Govt SchemesNews

ಇನ್ಮುಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಸಿಗಲಿದೆ ಇ-ಸ್ವತ್ತು

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ತಿದ್ದುಪಡಿ...

ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಇ-ಖಾತಾ (e-Katha) ನೀಡುವ ಬಗ್ಗೆ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಗ್ರಾಮ ಪಂಚಾಯತಿ (Gram Panchayat) ವ್ಯಾಪ್ತಿಯಲ್ಲಿರುವ ಲಕ್ಷಾಂತರ ಆಸ್ತಿಗಳಿಗೆ ಇ-ಖಾತಾ ನೀಡುವ ನಿಯಮ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಇನ್ಮುಂದೆ ಹಳ್ಳಿಗಳಲ್ಲಿರುವ ಆಸ್ತಿ ಖರೀದಿ, ಮಾರಾಟ ಮಾಡಲು ಅನುಕೂಲವಾಗುವಂತೆ ಅವುಗಳಿಗೆ ಇ-ಖಾತಾ ನೀಡಲಾಗುತ್ತದೆ.

ಇದನ್ನೂ ಓದಿ: ತಂದೆ ತಾಯಿ ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಹಕ್ಕಿಲ್ಲ | ಕಾಯ್ದೆಗೆ ರಾಜ್ಯ ಸರ್ಕಾರದ ಬಲ 

ಏನಿದು ಗ್ರಾಮ ಸ್ವರಾಜ್ ತಿದ್ದುಪಡಿ ಅಧಿನಿಯಮ?

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ 199-ಬಿ ಹಾಗೂ 199-ಸಿ ಸೇರ್ಪಡೆ ಮಾಡಲು ನಿನ್ನೆ ಮಾರ್ಚ್ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.ಗ್ರಾಮೀಣ ಭಾಗದಲ್ಲಿ ಇ-ಸ್ವತ್ತಿನಿಂದ ಹೊರಗುಳಿದಿರುವ 96 ಲಕ್ಷ ಅನಧಿಕೃತ ಆಸ್ತಿಗಳ ಮೇಲೆ ಶುಲ್ಕ ಅಥವಾ ದಂಡ ವಿಧಿಸಿ ಇ-ಖಾತಾ ವ್ಯವಸ್ಥೆಯಡಿ ತರುವುದು ಈ ತಿದ್ದುಪಡಿ ನಿಯಮದ ಉದ್ದೇಶವಾಗಿದೆ.

ರಾಜ್ಯದಲ್ಲಿ ಎಲ್ಲ ರೀತಿಯ ಆಸ್ತಿ ನೋಂದಣಿ ಮಾಡಲು ಇ-ಖಾತಾ ಕಡ್ಡಾಯ ಮಾಡಲಾಗಿದೆ. ಇ-ಖಾತಾ ಇಲ್ಲದ ಗ್ರಾಮೀಣ ಭಾಗದ ಆಸ್ತಿ ಖರೀದಿಸಲು ಹಾಗೂ ಮಾರಲು ಸಮಸ್ಯೆಯಾಗಿದೆ. ಹೀಗಾಗಿ ಅವುಗಳಿಗೆ ಇ-ಸ್ವತ್ತಿನಡಿ ಅವಕಾಶ ಮಾಡಿಕೊಡಲು ನಿಯಮಕ್ಕೆ ತಿದ್ದುಪಡಿ ತರಲಾಗುತ್ತಿದೆ.

E-Khata for rural properties
E-Khata for rural properties

ಇದನ್ನೂ ಓದಿ: SSLC ಪಾಸಾದವರಿಗಾಗಿಯೆ ಇವೆ ರಾಜ್ಯ ಸರ್ಕಾರದ ಈ ಹುದ್ದೆಗಳು 

96 ಲಕ್ಷ ಆಸ್ತಿಗಳಿಗೆ ಅನುಕೂಲ

ಹಳ್ಳಿಗಳಲ್ಲಿ ಸಂಗ್ರಹವಾಗುವ ಸಂಪನ್ಮೂಲವೇ ಗ್ರಾಮ ಪಂಚಾಯಿತಿಗಳ ಮೂಲ ಆದಾಯವಾಗಿದೆ. ನಿಖರವಾದ ಆದಾಯ ಸಂಗ್ರಹಣೆಯ ಉದ್ದೇಶದಿಂದ 2013ರ ಜೂನ್ 15 ರಂದು ಇ-ಸ್ವತ್ತು ತಂತ್ರಾAಶ ಜಾರಿಗೆ ತರಲಾಯಿತು. ಆದರೆ ಗ್ರಾಮೀಣ ಭಾಗದ ಅನೇಕ ಆಸ್ತಿಗಳಿಗೆ ಯಾವುದೇ ಖಾತೆಗಳಿಲ್ಲವಾದ್ದರಿಂದ ಇವುಗಳಿಂದ ಆದಾಯ ಕ್ರೋಢಿಕರಣ ಸಾಧ್ಯವಾಗುತ್ತಿಲ್ಲ.

ಇ-ಸ್ವತ್ತು ತಂತ್ರಾAಶದಲ್ಲಿ ಕೇವಲ 44 ಲಕ್ಷ ಆಸ್ತಿ ಮಾತ್ರ ನಮೂದಾಗಿದ್ದು; ಇನ್ನೂ 96 ಲಕ್ಷ ಆಸ್ತಿಗಳು ಇ-ಸ್ವತ್ತಿನಿಂದ ಹೊರಗುಳಿದಿವೆ. ಇದೀಗ ಈ ಆಸ್ತಿಗಳನ್ನು ಇ-ಸ್ವತ್ತಿನ ಅಡಿ ತರಲು ತಿದ್ದುಪಡಿ ವಿಧೇಯಕಕ್ಕೆ ನಿಯಮ 199-ಸಿ ಹಾಗೂ 199-ಬಿ ಸೇರಿಸಬೇಕಾಗಿದೆ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಎನ್ನಲಾಗುತ್ತಿದೆ.

ಇದನ್ನೂ ಓದಿ: Rover survey- ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ

ಯಾವೆಲ್ಲ ಸ್ವತ್ತುಗಳು ಅನ್ವಯವಾಗಲಿವೆ?

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕ್ರಮಬದ್ಧವಲ್ಲದ ನಿವೇಶನ ಹಾಗೂ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳುತ್ತಿದ್ದು, 2013ಕ್ಕೆ ಮೊದಲು ಅಥವಾ ನಂತರ ನೋಂದಣಿಯಾದ ಎಲ್ಲಾ ನಿವೇಶನ ಹಾಗೂ ಕಟ್ಟಡಗಳನ್ನೂ ಇ-ಖಾತೆ ಅಡಿ ತರಲಾಗುವುದು.

ಸರ್ಕಾರಿ, ಸ್ಥಳೀಯ ಸಂಸ್ಥೆ, ಶಾಸನಬದ್ದ ಸಂಸ್ಥೆ, ಅರಣ್ಯ ಭೂಮಿಯನ್ನು ಹೊರತುಪಡಿಸಿ ಉಳಿದ ಖಾಸಗಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.

Bagar Hukum-ಬಗರ್‌ಹುಕುಂ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರಿಗೆ ವಿನಾಯಿತಿ

Raitapi Jagattu

#ಮಾಲತೇಶ_ಮಾಳಮ್ಮನವರ್, ಸಂಪಾದಕರು ಮಾಲತೇಶ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!