AgricultureGovt Schemes

Tatkal Podi- ಜಂಟಿ ಖಾತೆಯಿಂದ ಏಕ ಮಾಲೀಕತ್ವ ಪಹಣಿ ಪಡೆಯುವುದು ಹೇಗೆ?

ತತ್ಕಾಲ್ ಪೋಡಿಗೆ ಅನುಸರಿಸಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ...

ರೈತರು ಏಕ ಮಾಲೀಕತ್ವದ ಪಹಣಿ (Land RTC) ಪಡೆಯುವುದು ಹೇಗೆ? ಇದಕ್ಕಾಗಿ ಅನುಸರಿಸಬೇಕಾದ ಕ್ರಮಗಳೇನು? ಏಕ ಮಾಲಿಕತ್ವ ಪಹಣಿಯಿಂದ ಸಿಗುವ ಪ್ರಯೋಜನಗಳೇನು? ಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ರಾಜ್ಯದಲ್ಲಿ ಜಮೀನು ಜಂಟಿ ಮಾಲೀಕತ್ವ (RTC Joint Owner) ವಿಚಾರವಾಗಿ ಅನೇಕ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಜಮೀನಿನ ಹಕ್ಕನ್ನು ಖಚಿತಪಡಿಸಿಕೊಳ್ಳಲು ಹಾಗೂ ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಪಡೆಯಲು ಏಕ ಮಾಲಿಕತ್ವ ಅನಿವಾರ್ಯವಾಗಿದೆ.

ಜಂಟಿ ಖಾತೆಯಿಂದ ಬೇರ್ಪಟ್ಟು ಏಕ ಮಾಲೀಕತ್ವದ ಪಹಣಿ ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳು ಹಾಗೂ ತತ್ಕಾಲಿಕ ಪೋಡಿ ಪ್ರಕ್ರಿಯೆ ಮೂಲಕ ಏಕ ಮಾಲೀಕತ್ವದ ಪಹಣಿ ಪಡೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…

ಇದನ್ನೂ ಓದಿ: Property A Khata B Khata Guide- ಆಸ್ತಿಗಳ ‘ಎ’ ಖಾತಾ ಮತ್ತು ‘ಬಿ’ ಖಾತಾ ವಿವರ

ಜಂಟಿ ಖಾತೆ ಎಂದರೇನು?

ಪಹಣಿಯಲ್ಲಿ ಒಂದಕ್ಕಿಂತ ಹೆಚ್ಚು ಮಾಲೀಕರ ಹೆಸರುಗಳು ದಾಖಲಾಗಿದ್ದರೆ, ಅದನ್ನು ಜಂಟಿ ಖಾತೆ ಎಂದು ಕರೆಯಲಾಗುತ್ತದೆ. ಜಂಟಿ ಖಾತೆಯಲ್ಲಿರುವ ಜಮೀನಿನ ಮೇಲೆ ಯಾವುದೇ ರೀತಿಯ ಸರ್ಕಾರದ ಯೋಜನೆಗಳ ಅನುಕೂಲ ಪಡೆಯಲು, ಬ್ಯಾಂಕ್ ಸಾಲ ಪಡೆಯಲು ಅಥವಾ ಜಮೀನಿನ ಖರೀದಿ-ಮಾರಾಟ ನಡೆಸಲು ಕಷ್ಟಕರ. ಇದರಿಂದ ಪಹಣಿಯನ್ನು ಪ್ರತ್ಯೇಕಿಸಿ ಏಕ ಮಾಲೀಕತ್ವದ ಪಹಣಿ ಪಡೆಯುವುದು ಬಹುಮುಖ್ಯವಾಗಿದೆ.

ಏಕ ಮಾಲೀಕತ್ವದ ಪಹಣಿ ಪಡೆಯಲು ಏನು ಮಾಡಬೇಕು?

ರೈತರು ಏಕ ಮಾಲೀಕತ್ವದ ಪಹಣಿ ಪಡೆಯಲು ತಮ್ಮ ಆಧಾರ್ ಕಾರ್ಡ್, ಜಮೀನಿನ ಪಹಣಿ ಹಾಗೂ ಜಮೀನಿನ ಸ್ವಾಮ್ಯ ಹಕ್ಕಿನ ಸಂಬAಧಿತ ದಾಖಲೆಗಳೊಂದಿಗೆ ತಮ್ಮ ಹೋಬಳಿ ನಾಡ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ, ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ರಶೀದಿ ಪಡೆಯಬೇಕು.

ನಿಗದಿಪಡಿಸಿದ ದಿನಾಂಕದಂದು ಭೂಮಾಪಕರು ಸ್ಥಳಕ್ಕೆ ಬಂದು ಪಹಣಿಯಲ್ಲಿ ನಮೂದಿಸಿರುವ ವಿಸ್ತೀರ್ಣವನ್ನು ಪರಿಶೀಲಿಸುತ್ತಾರೆ. ಜಮೀನಿನ ನಿಖರ ಅಳತೆ ಮಾಡಿ ನಕ್ಷೆ ತಯಾರಿಸಿ, ಪ್ರತ್ಯೇಕ ಹಿಸ್ಸಾ ಸಂಖ್ಯೆಯನ್ನು ನಿಗದಿಪಡಿಸುತ್ತಾರೆ.

