Free horticulture training-ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ತರಬೇತಿಗೆ ಆಯ್ಕೆಯಾದವರಿಗೆ ₹17,500 ಶಿಷ್ಯವೇತನ

ತೋಟಗಾರಿಕೆ ಇಲಾಖೆಯಿಂದ ರೈತರು ಮತ್ತು ರೈತರ ಮಕ್ಕಳಿಗೆ 17,500 ರೂಪಾಯಿ ಶಿಷ್ಯವೇತನದ ಜೊತೆಗೆ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…
2025-26ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ವಸತಿ, ಊಟದ ಜೊತೆಗೆ ಶಿಷ್ಯವೇತನ ಸಹಿತ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಅರ್ಜಿ ಕರೆಯಲಾಗಿದ್ದು; ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ದಿನಾಂಕ: 02-05-2025ರಿಂದ 28-02-2026ರ ವರೆಗೆ ಒಟ್ಟು 10 ತಿಂಗಳುಗಳ ಕಾಲ ಈ ತರಬೇತಿ ನಡೆಯಲಿದ್ದು; ತರಬೇತಿಗೆ ಆಯ್ಕೆಯಾಗಿ ಪೂರ್ಣಾವಧಿ ತರಬೇತಿ ಪೂರೈಸಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 1,750 ರೂ. ಶಿಷ್ಯ ವೇತನದಂತೆ 10 ತಿಂಗಳಿಗೆ ಒಟ್ಟು 17,500 ರೂ. ಶಿಷ್ಯ ವೇತನ ನೀಡಲಾಗುವುದು.
ಇದನ್ನೂ ಓದಿ: Karnataka Arogya Sanjeevini Scheme-ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಉಚಿತ ಚಿಕಿತ್ಸೆ
ಯಾರೆಲ್ಲ ಅರ್ಜಿ ಅಲ್ಲಿಸಬಹುದು?
ಎಸ್ಎಸ್ಎಲ್ಸಿ ಅಥವಾ 10ನೇ ತರಗತಿಯಲ್ಲಿ ಉತ್ತೀರ್ಣರಾದವರು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ತರಬೇತಿಯು ರೈತರ ಮಕ್ಕಳಿಗಾಗಿಯೇ ನಡೆಸುತ್ತಿರುವುದರಿಂದ, ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಸ್ವಂತ ಜಮೀನನ್ನು ಹೊಂದಿರಬೇಕು. ಉಚಿತ ತರಬೇತಿ ಪಡೆದು ತಮ್ಮ ಸ್ವಂತ ತೋಟಗಳನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಈ ತರಬೇತಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿಯನ್ನು ವರ್ಗಗಳ ಅನುಸಾರ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು 30 ವರ್ಷ, ಪ.ಜಾತಿ ಮತ್ತು ಪ.ಪಂಗಡ ಅಭ್ಯರ್ಥಿಗಳು 33 ವರ್ಷ ಹಾಗೂ ಮಾಜಿ ಸೈನಿಕರಿಗೆ 65 ವರ್ಷ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: 2025 rain information-ಈ ವರ್ಷ ಏಪ್ರಿಲ್ನಲ್ಲಿ ಮಳೆ | 2025ರ ಮಳೆ ಮಾಹಿತಿ ಇಲ್ಲಿದೆ…
ಅರ್ಜಿ ಸಲ್ಲಿಕೆ ಹೇಗೆ?
10 ತಿಂಗಳ ತೋಟಗಾರಿಕೆ ತರಬೇತಿಯ ಅರ್ಜಿಗಳನ್ನು ಆಯಾ ಜಿಲ್ಲೆಗಳ ಹಿರಿಯ ಸಹಾಯಕ ತೋಟಗಾರಿಕೆ ಅಥವಾ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ)/ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಅವರ ಕಛೇರಿಗೆ ಭೇಟಿ ನೀಡಿ ಅರ್ಜಿ ಫಾರಂ ಪಡೆಯಬಹುದು. ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಬೇಕು.
ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲಾತಿಗಳನ್ನು ಲಗತ್ತಿಸಬೇಕು. ಜೊತೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 30 ಮತ್ತು Sಅ/Sಖಿ ವರ್ಗದ ಅಭ್ಯರ್ಥಿಗಳು ರೂ. 15 ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ ಅಥವಾ ಡಿಡಿ ಅನ್ನು ತೋಟಗಾರಿಕೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಅವರ ಹೆಸರಿನಲ್ಲಿ ಪಡೆದು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 01-04-2025
ತರಬೇತಿಗೆ ನಿಗಧಿಪಡಿಸಿರುವ ತೋಟಗಾರಿಕೆ ಕೇಂದ್ರಗಳ ಜಿಲ್ಲಾವಾರು ಮಾಹಿತಿ

ಅಧಿಸೂಚನೆ ಮತ್ತು ಅರ್ಜಿ ನಮೂನೆ : Download
ಇದನ್ನೂ ಓದಿ: 500 ರೂಪಾಯಿಗೆ 10 ಲಕ್ಷ ವಿಮೆ ಪರಿಹಾರ | ಅಂಚೆ ಇಲಾಖೆಯ ಈ ಅವಕಾಶ ಮಿಸ್ ಮಾಡದೇ ಬಳಸಿಕೊಳ್ಳಿ…