ಉದ್ಯೋಗ

Village accountant recruitment 2024 : ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | ಡೈರೆಕ್ಟ್ ಲಿಂಕ್ ಇಲ್ಲಿದೆ… | ಪಿಯುಸಿ ಪಾಸಾದವರಿಗೆ ಅವಕಾಶ

WhatsApp Group Join Now
Telegram Group Join Now

Village accountant recruitment 2024 : ರಾಜ್ಯದಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ಇದೀಗ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಆಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಅರ್ಜಿ ಸಲ್ಲಿಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬ೦ಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಳೆದ ಫೆಬ್ರವರಿ 20, 2024 ರಂದು ವಿವರವಾದ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು. ಅಂದು ಪ್ರಾಧಿಕಾರ ಬಿಡುಗಡೆ ಮಾಡಿದ್ದ ಅಧಿಸೂಚನೆಯಲ್ಲಿ ಏಪ್ರಿಲ್ 03, 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಕಳೆದ ಮಾರ್ಚ್ 07, 2024ರಂದು ಪುನಃ ಪ್ರಕಟಣೆ ಹೊರಡಿಸಿದ ಪ್ರಾಧಿಕಾರವು ಆನ್‌ಲೈನ್ ಅರ್ಜಿಯಲ್ಲಿ ಕೆಲವು ಬದಲಾವಣೆಯ ಕಾರಣದಿಂದಾಗಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿತ್ತು. ಇದೀಗ 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪರಿಷ್ಕೃತ ವೇಳಾಪಟ್ಟಿಯಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ: Karnataka 2nd PUC Results 2024 : ದ್ವಿತೀಯ ಪಿಯುಸಿ ಫಲಿತಾಂಶ | ಪಕ್ಕಾ ಮಾಹಿತಿ ಕೊಟ್ಟ ಪರೀಕ್ಷಾ ಮಂಡಳಿ

Village accountant recruitment 2024 ನೇಮಕಾತಿ ಸಂಕ್ಷಿಪ್ತ ವಿವರ

 • ನೇಮಕಾತಿ ಇಲಾಖೆ : ಕಂದಾಯ ಇಲಾಖೆ (Revenue department)
 • ಹುದ್ದೆಗಳ ಹೆಸರು : ಗ್ರಾಮ ಆಡಳಿತ ಅಧಿಕಾರಿ (Village Administrator)
 • ಹುದ್ದೆಗಳ ಸಂಖ್ಯೆ : 1000 ಹುದ್ದೆಗಳು
 • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
 • ಉದ್ಯೋಗ ಸ್ಥಳ : ಕರ್ನಾಟಕ ರಾಜ್ಯದ್ಯಂತ

ವಿದ್ಯಾರ್ಹತೆ : ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.

ವಯೋಮಿತಿ ವಿವರ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಟ ವಯಸ್ಸು 35 ವರ್ಷ ಮೀರಿರಬಾರದು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಗಳ ಅನುಸಾರ ಗರಿಷ್ಟ ವಯೋಮಿತಿಯಲ್ಲಿ ಈ ಕೆಳಗಿನಂತೆ ಸಡಿಲಿಕೆ ನೀಡಲಾಗುತ್ತದೆ.

 • ಸಾಮಾನ್ಯ ವರ್ಗ – 35 ವರ್ಷ
 • 2ಎ, 2ಬಿ, 3ಎ, 3 ಬಿ – 38 ವರ್ಷ
 • ಪ. ಜಾತಿ, ಪ. ಪಂಗಡ ಮತ್ತು ಪ್ರ ವರ್ಗ 1 – 40 ವರ್ಷ

ಇದನ್ನೂ ಓದಿ: Karnataka PDO Recruitment 2024 : ಕರ್ನಾಟಕ ಗ್ರಾಮ ಪಂಚಾಯತಿ PDO ಹುದ್ದೆಗಳಿಗೆ ಅರ್ಜಿ ಆಹ್ವಾನ

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಆದ ಬದಲಾವಣೆಗಳು (Changes in recruitment of Village accountant)