ಭೂಮಿ ಕೇಂದ್ರದಲ್ಲಿ ಭೂಮಾಪಕರು ಮತ್ತು ರೆವೆನ್ಯೂ ಇನ್ಸ್‌ಪೆಕ್ಟರ್ ನೀಡಿದ ವರದಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ತದನಂತರ, ಹೊಸ ಹಿಸ್ಸಾ ನಂಬರ್, ಟಿಪ್ಪಣಿ, ಅಟ್ಲಾಸ್, ಆಕಾರಬಂದ್, ಫಾರ್ಮ್ ನಂ 10 ತಯಾರಿಸಿ ಜಮೀನಿನ ಹೊಸ ದಾಖಲೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ.

ಕೊನೆಯ ಹಂತದಲ್ಲಿ ಹೊಸ ಹಿಸ್ಸಾ ಸಂಖ್ಯೆಯೊಂದಿಗೆ ಪ್ರತ್ಯೇಕವಾದ ಏಕ ಮಾಲೀಕತ್ವದ ಪಹಣಿ ತಯಾರಿಸಲಾಗುತ್ತದೆ. ರೈತರು ಈ ಹೊಸ ಪಹಣಿಯನ್ನು ಪಡೆದ ಮೇಲೆಯೆ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಲು ಭಾಜನರಾಗುತ್ತಾರೆ.

ಇದನ್ನೂ ಓದಿ: Free School Hostel Admission- ಉಚಿತ ಶಾಲೆ ಮತ್ತು ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ

Tatkal Podi Eka Malikatva Pahani
Tatkal Podi Eka Malikatva Pahani

ತಾತ್ಕಾಲ್ ಪೋಡಿ ಎಂದರೇನು?

ತಾತ್ಕಾಲ್ ಪೋಡಿ ಪ್ರಕ್ರಿಯೆಯು ರೈತರು ತಮ್ಮ ಜಮೀನಿನ ಪಾಲನ್ನು ಪ್ರತ್ಯೇಕವಾಗಿ ಗುರುತಿಸಲು ವಿಧಾನವಾಗಿದೆ. ಇದು ಜಮೀನಿನ ಹಕ್ಕು ಸ್ವಾಮ್ಯವನ್ನು ಮಾರ್ಪಡಿಸದೆ ಕೇವಲ ಹಿಸ್ಸಾ ಸಂಖ್ಯೆಯನ್ನು ಪ್ರತ್ಯೇಕಿಸುವ ಪ್ರಕ್ರಿಯೆಯಾಗಿದೆ. ತಾತ್ಕಾಲ್ ಪೋಡಿ ಪ್ರಕ್ರಿಯೆ ಅನುಸರಿಸಿದರೆ, ರೈತರು ತಮ್ಮ ಜಮೀನಿಗೆ ಪ್ರತ್ಯೇಕ ನಕ್ಷೆ ಹೊಂದಿದ ಏಕ ಮಾಲೀಕತ್ವದ ಪಹಣಿಯನ್ನು ಪಡೆಯಬಹುದು.

ತತ್ಕಾಲ್ ಪೋಡಿಗೆ ಏನು ಮಾಡಬೇಕು?

ರೈತರು ಜಮೀನು ಪಹಣಿಯೊಂದಿಗೆ ಸಂಬಂಧಪಟ್ಟ ಎಲ್ಲಾ ಹಕ್ಕುದಾರರು ಒಪ್ಪಿಗೆ ಸಹಿ ನೀಡಬೇಕು. ಅರ್ಜಿಯನ್ನು ನಾಡಕಚೇರಿಯಲ್ಲಿ ಸಲ್ಲಿಸಿ, ನಿಗದಿಪಡಿಸಿದ ಶುಲ್ಕ ಪಾವತಿಸಿ ರಶೀದಿ ಪಡೆಯಬೇಕು.

ಭೂಮಾಪಕರು ಜಮೀನಿನ ಅಳತೆ ಮಾಡಿ, ಪ್ರತ್ಯೇಕ ಹಿಸ್ಸಾ ಸಂಖ್ಯೆಗೆ ತಕ್ಕಂತೆ ನಕ್ಷೆ ತಯಾರಿಸುತ್ತಾರೆ. ಜಮೀನಿನ ಹೊಸ ವಿಭಾಗಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ.

ಭೂಮಿ ಕೇಂದ್ರದಲ್ಲಿ ಜಮೀನಿನ ದಾಖಲೆಗಳನ್ನು ಪರಿಷ್ಕರಿಸಿ ಹೊಸ ಹಿಸ್ಸಾ ಸಂಖ್ಯೆಗೆ ತಕ್ಕಂತೆ ಟಿಪ್ಪಣಿ, ಆಕಾರಬಂದ್, ಫಾರ್ಮ್ ನಂ 10 ತಯಾರಿಸಲಾಗುತ್ತದೆ. ಕೊನೆಯಲ್ಲಿ ರೈತರಿಗೆ ಹೊಸ ಪಹಣಿ ವಿತರಿಸಲಾಗುತ್ತದೆ.

