Gruhalakshmi Scheme- ಯುಗಾದಿ ನಂತರ ಮಹಿಳೆಯರಿಗೆ ₹4,000 ಗೃಹಲಕ್ಷ್ಮಿಹಣ ಜಮಾ
ಮಹಿಳಾ ಸಚಿವೆ ಹೆಬ್ಬಾಳ್ಕರ್ ಹೇಳಿದ್ದೇನು?

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಫಲಾನುಭವಿ ಮಹಿಳೆಯರ ಖಾತೆಗೆ ಒಟ್ಟಿಗೆ 4,000 ರೂ. ಜಮಾ ಮಾಡುವುದಾಗಿ ಸಿಹಿಸುದ್ದಿ ನೀಡಿದ್ದಾರೆ…
ಇದೇ ಮಾರ್ಚ್ 30ಕ್ಕೆ ಚಾಂದ್ರಮಾನ ಯುಗಾದಿ ಜರುಗಲಿದೆ. ಹಿಂದೂಗಳ ಪಾಲಿನ ಹೊಸ ವರ್ಷ ಆರಂಭವಾಗುವ ಈ ಹಬ್ಬದ ನಂತರ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಹಣ ಜಮಾ ಮಾಡಲಾಗುವುದು ಎಂದು ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: Farmer Zero interest loan- ಇನ್ಮುಂದೆ ಪಿಎಲ್ಡಿ ಬ್ಯಾಂಕುಗಳಿಂದಲ್ಲೂ ರೈತರಿಗೆ ಬಡ್ಡಿ ಇಲ್ಲದ ಸಾಲ ಸೌಲಭ್ಯ
ಮಾರ್ಚ್ 31ರ ನಂತರ ಹಣ ಜಮಾ
ಹೌದು, ರಸ್ತೆ ಅಪಘಾತದಿಂದ ವಿಶ್ರಾಂತಿ ಪಡೆದು ತಮ್ಮ ಖಾತೆಯ ನಿರ್ವಹಣೆಯಲ್ಲಿ ತೊಡಗಿರುವ ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಒಟ್ಟಿಗೇ ಎರಡು ತಿಂಗಳ ಹಣ ಜಮಾ ಮಾಡುವುದಾಗಿ ತಿಳಿಸಿದ್ದಾರೆ.
ಮಾರ್ಚ್ 30ರಂದು ಯುಗಾದಿ ಹಬ್ಬ ಹಾಗೂ ಮಾರ್ಚ್ 31ರಂದು ರಂಜಾನ್ ಹಬ್ಬಗಳು ನಡೆಯಲಿವೆ. ಹಿಂದೂ- ಮುಸ್ಲಿಮರ ಶ್ರದ್ಧಾ ಭಕ್ತಿಯ ಈ ಹಬ್ಬಗಳ ನಂತರ ‘ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣವನ್ನು ಮಾರ್ಚ್ 31ರ ನಂತರ ಬಿಡುಗಡೆ ಮಾಡಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: Homeloan Tips- ಹೋಮ್ ಲೋನ್ ಪಡೆಯುವ ಮೊದಲು ಈ ನಿಯಮಗಳನ್ನು ತಿಳಿದಿರಿ
ತಾಲೂಕು ಪಂಚಾಯಿತಿ ಮುಖಾಂತರ ಹಣ ಜಮಾ
ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 2,000 ರೂ.ಗೆ ಹೆಚ್ಚಿಸಿದ್ದೆವು. ಅದಾದ ನಂತರ ಯಾವುದೇ ಸರಕಾರಗಳೂ ಹೆಚ್ಚಿಸಲಿಲ್ಲ. ಈ ಬಜೆಟ್’ನಲ್ಲಿ ಕಾರ್ಯಕರ್ತೆಯರ ಗೌರವಧನವನ್ನು 1,000 ರೂ., ಸಹಾಯಕಿಯರ ಗೌರವ ಧನವನ್ನು 750 ರೂ. ಹೆಚ್ಚಿಸಿ ಘೋಷಿಸಿದ್ದೇವೆ. ಅದನ್ನು ಜಾರಿಗೆ ತರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಇಲ್ಲಿಯ ವರೆಗೂ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಬೆಂಗಳೂರಿನ ಕೇಂದ್ರ ಕಚೇರಿ ಮೂಲಕ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಇದನ್ನು ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ತಾಲೂಕು ಪಂಚಾಯಿತಿ ಮೂಲಕ ಹಣ ಬಿಡುಗಡೆ ಮಾಡಿ, ನಂತರ ಶಿಶು ಯೋಜನಾಭಿವೃದ್ಧಿ ಅಧಿಕಾರಿಗಳ (ಸಿಡಿಪಿಓ) ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.
ಆ ಪ್ರಕಾರ ಮಾರ್ಚ್ 31ರ ನಂತರ ತಾಲೂಕು ಪಂಚಾಯಿತಿ ಮುಖಾಂತರ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Sashakt Panchayat Netri Abhiyan- ಗ್ರಾಮ ಪಂಚಾಯತಿಗಳಲ್ಲಿ ಇನ್ನು ಗಂಡಂದಿರ ದರ್ಬಾರ್ ಬಂದ್