Govt SchemesNews

Surya Ghar Rooftop Scheme-10 ಲಕ್ಷ ಮನೆಗಳಿಗೆ ಸೋಲಾರ್ ಕರೆಂಟ್

ನಿಮ್ಮ ಮನೆಗೆ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ...

ಸೂರ್ಯಘರ್ ಯೋಜನೆಯಡಿ (PM Surya Ghar: Muft Bijli Yojana) ಮನೆಗೆ ಸೋಲಾರ್ ವಿದ್ಯುತ್ (SolarPower) ಸಂಪರ್ಕ ಪಡೆಯುವುದು ಹೇಗೆ? ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಪ್ರಧಾನಮಂತ್ರಿ ಸೂರ್ಯ ಘರ್ (PM Surya Ghar: Muft Bijli Yojana) ಉಚಿತ ವಿದ್ಯುತ್ ಯೋಜನೆಗೆ ದೇಶಾದ್ಯಂತ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶಾದ್ಯಂತ ಈಗಾಗಲೇ 10 ಲಕ್ಷಕ್ಕೂ ಅಧಿಕ ಮನೆಗಳು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿವೆ. 2024ರ ಅಕ್ಟೋಬರ್ ವೇಳೆಗೆ 20 ಲಕ್ಷ ಮನೆಗಳಿಗೆ ಈ ಯೋಜನೆಯ ಪ್ರಯೋಜನ ನೀಡಲು ಗುರಿ ಹೊಂದÀಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಸೂರ್ಯ ಘರ್ ಯೋಜನೆಯು ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್‌ಗಳ ವರೆಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದ್ದು, ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ವಾರ್ಷಿಕವಾಗಿ 15,000 ರಿಂದ 18,000 ರೂ.ವರೆಗೆ ಉಳಿತಾಯ ಮಾಡಬಹುದು.

ಕೇಂದ್ರ ಸರ್ಕಾರವು 2024ರ ಫೆಬ್ರವರಿಯಲ್ಲಿ ಸೂರ್ಯಘರ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಮನೆ ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿದೆ. ಉಚಿತ ವಿದ್ಯುತ್ ಒದಗಿಸುವುದರ ಜೊತೆಗೆ, ಪರಿಸರ ಸ್ನೇಹಿ ಶಕ್ತಿಯ ಬಳಕೆಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಪ್ರೊಸೆಸಿಂಗ್ ಶುಲ್ಕವಿಲ್ಲದೇ ₹30 ಲಕ್ಷದ ವರೆಗೆ ಲೋನ್ Zero Processing Fee Home Loan

ಸೂರ್ಯ ಘರ್ ಯೋಜನೆಯಿಂದ ಏನೆಲ್ಲ ಲಾಭವಿದೆ?

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಘಟಕ ಅಳವಡಿಸಿಕೊಂಡರೆ ಪ್ರತಿ ತಿಂಗಳು 300 ಯೂನಿಟ್‌ಗಳ ವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಒಮ್ಮೆ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡದರೆ 25 ವರ್ಷಗಳ ಬಾಳಿಕೆ ಬರಲಿದೆ. ಪ್ರಾರಂಭಿಕ 5 ವರ್ಷಗಳ ಉಚಿತ ನಿರ್ವಹಣೆ ಸಿಗಲಿದೆ.

ಸರ್ಕಾರ ನೀಡುವ ಸಬ್ಸಿಡಿ ಸಹಾಯಧನವನ್ನು ಪಡೆದು ಕಡಿಮೆ ವೆಚ್ಚದಲ್ಲಿ ಸೌರ ಘಟಕ ಅಳವಡಿಸಿಕೊಳ್ಳಬಹುದು. ಘಟಕದಿಂದ ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಆದಾಯ ಕೂಡ ಗಳಿಸಬಹುದು. ಸೌರಶಕ್ತಿ ಬಳಕೆ ಪರಿಸ್ನೇಹಿ ಆಗಿರುವುದರಿಂದ ಪರಿಸರ ಮಾಲಿನ್ಯ ತಡೆಗೆ ಕೊಡುಗೆ ನೀಡಿದಂತೆಯೂ ಆಗುತ್ತದೆ.

10*10 ಅಳತೆಯ ಸ್ಥಳದಲ್ಲಿ 1 ಕಿಲೋವ್ಯಾಟ್ ಸಾಮರ್ಥ್ಯದ ಸೌರ ಪ್ಯಾನೆಲ್ ಅಳವಡಿಸಬಹುದಾಗಿದೆ. 1 ಕಿಲೋವ್ಯಾಟ್ ಸಾಮರ್ಥ್ಯದ ಘಟಕವು ತಿಂಗಳಿಗೆ ಸರಾಸರಿ 100 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು. ದೊಡ್ಡ ಸಾಮರ್ಥ್ಯದ ಘಟಕಗಳನ್ನು ಅಳವಡಿಸುವ ಮೂಲಕ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ.