ಇದನ್ನೂ ಓದಿ: ಪ್ರೊಸೆಸಿಂಗ್ ಶುಲ್ಕವಿಲ್ಲದೇ ₹30 ಲಕ್ಷದ ವರೆಗೆ ಲೋನ್ Zero Processing Fee Home Loan

ತಾತ್ಕಾಲ್ ಪೋಡಿಯ ಶುಲ್ಕವೆಷ್ಟು?

  • ಗ್ರಾಮೀಣ ಪ್ರದೇಶ: ₹1,200-₹4,000 ಪ್ರತಿ ಎಕರೆ
  • ನಗರ ಪ್ರದೇಶ: ₹2,000-₹5,000 ಪ್ರತಿ ಎಕರೆ

ಏಕ ಮಾಲೀಕತ್ವದ ಪಹಣಿಯ ಪ್ರಯೋಜನಗಳೇನು?

  • ರೈತರು ಏಕ ಮಾಲೀಕತ್ವದ ಪಹಣ ಹೊಂದಿದ್ದರೆ ಬ್ಯಾಂಕುಗಳಿ೦ದ ಬೆಳೆ ಸಾಲ (Crop Loan) ಸೇರಿದಂತೆ ವಿವಿಧ ರೀತಿಯ ಕೃಷಿ ಸಾಲವನ್ನು ಸುಲಭವಾಗಿ ಪಡೆಯಬಹುದು.
  • ಬೆಳೆ ಹಾನಿ ಪರಿಹಾರ (Crop Loss Amount), ಬೆಳೆವಿಮೆ ಪರಿಹಾರದಂತಹ (Bele Vime parihara) ಸರ್ಕಾರದ ವಿವಿಧ ಸೌಲಭ್ಯವನ್ನು ಪಡೆಯಲು ಏಕ ಮಾಲೀಕತ್ವದ ಪಹಣಿ ಅಗತ್ಯವಿದೆ.
  • ಜಮೀನನ್ನು ಮಾರಾಟ (land sale) ಮಾಡುವಾಗ ಸ್ವಾಮ್ಯ ಹಕ್ಕಿನ ಸ್ಪಷ್ಟತೆ ಒದಗಿಸುವ ಮೂಲಕ ಜಮೀನಿನ ಮೌಲ್ಯವನ್ನು ಹೆಚ್ಚಿಸುತ್ತದೆ.
  • ಜಮೀನಿನ ಮೇಲಿನ ಮಾಲೀಕತ್ವ (Land ownership) ಸಂಬಂಧಿತ ಗೊಂದಲಗಳನ್ನು ನಿವಾರಿಸಿ ರೈತರನ್ನು ತಕರಾರುಗಳಿಂದ ಕಾಪಾಡುತ್ತದೆ.

ಜಮೀನಿನ ಹಕ್ಕುಗಳನ್ನು ಪ್ರತ್ಯೇಕಿಸಲು ಹಾಗೂ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಏಕ ಮಾಲೀಕತ್ವದ ಪಹಣಿ ಅತ್ಯಗತ್ಯವಾಗಿದೆ. ರೈತರು ಸರಿಯಾದ ದಾಖಲೆಗಳನ್ನು ಒದಗಿಸಿ, ನಿಗದಿತ ಕ್ರಮಗಳನ್ನು ಅನುಸರಿಸಿದರೆ ಸುಲಭವಾಗಿ ತಮ್ಮ ಹೆಸರಿನ ಮೇಲೆ ಏಕ ಮಾಲಿಕತ್ವದ ಜಮೀನಿನ ಪಹಣಿ ಪಡೆಯಲು ಸಾಧ್ಯವಿದೆ.

ತಾತ್ಕಾಲ್ ಪೋಡಿ ಪ್ರಕ್ರಿಯೆ ಬಳಸಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಪಡೆದರೆ ಜಮೀನಿನ ಸ್ವಾಮ್ಯ ವಿಚಾರದಲ್ಲಿ ಯಾವುದೇ ಅನುಮಾನಗಳು ಇರುವುದಿಲ್ಲ. ಹೀಗಾಗಿ ರೈತರು ಜಂಟಿ ಮಾಲಿಕತ್ವದಿಂದ ಏಕ ಮಾಲಿಕತ್ವದ ಪಹಣಿ ಪಡೆಯುವುದು ಉತ್ತಮ.

ಇದನ್ನೂ ಓದಿ: Zero Interest Crop Loan- ರೈತರಿಗೆ ₹5 ಲಕ್ಷ ಬಡ್ಡಿ ಇಲ್ಲದ ಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Raitapi Jagattu

#ಮಾಲತೇಶ_ಮಾಳಮ್ಮನವರ್, ಸಂಪಾದಕರು ಮಾಲತೇಶ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!