AgricultureGovt SchemesNews

Agricultural Pumpset : ಈ ರೈತರ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಬಂದ್?

ಅನರ್ಹರ ಫಲಾನುಭವಿಗಳ ವಿದ್ಯುತ್ ಸಬ್ಸಿಡಿಗೆ ಬರಲಿದೆ ಕುತ್ತು...

ರಾಜ್ಯದ ರೈತರಿಗೆ ನೆರವಾಗಲೆಂದು ಇಂಧನ ಇಲಾಖೆ ಕೃಷಿ ಪಂಪ್‌ಸೆಟ್‌ಗಳಿಗೆ ಸಬ್ಸಿಡಿ (Agricultural Pumpset Subsidy) ನೀಡುತ್ತಿದೆ. ಆದರೆ ಈ ಅನುದಾನ ಅನರ್ಹರ ಪಾಲಾಗುತ್ತಿದ್ದು; ಅಂತಹ ರೈತರ ಕೃಷಿ ಪಂಪ್‌ಸೆಟ್ ನೆರವು ಬಂದ್ ಮಾಡಲು ಸರ್ಕಾರ ಸನ್ನದ್ಧವಾಗಿದೆ.

ರೈತರ 10 ಎಚ್.ಪಿ ವರೆಗಿನ ಕೃಷಿ ಪೆಂಪ್‌ಸೆಟ್‌ಗಳಿಗೆ ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಇದಕ್ಕಾಗಿ ಸರ್ಕಾರ ಇಂಧನ ಇಲಾಖೆಗೆ ಸಹಾಯಧನವನ್ನು ಬಿಡುಗಡೆ ಮಾಡುತ್ತಿದೆ. ರಾಜ್ಯದಲ್ಲಿ ಆಗುತ್ತಿರುವ ವಿದ್ಯುತ್ ನಷ್ಟಕ್ಕೆ ರೈತರಿಗೆ ಕೊಡುತ್ತಿರುವ ಉಚಿತ ವಿದ್ಯುತ್ ಕಾರಣ ಎಂಬ ಆಪಾದನೆ ಕೇಳಿ ಬರುತ್ತಿದೆ.

ಇದನ್ನೂ ಓದಿ:  ನಿಮ್ಮ ಜಮೀನು ಕಾಲುದಾರಿ ನಕ್ಷೆಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್

ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಬ್ಸಿಡಿ ಪಡೆಯುತ್ತಿರುವ ಅರ್ಹ ರೈತರನ್ನು ಗುರುತಿಸುವ ಕಾರ್ಯಕ್ಕೆ ಸರ್ಕಾರ ಮತ್ತೆ ಸನ್ನದ್ಧವಾಗಿದೆ. ಈ ಹಿಂದೆ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಹಿನ್ನಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಗೆ ಗಡುವು ವಿಧಿಸಿತ್ತು.

ಐಪಿ ಸೆಟ್’ಗಳಿಗೆ ಆಧಾರ್ ಲಿಂಕ್ ಮಾಡಿದರೆ ರಾಜ್ಯದಲ್ಲಿ ಒಟ್ಟಾರೆ ಎಷ್ಟು ಕೃಷಿ ಪಂಪ್‌ಸೆಟ್‌ಗಳಿವೆ? ಅವುಗಳಿಗೆ ಎಷ್ಟು ವಿದ್ಯುತ್ ಪೂರೈಕೆಯಾಗುತ್ತಿದೆ? ಎನ್ನುವ ಲೆಕ್ಕ ಸಿಗುತ್ತದೆ. ಇದರಿಂದ ರೈತರ ಮೇಲೆ ಮಾಡುತ್ತಿರುವ ಆರೋಪಗಳು ತಪ್ಪುತ್ತವೆ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿತ್ತು.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಭರ್ಜರಿ ಸೌಲಭ್ಯಗಳು

ವರ್ಷ ವರ್ಷ ಹೆಚ್ಚುತ್ತಿರುವ ಸಬ್ಸಿಡಿ ಹೊರೆ

2023ರ ಅಂಕಿ-ಅ೦ಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 34.17 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಪ್ರತಿ ವರ್ಷವೂ ಹೊಸದಾಗಿ 1.2 ಲಕ್ಷ ಪಂಪ್‌ಸೆಟ್‌ಗಳು ಈ ಸಬ್ಸಿಡಿಗೆ ಸೇರ್ಪಡೆಯಾಗುತ್ತಿದೆ. ಇದು ಸರ್ಕಾರಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ.