Surya Ghar Rooftop Scheme Application Guide
Surya Ghar Rooftop Scheme Application Guide

ಇದನ್ನೂ ಓದಿ: Monsoon 2025- ಈ ವರ್ಷ ವಾಡಿಕೆಗಿಂತ ಅಧಿಕ ಮುಂಗಾರು ಮಳೆ

ಘಟಕದ ವೆಚ್ಚ, ಸಬ್ಸಿಡಿ ಮತ್ತು ಉಳಿತಾಯದ ವಿವರ

1 ಕಿಲೋವ್ಯಾಟ್ ಸಾಮರ್ಥ್ಯದ ಘಟಕ:
ಮಾಸಿಕ ವಿದ್ಯುತ್ ಉತ್ಪಾದನೆ: 100 ಯೂನಿಟ್‌ಗಳು
ಅಳವಡಿಕೆ ವೆಚ್ಚ: ₹60,000-₹80,000
ಸರ್ಕಾರದ ಸಬ್ಸಿಡಿ: ₹30,000
ವಾರ್ಷಿಕ ಉಳಿತಾಯ: ₹9,600

2 ಕಿಲೋವ್ಯಾಟ್ ಸಾಮರ್ಥ್ಯದ ಘಟಕ:
ಮಾಸಿಕ ವಿದ್ಯುತ್ ಉತ್ಪಾದನೆ: 101-200 ಯೂನಿಟ್‌ಗಳು
ಅಳವಡಿಕೆ ವೆಚ್ಚ: ₹1,20,000-₹1,60,000
ಸರ್ಕಾರದ ಸಬ್ಸಿಡಿ: ₹60,000
ವಾರ್ಷಿಕ ಉಳಿತಾಯ: ₹21,600

3 ಕಿಲೋವ್ಯಾಟ್ ಸಾಮರ್ಥ್ಯದ ಘಟಕ:
ಮಾಸಿಕ ವಿದ್ಯುತ್ ಉತ್ಪಾದನೆ: 201-300 ಯೂನಿಟ್‌ಗಳು
ಅಳವಡಿಕೆ ವೆಚ್ಚ: ₹1,80,000-₹2,40,000
ಸರ್ಕಾರದ ಸಬ್ಸಿಡಿ: ₹60,000
ವಾರ್ಷಿಕ ಉಳಿತಾಯ: ₹35,000

ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಸಿಗಲಿದೆ ಇ-ಸ್ವತ್ತು

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಸೂರ್ಯಘರ್ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಪಡೆದು ಸೌರ ವಿದ್ಯುತ್ ಘಟಕ ಸ್ಥಾಪಿಸಲು ಆಸಕ್ತರು ಸರ್ಕಾರದ https://pmsuryaghar.gov.in/ ಜಾಲತಾಣಕ್ಕೆ ಭೇಟಿ ಅಥವಾ ರಾಜ್ಯ ವಿದ್ಯುತ್ ಇಲಾಖೆಯ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದು.

ನೋಂದಣಿಗೆ ಇತ್ತೀಚಿನ ವಿದ್ಯುತ್ ಬಿಲ್, ಆಧಾರ್ ಕಾರ್ಡ್, ಮನೆ ಮಾಲಿಕತ್ವ ದಾಖಲೆ ಹಾಗೂ ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕಿದೆ. ಸರ್ಕಾರದ ನಿಯಮಾವಳಿಯ ಪ್ರಕಾರ ಅರ್ಜಿದಾರರ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. ಅರ್ಜಿ ಅನುಮೋದನೆ ಆದ ನಂತರ ಸರ್ಕಾರದ ನೆರವು ಮತ್ತು ಸಬ್ಸಿಡಿ ಸಿಗುತ್ತದೆ.

ಸೂರ್ಯಘರ್ ಯೋಜನೆಯು ಉಚಿತ ವಿದ್ಯುತ್ ಹಾಗೂ ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ದೀರ್ಘಾವಧಿಯ ಯೋಜನೆಯಾಗಿದ್ದು, ಮನೆಗಳ ಹಾಗೂ ವಾಣಿಜ್ಯ ಕಟ್ಟಡಗಳ ವಿದ್ಯುತ್ ಅವಲಂಬನೆಯನ್ನು ವಿದ್ಯುತ್ ಸ್ವಾಯಲಂಬನೆಗೆ ಸಹಾಯವಾಗುತ್ತದೆ.

ಅರ್ಜಿ ಲಿಂಕ್ : Apply Now

ಇದನ್ನೂ ಓದಿ: Rover survey- ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ

WhatsApp Group Join Now
Telegram Group Join Now

Raitapi Jagattu

#ಮಾಲತೇಶ_ಮಾಳಮ್ಮನವರ್, ಸಂಪಾದಕರು ಮಾಲತೇಶ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!