Govt SchemesNews

PM-Kisan FID : ಪಿಎಂ ಕಿಸಾನ್ ಯೋಜನೆ ಕೇಂದ್ರ ಕೃಷಿ ಇಲಾಖೆ ಹೊಸ ನಿಯಮ

ಎಫ್‌ಐಡಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ

ಇನ್ಮುಂದೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಗೆ ಹೊಸದಾಗಿ ಸೇರುವವರು, ಫಲಾನುಭವಿಯಾಗಲು ಬಯಸುವವರು ಎಫ್‌ಐಡಿ ಅರ್ಥಾತ್ ಫಾರ್ಮರ್ಸ್ ಐಡೆಂಟಿಟಿ ಡೀಟೈಲ್ಸ್ ಹೊಂದುವುದು ಕಡ್ಡಾಯವಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.

ಅರ್ಜಿದಾರರು ಕೃಷಿ ಭೂಮಿ ಹೊಂದಿದ್ದಾರೆ ಎಂಬುದನ್ನು ರೈತರ ಗುರುತಿನ ಚೀಟಿ ದೃಢಪಡಿಸುತ್ತದೆ. ಹೀಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ಕೃಷಿಕರ ಗುರುತಿನ ಚೀಟಿ ಹೊಂದಬೇಕಿದೆ. ಗುರುತಿನ ಚೀಟಿ ಇದ್ದಲ್ಲಿ ನೋಂದಣಿ ಪ್ರಕ್ರಿಯೆ ಸುಲಭವಾಗುವುದರಿಂದ ಫ್ರೂಟ್ಸ್ ತಂತ್ರಾ೦ಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ಈ ವ್ಯವಸ್ಥೆ ಕಳೆದ ಜನವರಿ 1ರಿಂದಲೇ ಜಾರಿಗೆ ಬಂದಿದೆ. ಮುಂಬರುವ ದಿನಗಳಲ್ಲಿ ಉಳಿದ ರಾಜ್ಯಗಳಿಗೂ ಇದು ವಿಸ್ತರಣೆಯಾಗಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Multiple Bank Accounts : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ದಂಡ ಬೀಳುತ್ತಾ?

ಏನಿದು ಎಫ್‌ಐಡಿ?

ಎಫ್‌ಐಡಿ ಎಂದರೆ ಫಾರ್ಮರ್ಸ್ ಐಡೆಂಟಿಟಿ ಡೀಟೈಲ್ಸ್ ಎಂದರ್ಥ. ಇದೊಂದು ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ. ಸರಕಾರ ಇದಕ್ಕಾಗಿಯೇ FRUITS ಎಂದು ಕರೆಯಲ್ಪಡುವ ಸಾಫ್ಟ್ವೇರ್ ಅಪ್ಲಿಕೇಶನ್ ಸಿದ್ಧಪಡಿಸಿದೆ. (Farmers Registration and Unified Beneficiary Information System -FRUITS) ಎಂಬುವುದು ಇದರ ಪೂರ್ಣಾರ್ಥ.

FRUITS ವೆಬ್‌ಸೈಟ್‌ನಲ್ಲಿ ರೈತರು ಒಮ್ಮೆ ತಮ್ಮ ವಿವರ ನೋಂದಾಯಿಸಿದರೆ ಕೇವಲ ಪಿಎಂ ಕಿಸಾನ್ ಯೋಜನೆ ಮಾತ್ರವಲ್ಲ, ಎಲ್ಲ ರೀತಿಯ ಸರ್ಕಾರಿ ಯೋಜನೆಗಳ ಪ್ರಯೋಜನ ಸಿಗಲಿದೆ. ಜೊತೆಗೆ ಸರ್ಕಾರಿ ಯೋಜನೆಯ ಲಾಭ ಪಡೆಯಲು ವಿವಿಧ ಇಲಾಖೆಗಳಿಗೆ ಅಲೆಯುವ ಪಾಡು ಕೂಡ ತಪ್ಪುತ್ತದೆ.

ಇದನ್ನೂ ಓದಿ: First rain in 2025 : ಸಂಕ್ರಾಂತಿಗೆ ವರ್ಷದ ಮೊದಲ ಮಳೆ

ಎಫ್‌ಐಡಿ ನೋಂದಣಿ ಹೇಗೆ?

ಎಫ್‌ಐಡಿ ಇಲ್ಲದೆ ಇರುವ ರೈತರು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಝರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಸಿಎಸ್‌ಸಿ ಕೆಂದ್ರಗಳಲ್ಲಿ ಎಫ್‌ಐಡಿ ಮಾಡಿಸಿಕೊಳ್ಳಬಹುದು.

ನಿಮ್ಮ ಎಫ್‌ಐಡಿ ಚೆಕ್ ಮಾಡಿ

ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮರ್ ಡಿಟೇಲ್ಸ್ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ Fruits ID ರೈತರ ಐಡಿ ನಂಬರ್ ಇರುತ್ತದೆ. ಇದು ಎಫ್‌ಐಡಿ ಯಿಂದ ಆರಂಭವಾಗುತ್ತದೆ. ಇದು ರೈತರಿಗೆ ಅತ್ಯಂತ ಮಹತ್ವದ್ದಾಗಿದೆ. ಇದರ ಮುಂದುಗಡೆ PMKID ಇರುತ್ತದೆ. ಇದು ಪಿಎಂ ಕಿಸಾನ್ ಐಡಿಯಾಗಿರುತ್ತದೆ. ಅದರ ಕೆಳಗಡೆ ರೈತರ ಹೆಸರು ಇರುತ್ತದೆ.

ಎಫ್‌ಐಡಿ ಲಿಂಕ್ : ಇಲ್ಲಿ ಒತ್ತಿ…

ಇದನ್ನೂ ಓದಿ: Sheep-Goat Farming Schemes : ಕುರಿ-ಮೇಕೆ ಸಾಕಾಣಿಕೆ ಸಬ್ಸಿಡಿ ಯೋಜನೆಗಳು

Raitapi Jagattu

#ಮಾಲತೇಶ_ಮಾಳಮ್ಮನವರ್, ಸಂಪಾದಕರು ಮಾಲತೇಶ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!