NewsWeather

Cold wave in the karnataka : ಕರ್ನಾಟಕದಲ್ಲಿ ಶೀತ ಅಲೆ | ಈ ಜಿಲ್ಲೆಗಳಲ್ಲಿ ವಿಪರೀತ ಚಳಿ | ಹವಾಮಾನ ಇಲಾಖೆ ಎಚ್ಚರಿಕೆ

ಅಕಾಲಿಕ ಮಳೆಯ ಜೊತೆಗೆ ರಾಜ್ಯದಲ್ಲಿ ಮೈ ಕೊರೆಯುವ ಚಳಿ ಆರಂಭವಾಗಿದ್ದು; ಶೀತ ಗಾಳಿ ಅಲೆ (Cold wave) ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಲವು ಜಿಲ್ಲೆಗಳಲ್ಲಿ 5ರಿಂದ 6 °C ಉಷ್ಣಾಂಶ ಇಳಿಕೆಯಾಗಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿರುವುದರಿಂದ ರಾತ್ರಿ ವೇಳೆ ಮೈ ಕೊರೆಯುವ ಚಳಿ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (karnataka state weather department) ನಿರ್ದೇಶಕ ಸಿ. ಎಸ್​. ಪಾಟೀಲ್​ ಅವರು ಮಾಹಿತಿ ನೀಡಿದ್ದಾರೆ.

ಶೀತ ಅಲೆಗೆ ಕಾರಣವೇನು?

ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆಗಳೆರಡೂ ವಾಡಿಕೆಗಿಂತ ಹೆಚ್ಚು ಸುರಿದಿರುವುದು ಹಾಗೂ ಉತ್ತರದಿಂದ ದಕ್ಷಿಣದತ್ತ ‘ಮೂಡಗಾಳಿ’ ಬೀಸುತ್ತಿರುವುದು ಶೀತ ಅಲೆಗೆ ಪ್ರಮುಖ ಕಾರಣವಾಗಿದೆ.

ಇದರ ಜೊತೆಗೆ ಮಳೆ ಹೆಚ್ಚು ಸುರಿದಿರುವುದರಿಂದ ಭೂಮಿಯಲ್ಲಿ ತೇವಾಂಶವೂ ಅಧಿಕವಾಗಿದೆ. ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್​ (Cyclone) ಉಂಟಾಗಿ ಮೋಡ ಕವಿದ ವಾತಾವರಣ ಉಂಟಾಗಿರುವುದು ಕೂಡ ಶೀತ ಅಲೆಗೆ ಕಾರಣವಾಗಿದೆ.

ಎಲ್ಲೆಲ್ಲಿ ಹೆಚ್ಚಿನ ಶೀತ ಇರಲಿದೆ?

ಬಿಸಿಲು ಅತ್ಯಂತ ಹೆಚ್ಚಿರುವ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ವಿಜಯಪುರದಲ್ಲಿ ಡಿಸೆಂಬರ್ 17ರಿಂದ 19ರ ವರೆಗೆ ತೀವ್ರ ಶೀತದ ಅಲೆಗಳು ಬೀಸಲಿದೆ. ಇದರಿಂದ ಈ ಜಿಲ್ಲೆಗಳಲ್ಲಿ ತಾಪಮಾನ 6ರಿಂದ 7 °C ದಾಖಲಾಗಲಿದ್ದು; ಇಲ್ಲಿ ಹವಾಮಾನ ಇಲಾಖೆ ‘ರೆಡ್​ ಅರ್ಲಟ್​’ ಕೊಟ್ಟಿದೆ.

ಅದೇ ರೀತಿ ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಶೀತ ವಾತಾವರಣ ಉಂಟಾಗುವ ಮುನ್ಸೂಚನೆ ಇರುವುದರಿಂದ ಈ ಜಿಲ್ಲೆಗಳಿಗೂ ಕೂಡ ‘ಯೆಲ್ಲೋ ಅರ್ಲಟ್’​ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ 10 °C ಉಷ್ಣಾಂಶ ಇರಲಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಕನಿಷ್ಠ ತಾಪಮಾನ?

ನಿನ್ನೆ ಡಿಸೆಂಬರ್ 16ರಂದು ರಾಜ್ಯದ ಕೆಲವು ಆಯ್ದ ಜಿಲ್ಲೆಗಳಲ್ಲಿ ದಾಖಲಾದ ಕನಿಷ್ಠ ತಾಪಮಾನದ ವಿವರ ಈ ಕೆಳಗಿನಂತಿದೆ:

  • ಬೀದರ್​ 7.5 °C
  • ವಿಜಯಪುರ 8.5 °C
  • ಧಾರವಾಡ 11.8 °C
  • ಬಾಗಲಕೋಟೆ 12 °C
  • ರಾಯಚೂರು 12 °C
  • ಗದಗ 12 °C

ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ವಾಡಿಕೆಗಿಂತ 2-3 °C ಉಷ್ಣಾಂಶ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 25 ಮತ್ತು 15 °C ಇರಲಿದೆ.

Google pay instant loan: ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

Raitapi Jagattu

#ಮಾಲತೇಶ_ಮಾಳಮ್ಮನವರ್, ಸಂಪಾದಕರು ಮಾಲತೇಶ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!