8th Pay Commission- ಸರ್ಕಾರಿ ನೌಕರರ ಸಂಬಳ ₹19 ಸಾವಿರದಷ್ಟು ಏರಿಕೆ
ಏಪ್ರಿಲ್‌ನಲ್ಲಿ 8ನೇ ವೇತನ ಆಯೋಗ ರಚನೆ...

ಕೇಂದ್ರ ಸರ್ಕಾರ ಏಪ್ರಿಲ್‌ನಲ್ಲಿ 8ನೇ ವೇತನ ಆಯೋಗ (8th Pay Commission) ರಚನೆ ಮಾಡಲಿದ್ದು; ಸರಕಾರಿ ನೌಕರರ ಸಂಬಳ (Salary hike of Govt Employees) ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ…
ಕೇಂದ್ರ ಸರ್ಕಾರವು 8ನೇ ವೇತನ ಆಯೋಗ ರಚಿಸುವ ಅಂತಿಮ ಪ್ರಕ್ರಿಯೆ ಆರಂಭಿಸಿದೆ. ಈ ಕುರಿತ ಷರತ್ತು ಮತ್ತು ಮತ್ತು ನಿಬಂಧನೆಗಳನ್ನು ಏಪ್ರಿಲ್ ತಿಂಗಳಲ್ಲಿ ಸಚಿವ ಸಂಪುಟದ ಒಪ್ಪಿಗೆಗಾಗಿ ಕಳುಹಿಸಲಿದೆ.
ಕೇಂದ್ರ ಸಚಿವ ಸಂಪುಟ ಒಪ್ಪಿಗೆಯ ಬೆನ್ನಲ್ಲೇ ಈ ಕುರಿತ ನೋಟಿಸ್ ಹೊರ ಬೀಳಲಿದ್ದು, ಈ ಮೂಲಕ ಏಪ್ರಿಲ್‌ನಿಂದಲೇ 8ನೇ ವೇತನ ಆಯೋಗ ತನ್ನ ಕಾರ್ಯ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: PMAY Gramin- ಪಿಎಂ ಆವಾಸ್ ಯೋಜನೆಯಡಿ ಉಚಿತ ಮನೆಗಾಗಿ ಅರ್ಜಿ ಆಹ್ವಾನ

ಏಪ್ರಿಲ್ 1ರಿಂದ ಜಾರಿ
ಕೇಂದ್ರ ಸರಕಾರವು ರಚಿಸಲಿರುವ 8ನೇ ವೇತನ ಆಯೋಗದಲ್ಲಿ ಒಬ್ಬ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರು ಇರಲಿದ್ದಾರೆ. ಈ ಹುದ್ದೆಗಳಿಗೆ ಸೆಕ್ರೆಟರಿ ಹಂತದ ಅಧಿಕಾರಿಗಳನ್ನು ನೇಮಿಸಲಾಗುತ್ತದೆ.
ಸದರಿ 8ನೇ ವೇತನ ಆಯೋಗವು ಶಿಫಾರಸುಗಳನ್ನು ನೀಡಿ, ಅವುಗಳಿಗೆ ಕೇಂದ್ರ ಸರಕಾರ ಸಮ್ಮತಿ ಸೂಚಿಸಿದ ಬಳಿಕ ಹೊಸ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಲಿವೆ. ಈ ಶಿಫಾರಸ್ಸುಗಳು 2026-27ರ ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: Male nakshatragalu 2025- 2025ರ ಮಳೆ ನಕ್ಷತ್ರಗಳು | ಹೇಗಿದೆ ಈ ವರ್ಷದ ಮಳೆಗಾಲ?
ಎಷ್ಟೆಷ್ಟು ಸಂಬಳ ಏರಿಕೆಯಾಗಲಿದೆ?
ಅಮೆರಿಕದ ಅಂತಾರಾಷ್ಟ್ರೀಯ ಹೂಡಿಕೆ ಕಂಪನಿ ಗೋಲ್ಡ್ಮನ್ ಸ್ಯಾಕ್ಸ್ ಮಾಹಿತಿ ಪ್ರಕಾರ 8ನೇ ವೇತನ ಆಯೋಗದ ಅನುಷ್ಟಾನದಿಂದ ಕೇಂದ್ರ ಸರ್ಕಾರಿ ನೌಕರರ ವೇತನ 14,000 ರೂ. ದಿಂದ 19,000 ರೂ. ವರೆಗೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ.
8ನೇ ವೇತನ ಆಯೋಗ ರಚನೆಯಾಗಿ ಶಿಫಾರಸುಗಳು ಜಾರಿಗೆ ಬಂದರೆ ಕೇಂದ್ರ ಸರ್ಕಾರದ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರು ಈ ವೇತನ ಪರಿಷ್ಕರಣೆಯ ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