Watermelon Fruit-ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣದ ಇಂಜೆಕ್ಷನ್ | ಆರೋಗ್ಯ ಇಲಾಖೆಯ ಎಚ್ಚರಿಕೆ
ಕಲ್ಲಂಗಡಿ ಹಣ್ಣು ಹೀಗೆ ಪರೀಕ್ಷಿಸಿ ತಿನ್ನಿ...

ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು; ತಂಪು ಪಾನೀಯ, ಎಳೆನೀರು, ಹಣ್ಣಿನ ರಸ ಹಾಗೂ ಕರಬುಜ, ಕಲ್ಲಂಗಡಿ ಹಣ್ಣುಗಳ (Watermelon Fruit) ಮಾರಾಟ ಜೋರಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿಯೇ ದಾಂಗುಡಿ ಹಾಕುವ ಕಲ್ಲಂಗಡಿ ಹಣ್ಣುಗಳು ಜನರನ್ನು ಆಕರ್ಷಿಸುತ್ತಿವೆ. ಆದರೆ, ಕಲ್ಲಂಗಡಿ ಹಣ್ಣು ತಿನ್ನುವ ಮುನ್ನ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಕಲ್ಲಂಗಡಿ ಹಣ್ಣಿಗೂ ಕೃತಕ ಬಣ್ಣದ ಇಂಜೆಕ್ಟ್
ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ದೇಹವನ್ನು ತಂಪಾಗಿಸಲು ಕಲ್ಲಂಗಡಿ ಹಣ್ಣು ಸೂಕ್ತವಾಗಿದೆ. ಇದರಿಂದ ಬೀದಿ ಬದಿಯಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣನ್ನು ಬಹುತೇಕರು ಸೇವನೆ ಮಾಡುತ್ತಿದ್ದಾರೆ. ಇನ್ನು ಮುಂದೆ ಹಣ್ಣು ತಿನ್ನುವ ಮುನ್ನ ಕೊಂಚ ಎಚ್ಚರ ವಹಿಸಿದರೆ ಉತ್ತಮ. ಏಕೆಂದರೆ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಅಂಶ ಬಳಕೆ ಮಾಡುವಂತೆ ಕಲ್ಲಂಗಡಿ ಹಣ್ಣಿಗೂ ಕೃತಕ ಬಣದ ಇಂಜೆಕ್ಟ್ ಮಾಡುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಕೃತಕ ಬಣ್ಣದ ಇಂಜೆಕ್ಷನ್ ಅನ್ನು ಕಲ್ಲಂಗಡಿ ಹಣ್ಣಿಗೆ ಚುಚ್ಚುವುದರಿಂದ ಹಣ್ಣು ಅತೀ ಹೆಚ್ಚು ಕೆಂಪನೆಯ ಬಣ್ಣವನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಸಪ್ಪೆಯಾಗಿರುವ ಹಣ್ಣು ಹೆಚ್ಚು ರುಚಿಯಾಗುತ್ತದೆ. ಇಂತಹ ಹಣ್ಣನ್ನು ತಿನ್ನುವವರ ಆರೋಗ್ಯದ ಮೇಲೆ ತಕ್ಷಣಕ್ಕೆ ಪರಿಣಾಮ ಬೀರದಿದ್ದರೂ ಕ್ರಮೇಣ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: 2025 rain information-ಈ ವರ್ಷ ಏಪ್ರಿಲ್‌ನಲ್ಲಿ ಮಳೆ | 2025ರ ಮಳೆ ಮಾಹಿತಿ ಇಲ್ಲಿದೆ…
ಇಂತಹ ಹಣ್ಣು ಸೇವಿಸುವುದರಿಂದ ಏನಾಗುತ್ತದೆ?
ಕಲ್ಲಂಗಡಿ ಹಣ್ಣು ಬಣ್ಣ ಹಾಗೂ ರುಚಿ ಬರಲು ಅಪಾಯಕಾರಿ ಇಂಜೆಕ್ಟ್ ಮಾಡಲಾಗುತ್ತಿದ್ದು; ಇಂತಹ ಹಣ್ಣು ತಿನ್ನುವುದರಿಂದ ಫುಡ್ ಪಾಯ್ಸನಿಂಗ್ ಆಗುವ ಸಂಭವ ಹೆಚ್ಚಿದೆ. ವಾಂತಿ-ಬೇಧಿ, ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಸಮಯಕ್ಕೆ ಸರಿಯಾಗಿ ಹಸಿವು ಆಗುವುದಿಲ್ಲ, ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವ ಅಪಾಯವಿದೆ.
ನೀರಿನ ದಾಃ ಇಂಗಿಸಿಕೊಳ್ಳುವ ಉದ್ದೇಶದಿಂದ ಕಲ್ಲಂಗಡಿ ಹಣ್ಣು ತಿನ್ನುವುದು ಸಹಜ. ಆದರೆ, ಕೃತಕ ಬಣ್ಣ ಮಿಶ್ರಿತ ಹಣ್ಣು ಸೇವಿಸುವುದರಿಂದ ಸುಸ್ತು ಮತ್ತು ಬಾಯಾರಿಕೆ ಮತ್ತಷ್ಟು ಹೆಚ್ಚಾಗುತ್ತದೆ. ರಾಸಾಯನಿಕ ಮಿಶ್ರಿತ ಅಂಶವನ್ನು ಹಣ್ಣಿಗೆ ಸೇರಿಸಿರುವುದರಿಂದ ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕಲಬೆರಕೆ ಕಲ್ಲಂಗಡಿ ಹಣ್ಣು ಪತ್ತೆ ಮಾಡುವುದು ಹೇಗೆ?
ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಒಂದು ಹೋಳನ್ನು ಕೆವು ಸಮಯ ನೀರಿನಲ್ಲಿ ಮುಳುಗಿಸಿಡಿ. ನೀರು ಗುಲಾಬಿ ಬಣ್ಣಕ್ಕೆ ತಿರುಗಿದರೆ ಅದು ಕೃತಕ ಬಣ್ಣ ಇರುವ ಕಲ್ಲಂಗಡಿ ಎಂದೇ ಅರ್ಥ ಮಾಡಿಕೊಳ್ಳಬೇಕು. ಇಲ್ಲವೇ ಟಿಶ್ಯೂ ಪೇಪರ್‌ನಿಂದ ಹಣ್ಣನ್ನು ಒತ್ತಿದರೆ, ಒಂದು ವೇಳೆ ಪೇಪರ್‌ಗೆ ಕೆಂಪು ಬಣ್ಣ ಹತ್ತಿಕೊಂಡರೆ ಅದು ಕಲಬೆರಕೆ ಕಲ್ಲಂಗಡಿ ಹಣ್ಣು!
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್