ಈ ಮೊದಲಿದ್ದ ‘ಗ್ರಾಮ ಲೆಕ್ಕಾಧಿಕಾರಿ’ ಹುದ್ದೆಗಳ ಹೆಸರನ್ನು ಕರ್ನಾಟಕ ಸರಕಾರವು ಈಚೆಗೆ ಬದಲಾವಣೆ ಮಾಡಿ ‘ಗ್ರಾಮ ಆಡಳಿತಾಧಿಕಾರಿ’ (Village Administrator) ಎಂದು ಅಧಿಕೃತ ಮರುನಾಮಕರಣ ಮಾಡಿದೆ. ಅದೇ ರೀತಿ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಮಹತ್ವದ ಬದಲಾವಣೆ ಮಾಡಿದೆ. ಈ ಮೊದಲು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು, ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.

ಈಗ ಹೊಸ ಬದಲಾವಣೆಯ ಪ್ರಕಾರ ಕೋವಿಡ್ ಬಂದ ನಂತರ ಪಿಯುಸಿಯಲ್ಲಿ ಅನೇಕ ವಿದ್ಯಾರ್ಥಿಗಳ ಫಲಿತಾಂಶ 100ಕ್ಕೆ 100 ಬಂದಿದೆ. ಮೊದಲಿನ ಕ್ರಮ ಸರಿಯಾದ ಮಾರ್ಗವಲ್ಲವೆಂದು, ನೂತನ ಆಯ್ಕೆ ಪ್ರಕ್ರಿಯೆಯಿಂದ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿದೆ. ಹೊಸ ಬದಲಾವಣೆಯ ಪ್ರಕಾರ ಪಿಯುಸಿ ಶಿಕ್ಷಣ ಅರ್ಹತೆ ಆಧರಿಸಿ ಅರ್ಹ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುಲಾಗುತ್ತದೆ.

ಇದನ್ನೂ ಓದಿ: Milk Incentive arrears : ಬರಗಾಲದಲ್ಲಿ ನೆರವಾಗದ ಹಾಲಿನ ಪ್ರೋತ್ಸಾಹಧನ | ನಿಮ್ಮ ಹಣ ಜಮಾ ಈಗಲೇ ಚೆಕ್ ಮಾಡಿ

ಮಾಸಿಕ ಸಂಬಳ ಎಷ್ಟು ಇರುತ್ತದೆ? (Village accountant salary) : ಗ್ರಾಮ ಆಡಳಿತ ಅಧಿಕಾರಿಯಾಗಿ ಆಯ್ಕೆಯಾದವರಿಗೆ ಮಾಸಿಕ ₹21,000 ರಿಂದ ₹42,000 ವರೆಗೆ ಸಂಬಳ ಇರುತ್ತದೆ.

ಅರ್ಜಿ ಶುಲ್ಕ : ರಾಜ್ಯಾದ್ಯಂತ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ವರ್ಗಗಳ ಅನುಸಾರ ಈ ಕೆಳಗಿನಂತೆ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

 • ಸಾಮಾನ್ಯ ವರ್ಗ ಮತ್ತು 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ – ₹750
 • ಪ. ಜಾತಿ, ಪ. ಪಂಗಡ, ಪ್ರ ವರ್ಗ 1, ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ – ₹500

ಅರ್ಜಿ ಸಲ್ಲಿಸುವುದು ಹೇಗೆ?

ಏಪ್ರಿಲ್ 05ರಿಂದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಕೆಳಗೆ ನೀಡಿರುವ ಲಿಂಕ್ ಬಳಸಿಕೊಂಡು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು 

 • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 05-04-2024
 • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 04-05-2024
 • ಅರ್ಜಿಶುಲ್ಕ ಪಾವತಿ ಕೊನೇ ದಿನಾಂಕ : 07-05-2024

ಅಧಿಸೂಚನೆ (official notification) : ಡೌನ್‌ಲೋಡ್
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್  : ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ: SSC Sub Inspector Recruitment 2024 : 4,000+ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ | ಸಂಬಳ ₹1,12,400 ರೂಪಾಯಿ | ಈಗಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Posts

error: Content is protected !!