
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗದ ಬಾಗಿಲು ತೆರೆದಿದೆ. ಬೆಂಗಳೂರು ಸೇರಿದಂತೆ ವಿವಿಧ ಘಟಕಗಳಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ (Branch Post Master -BPM) ಮತ್ತು ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (Assistant Branch Post Master -ABPM) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ವಿದ್ಯಾರ್ಹತೆ ಏನಿರಬೇಕು?
ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿ೦ದ ಗಣಿತ ಮತ್ತು ಇಂಗ್ಲಿಷ್ ಒಂದು ವಿಷಯವಾಗಿ ಪರಿಗಣಿಸಿ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪದವಿ ಪೂರೈಸಿರಬೇಕು. ಆಯಾ ರಾಜ್ಯದ ಅಧಿಕೃತ ಭಾಷೆ ಓದಲು, ಬರೆಯಲು, ಮಾತನಾಡಲು ಮತ್ತು ಸ್ಥಳೀಯ ಭಾಷೆಯ ಮೇಲೆ ಹಿಡಿತವಿರಬೇಕು.
ಕರ್ನಾಟಕ ಉದ್ಯೋಗ ಆಕಾಂಕ್ಷಿಗಳು ಅಧಿಕೃತ ಭಾಷೆ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಕಂಪ್ಯೂಟರ್ ಜ್ಞಾನದೊಂದಿಗೆ ಸೈಕಲ್ ತುಳಿಯಲು ಬರುವವರಾಗಿರಬೇಕು. ಹುದ್ದೆಗೆ ಆಯ್ಕೆಯಾದ ಮೇಲೆ ಬೇರೆ ಯಾವ ಸಂಸ್ಥೆಯಲ್ಲೂ ಕೆಲಸ ಮಾಡಲು ಅನುಮತಿ ಇಲ್ಲ.
ಇದನ್ನೂ ಓದಿ: Crop Insurance Karnataka : ರೈತರೇ ನಿಮಗೆ ಗ್ಯಾರಂಟೀ ಬೆಳೆ ವಿಮೆ ಹಣ ಸಿಗಬೇಕೆಂದರೆ ತಪ್ಪದೇ ಈ ಕ್ರಮ ಅನುಸರಿಸಿ…
ಮಾಸಿಕ ವೇತನವೆಷ್ಟು?
ಡಾಕ್ ಸೇವಕರಿಗೆ 12,000 ದಿಂದ 29,380 ರೂ. ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ 10,000 ದಿಂದ 24,470 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಇದರೊಂದಿಗೆ ಪರಿಹಾರ ಭತ್ಯೆ, ತುಟ್ಟಿ ಭತ್ಯೆ ಸೇರಿ ವಿವಿಧ ವರ್ಗಗಳಿಗೆ ಅನ್ವಯವಾಗುವ ಇತರ ಭತ್ಯೆಗಳೂ ಇರಲಿವೆ.
ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಹುದ್ದೆಗಳು?
- ಬಾಗಲಕೋಟಿ 24
- ಬಳ್ಳಾರಿ 41
- ಬೆಂಗಳೂರು ಜಿಪಿಒ 03
- ಬೆಳಗಾವಿ 27
- ಬೆಂಗಳೂರು ಪೂರ್ವ 46
- ಬೆಂಗಳೂರು ದಕ್ಷಿಣ 40
- ಬೆಂಗಳೂರು ಪಶ್ಚಿಮ 13
- ಬೀದರ್ 24
- ಚನ್ನಪಟ್ಟಣ 30
- ಚಿಕ್ಕಮಗಳೂರು 37
- ಚಿಕ್ಕೋಡಿ 18
- ಚಿತ್ರದುರ್ಗ 35
- ದಾವಣಗೆರೆ ಕಚೇರಿ 34
- ಧಾರವಾಡ 29
- ಗದಗ 09
- ಗೋಕಾಕ್ 03
- ಹಾಸನ 50
- ಹಾವೇರಿ 20
- ಕಲಬುರಗಿ 27
- ಕಾರವಾರ 32
- ಕೊಡಗು 33
- ಕೋಲಾರ 50
- ಕೊಪ್ಪಳ 22
- ಮಂಡ್ಯ 43
- ಮಂಗಳೂರು 23
- ಮೈಸೂರು 45
- ನಂಜನಗೂಡು 35
- ಪುತ್ತೂರು 50
- ರಾಯಚೂರು 13
- ಆರ್‌ಎಂಎಸ್ ಬಿಜಿ 05
- ಆರ್‌ಎಂಎಸ್ ಎಚ್‌ಬಿ 02
- ಆರ್‌ಎಂಎಸ್ ಕ್ಯೂ 02
- ಶಿವಮೊಗ್ಗ 36
- ಶಿರಸಿ 33
- ತುಮಕೂರು 64
- ಉಡುಪಿ 55
- ವಿಜಯಪುರ 26
- ಯಾದಗಿರಿ 18
ಇದನ್ನೂ ಓದಿ: KSDA AO AAO Recruitment 2025 : ಕರ್ನಾಟಕ ಕೃಷಿ ಇಲಾಖೆ 945 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ ಎಷ್ಟಿರಬೇಕು?
2025ರ ಮಾರ್ಚ್ 03ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಕನಿಷ್ಠ ವಯೋಮಿತಿ 18ರಿಂದ ಗರಿಷ್ಠ ವಯೋಮಿತಿ 40 ವರ್ಷದ ಒಳಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.
ಆಯ್ಕೆಯ ಮಾನದಂಡ
ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಅರ್ಜಿದಾರರನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಮಂಡಳಿಯ ಮಾನದಂಡಗಳ ಪ್ರಕಾರ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ. ಶಾರ್ಟ್’ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು.
ಇದನ್ನೂ ಓದಿ: PM Kisan 19th installment : ಫೆಬ್ರವರಿ 25ಕ್ಕೆ ರೈತರ ಖಾತೆಗೆ ಪಿಎಂ ಕಿಸಾನ್ 19ನೇ ಕಂತಿನ ಹಣ ಜಮಾ
ಅರ್ಜಿ ಶುಲ್ಕವೆಷ್ಟು?
ಎಸ್ಸಿ-ಎಸ್ಟಿ, ಮಹಿಳೆ, ಅಂಗವಿಕಲ ಮತ್ತು ತೃತೀಯಲಿಂಗ ಅಭ್ಯರ್ಥಿ ಹೊರತುಪಡಿಸಿ ಉಳಿದ ಇತರ ಎಲ್ಲ ವರ್ಗದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದ್ದು, ಅಧಿಕೃತ ವೆಬ್‌ಸೈಟ್ indiapostgdsonline.gov.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. ಬೇರೆ ಯಾವ ವಿಧಾನದ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ನೋಂದಣಿ, ಶುಲ್ಕ ಪಾವತಿ ಮತ್ತು ಅರ್ಜಿ ಸಲ್ಲಿಕೆ ವಿಧಾನದ ಕುರಿತು ಸಂಕ್ಷಿಪ್ತವಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ದಾಖಲೆ ಅಪೂರ್ಣ ಎನಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಕೆ ಕೋನೇ ದಿನಾಂಕ: 03-03-2025
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್