಬಹುದು.
| ಪ್ರಶಾಂತ್ ಜಯರಾಮ್, ಪ್ರಗತಿಪರ ಕೃಷಿಕರು, ಮೈಸೂರು
ಇದನ್ನೂ ಓದಿ: LIC Kanyadan Policy : ಈ ಯೋಜನೆಯಡಿ ಸಿಗಲಿದೆ ಹೆಣ್ಮಕ್ಕಳ ಮದುವೆಗೆ 31 ಲಕ್ಷ ರೂಪಾಯಿ