ಸ್ಥಿತಿವಂತರು, ರೈತರಲ್ಲದವರೂ ಕೂಡ ಸಬ್ಸಿಡಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಜರಡಿ ಹಿಡಿದು, ಅರ್ಹರನ್ನಷ್ಟೇ ಉಳಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ತಪ್ಪಿಸುವ ಅಂದಾಜನ್ನು ಹಣಕಾಸು ಇಲಾಖೆ ಮಾಡಿದೆ.

ಇದನ್ನೂ ಓದಿ: Murraya exotica : ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ ತರುವ ಬೆಳೆ

ಕೃಷಿ ಪಂಪ್‌ಸೆಟ್ ಫಲಾನುಭವಿಗಳ ಲೆಕ್ಕಾಚಾರ

ರಾಜ್ಯದಲ್ಲಿರುವ ಒಟ್ಟು 34.17 ಲಕ್ಷ ನೀರಾವರಿ ಪಂಪ್‌ಸೆಟ್‌ಗಳ ಪೈಕಿ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು 23.35 ಲಕ್ಷ ಸಂಪರ್ಕ ಹೊಂದಿದ್ದಾರೆ. ಈ ರೈತರು ಸಬ್ಸಿಡಿ ಪ್ರಯೋಜನ ಪಡೆಯುವ ನಿಜವಾದ ಫಲಾನುಭವಿಗಳಾಗಿದ್ದಾರೆ.

5-10 ಎಕರೆ ಜಮೀನು ಹೊಂದಿರುವ ರೈತರು 89,943 ಸಂಪರ್ಕ ಹೊಂದಿದ್ದು; ಇವರನ್ನು ಮಧ್ಯಮ ವರ್ಗದ ರೈತರೆಂದು ಪರಿಗಣಿಸಲಾಗಿದೆ.ಇನ್ನು 10 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು 27,037 ಸಂಪರ್ಕ ಹೊಂದಿದ್ದಾರೆ. ಸರ್ಕಾರದ ಪ್ರಕಾರ ಇವರೆಲ್ಲ ದೊಡ್ಡ ಭೂ ಹಿಡುವಳಿದಾರರು. ಇವರೆಲ್ಲ ಸಬ್ಸಿಡಿ ಯೋಜನೆಯ ಫಲಾನುಭವಿಗಳಲ್ಲ.

ಇದನ್ನೂ ಓದಿ:  ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಈ ರೈತರ ಪಂಪ್‌ಸೆಟ್ ಸಬ್ಸಿಡಿ ಬಂದ್?

ಸರ್ಕಾರ ಕಠಿಣ ನಿಯಮ ರೂಪಿಸಿದ್ದೇ ಆದರೆ 10 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು 27,037 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ಬಂದ್ ಆಗುವ ಸಾಧ್ಯತೆ ಇದೆ. ಶ್ರೀಮಂತ ರೈತರು ಅಥವಾ ಕೃಷಿಯೇತರ ಬಳಕೆದಾರರು ಸಬ್ಸಿಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು; ಇವರಿಗೂ ಉಚಿತ ವಿದ್ಯುತ್ ಸೌಲಭ್ಯ ಕಟ್ ಆಗಲಿದೆ.

ವಿಶೇಷವೆಂದರೆ ಸರ್ಕಾರದ ಆಂತರಿಕ ಶೋಧನೆಯ ಪ್ರಕಾರ 9 ಲಕ್ಷ ಪಂಪ್‌ಸೆಟ್‌ಗಳಿಗೆ ಸಂಬAಧಿಸಿದ 5.68 ಲಕ್ಷ ಫಲಾನುಭವಿಗಳ ಹೆಸರು ರೈತ ಫಲಾನುಭವಿಗಳ ಸರ್ಕಾರಿ ಡೇಟಾಬೇಸ್‌ನಲ್ಲಿ ಇಲ್ಲ. ಈ ರೈತರ ವಿದ್ಯುತ್ ಸಬ್ಸಿಡಿಗೂ ಕುತ್ತು ಬರುವ ಅಪಾಯವಿದೆ.

ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ Village Map information

Raitapi Jagattu

#ಮಾಲತೇಶ_ಮಾಳಮ್ಮನವರ್, ಸಂಪಾದಕರು ಮಾಲತೇಶ ಅವರು ಅನುಭವಿ ಪತ್ರಕರ್ತರಾಗಿದ್ದು, 2010ರಿಂದ ಪತ್ರಿಕೋಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹ ಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2022ರಿಂದ ಡಿಜಿಟಲ್ ಪತ್ರಿಕೋಮಧ್ಯಮದಲ್ಲಿ ನಿರತರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!