ಉದ್ಯೋಗಸರಕಾರಿ ಯೋಜನೆ

Udyoga Mela Govt of Karnataka 2024 : ಸರಕಾರಿ ಉದ್ಯೋಗ ಮೇಳದಲ್ಲಿ ಭರ್ಜರಿ ಉದ್ಯೋಗಾವಕಾಶ | ಎಲ್ಲಾ ರೀತಿ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳಿಗೂ ಅವಕಾಶ

WhatsApp Group Join Now
Telegram Group Join Now

Udyoga Mela Govt of Karnataka 2024

ರಾಜ್ಯ ಸರಕಾರ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳದ ನೋಂದಣಿಗೆ ಆಸಕ್ತ ಉದ್ಯೋಗಾಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೊಬೈಲ್‌ನಲ್ಲೇ ಉಚಿತ ನೋಂದಣಿ ಲಿಂಕ್ ಇಲ್ಲಿದೆ…

ಇದು ಸ್ವತಃ ರಾಜ್ಯ ಸರಕಾರವೇ ಆಯೋಜಿಸಿರುವ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ (Govt job fair 2024). 10ನೇ ತರಗತಿಯಿಂದ ಪದವಿ, ಸ್ನಾತಕೋತರ ಪದವಿ, ಉನ್ನತ ಪದವಿ ಸೇರಿ ಎಲ್ಲ ಹಂತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಗ್ಯಾರಂಟಿ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ.

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (Karnataka Skill Development Corporation) ವತಿಯಿಂದ ಬೆಂಗಳೂರಿನಲ್ಲಿ ‘ಯುವ ಸಮೃದ್ಧಿ ಸಮ್ಮೇಳನ’ ಹೆಸರಿನ ವಿನೂತ ಮಾದರಿಯ ಸಮ್ಮೇಳನ ನಡೆಯಲಿದೆ. ಉದ್ಯೋಗಾಕಾಂಕ್ಷಿ ಯುವ ಸಮೂಹವನ್ನು ಒಂದೆಡೆ ಕಲೆ ಹಾಕಿ ಅವರಿಗೆ ಉದ್ಯೋಗ ಭರವಸೆ ನೀಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವುದು ಈ ಮೇಳದ ಆಶಯವಾಗಿದೆ.

ಇದನ್ನೂ ಓದಿ: PM Vishwakarma Scheme free tool kit : ಕೇಂದ್ರ ಸರ್ಕಾರದಿಂದ 15 ಸಾವಿರ ಮೌಲ್ಯದ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ

ಎಲ್ಲಿ, ಯಾವಾಗ ನಡೆಯಲಿದೆ ಉದ್ಯೋಗ ಮೇಳ?

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ‘ಯುವ ಸಮೃದ್ಧಿ ಸಮ್ಮೇಳನ’ ಹಾಗೂ ‘ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ-2024’ ಕುರಿತು ಮಾಹಿತಿ ಹಂಚಿಕೊ೦ಡಿದ್ದು; ಈ ಮೇಳದ ವ್ಯವಸ್ಥಿತ ಆಯೋಜನೆಗಾಗಿಯೇ ವಿವಿಧ ಇಲಾಖೆಯ ಸಂಪುಟ ದರ್ಜೆ ಸಚಿವರುಗಳ ವಿಶೇಷ ತಂಡವನ್ನು ರಚಿಸಲಾಗಿದೆ.

ಇದೇ ಫೆಬ್ರವರಿ 26 ಮತ್ತು 27, 2024ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ-2024’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲಾ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳಿಗೆ ಮೇಳಕ್ಕೆ ಸ್ವಾಗತವಿದ್ದು; ಉಚಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Village Administrative Officer Recruitment 2024 : ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಗೆಜೆಟ್ ಅಧಿಸೂಚನೆ ಬಿಡುಗಡೆ | ನೇಮಕ ಬದಲಾವಣೆ ಕುರಿತ ಕರ್ನಾಟಕ ರಾಜ್ಯಪತ್ರ ರಿಲೀಸ್

ಯಾವೆಲ್ಲ ಉದ್ಯೋಗಗಳಿಗೆ ಅವಕಾಶ?

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ನೇತೃತ್ವದಲ್ಲಿ ನಡೆಯಲಿರುವ ಸದರಿ ಬೃಹತ್ ಉದ್ಯೋಗ ಮೇಳದಲ್ಲಿ ಕೇವಲ ಉದ್ಯೋಗಾಕಾಂಕ್ಷಿಗಳು ಮಾತ್ರವಲ್ಲದೇ 500ಕ್ಕೂ ಹೆಚ್ಚು ಉದ್ಯೋಗದಾತ ಸಂಸ್ಥೆಗಳು ಕೂಡ ಭಾಗಿಯಾಗಲಿವೆ. ಹೀಗಾಗಿ ಈ ಮೇಳದಲ್ಲಿ ಭಾಗಿಯಾಗುವ ಅಭ್ಯರ್ಥಿಗಳಿಗೆ ಸರಕಾರಿ ಹಾಗೂ ಖಾಸಗಿ ವಲಯದ ಉದ್ಯೋಗ ಅವಕಾಶಗಳು ಸಿಗಲಿವೆ.

ಎಲ್ಲ ರೀತಿಯ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳಿಗೆ ಮೇಳದಲ್ಲಿ ಭಾಗಿಯಾಗಲು ಅವಕಾಶ ಇರುವುದರಿಂದ ಆಯಾ ಅಭ್ಯರ್ಥಿಗಳ ವಿದ್ಯಾರ್ಹತೆಗೆ ತಕ್ಕನಾದ ಉದ್ಯೋಗಗಳು ಇಲ್ಲಿ ದೊರೆಯಲಿದೆ. ಉಚಿತ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: RDPR Recruitment 2024 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ | ಸಂಬಳ : ₹61,500 | Panchayat Raj fellowship recruitment

ನೋಂದಣಿ ಹೀಗೆ ಮಾಡಿ?

ಉದ್ಯೋಗಾಕಾಂಕ್ಷಿಗಳು ತಮ್ಮ ಮೊಬೈಲ್ ನಂಬರ್ ಹಾಗೂ e-mail ID ನಮೂದಿಸುವ ಮೂಲಕ OTP ಆಧಾರಿತ ನೋಂದಣಿ ಮಾಡಿಕೊಳ್ಳಬಹುದು. ಆಸಕ್ತರು ನೋಂದಣಿಗಾಗಿ 👉 ಇಲ್ಲಿ ಕ್ಲಿಕ್ ಮಾಡಿ

ಇದು ಉದ್ಯೋಗ ಮೇಳಕ್ಕಾಗಿ ಅಭ್ಯರ್ಥಿಗಳ ನೋಂದಣಿ ನಮೂನೆಯಾಗಿದೆ. ಉದ್ಯೋಗ ಮೇಳ / ಉದ್ಯೋಗಾವಕಾಶಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 1800 599 9918 ವಿಸ್ತರಣಾ ಸಂಖ್ಯೆ (4)ಗೆ ಸಂಪರ್ಕಿಸಬಹುದು ಅಥವಾ udyogamela.ksdc@karnataka.gov.inಗೆ ಇಮೇಲ್ ಮಾಡಿ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…

https://raitapijagattu.com/google-pay-loan-google-pay-instant-loan-get-a-personal-loan-with-google-pay

WhatsApp Group Join Now
Telegram Group Join Now

Related Posts

error: Content is protected !!