JobsNews

Railway Teacher Recruitment 2025 : ರೈಲ್ವೆ ಇಲಾಖೆ ಶಿಕ್ಷಕರ ನೇಮಕಾತಿ

1036 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶ

ದೇಶದ ವಿವಿಧ ರೈಲ್ವೆ ನೇಮಕಾತಿ ವಿಭಾಗಗಳಲ್ಲಿ ಶಿಕ್ಷಕರು ಸೇರಿ ಇತರ 1,036 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ.

ಶಿಕ್ಷಕರು ಹುದ್ದೆಗಳ ವಿವರ

  • ಪೋಸ್ಟ್ ಗ್ರಾಜುಯೇಟ್ ಟೀಚರ್ : 187
  • ಟ್ರೇನ್ಡ್ ಗ್ರಾಜುಯೇಟ್ ಟೀಚರ್ : 338
  • ಪ್ರೈಮರಿ ರೈಲ್ವೆ ಟೀಚರ್ : 188
  • ಅಸಿಸ್ಟೆಂಟ್ ಟೀಚರ್ : 02
  • ಮ್ಯೂಸಿಕ್ ಟೀಚರ್ : 03
  • ಜೂನಿಯರ್ ಟ್ರಾನ್ಸ್ಲೇಟರ್ : 130
  • ಫಿಸಿಕಲ್ ಟ್ರೇನಿಂಗ್ ಇನ್‌ಸ್ಟ್ರಕ್ಟರ್ : 18
  • ಲೈಬ್ರರಿಯನ್ : 10
  • ಲ್ಯಾಬೋರೇಟರಿ ಅಸಿಸ್ಟೆಂಟ್ : 07
  • ಲ್ಯಾಬ್ ಅಸಿಸ್ಟಂಟ್ : 12

ಮೇಲ್ಕಾಣಿದ ಶಿಕ್ಷಕ ಹುದ್ದೆಗಳು ಸೇರಿದಂತೆ ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ ಪಾಸಾದವರಿಗೆ ಸೈಂಟಿಫಿಕ್ ಸೂಪರ್ ವೈಸರ್ 3, ಚೀಫ್ ಲಾ ಅಸಿಸ್ಟೆಂಟ್ 54, ಪಬ್ಲಿಕ್ ಪ್ರಾಸಿಕ್ಯೂಟರ್ 20, ಸೈಂಟಿಫಿಕ್ ಅಸಿಸ್ಟೆಂಟ್/ ಟ್ರೇನಿಂಗ್ 2, ಸೀನಿಯರ್ ಪಬ್ಲಿಸಿಟಿ ಇನ್ಸಪೆಕ್ಟರ್ 3, ಸ್ಟಾಫ್ ಆ್ಯಂಡ್ ವೇಲ್‌ಫೇರ್ ಇನ್‌ಸ್ಪೆಕ್ಟರ್ 59 ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: CBSE Recruitment 2025 : ಸಿಬಿಎಸ್‌ಇ ನೇಮಕಾತಿ 2025

ಶೈಕ್ಷಣಿಕ ಅರ್ಹತೆ

ಆಯಾ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ ಪೂರೈಸಿರುವ ಅಭ್ಯರ್ಥಿಗಳು ಶಿಕ್ಷಕ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆಗೆ ಎಂಎಸ್‌ಸಿ, ಎಂಸಿಎ, ಬಿಎಸ್‌ಸಿ, ಬಿಇ, ಬಿ.ಟೆಕ್ ಪದವಿ ಪಡೆದಿದ್ದರೆ ಸಾಕು. ಬಡ್ತಿ ಹಂತದಲ್ಲಿ ಮಾತ್ರ ಬಿ.ಇಡಿ ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ನುಳಿದ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಪೂರ್ಣಗೊಳಿಸಿರುವವರನ್ನು ಪರಿಗಣಿಸಲಾಗುತ್ತದೆ ಎಂದು ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: Cold wave forecast in Karnataka : ಮುಂದಿನ ಒಂದು ವಾರ ಭಾರೀ ಚಳಿ

ವಯೋಮಿತಿ ವಿವರ

2025ರ ಜನವರಿ 1ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ಗರಿಷ್ಠ 48 ವರ್ಷದೊಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಯ ಅನ್ವಯ ವರ್ಗ, ಪಂಗಡವಾರು ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

Railway Teacher Recruitment 2025

ಮಾಸಿಕ ವೇತನವೆಷ್ಟು?

ರೈಲ್ವೆ ಇಲಾಖೆಯ ಶಿಕ್ಷಕರು ಸೇರಿದಂತೆ ಇತರ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಹುದ್ದೆವಾರು ಆರಂಭಿಕ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಶಿಕ್ಷಕ ಹುದ್ದೆಗಳು : 35,400 – 47,600 ರೂ.
  • ಉಳಿದ ಹುದ್ದೆಗಳು : 19,900 – 44,900 ರೂ.

ಇದನ್ನೂ ಓದಿ: New facilities for Govt employees : ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಭರ್ಜರಿ ಸೌಲಭ್ಯಗಳು

ಪರೀಕ್ಷೆ ಮತ್ತು ಅರ್ಜಿ ಸಲ್ಲಿಕೆ

ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎರಡು ಹಂತಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಇದಲ್ಲದೆ ಕೌಶಲ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಇರಲಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು. ಸೂಕ್ತ ದಾಖಲಾತಿಗಳನ್ನು ಅಪ್ ಲೋಡ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆ ಮುಗಿಸಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 07-01-2025
ಅರ್ಜಿ ಸಲ್ಲಿಕೆ ಕೊನೇ ದಿನಾಂಕ : 07-02-2025

ನೇಮಕಾತಿ ಅಧಿಸೂಚನೆ ಇತರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ:  ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

Raitapi Jagattu

#ಮಾಲತೇಶ_ಮಾಳಮ್ಮನವರ್, ಸಂಪಾದಕರು ಮಾಲತೇಶ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!