ಸುದ್ದಿಗಳುಹವಾಮಾನ

Weather Report 2023 : ಸರಾಸರಿ ಮಳೆಯಾದರೂ ಬರಗಾಲ ಹೇಗೆ ಬಂತು? ಹವಾಮಾನ ಇಲಾಖೆ ರಿಪೋರ್ಟ್ ಇಲ್ಲಿದೆ…

WhatsApp Group Join Now
Telegram Group Join Now

ರಾಜ್ಯದಲ್ಲಿ 2023ನೇ ವರ್ಷದ ಮಳೆ ವರದಿಯನ್ನು ಹವಾಮಾನ ಇಲಾಖೆ ಬಿಡುಗಡೆ ಮಾಡಿದೆ. ಇಡೀ ವರ್ಷ ಸರಾಸರಿ ಮಳೆಯಾದರೂ ಸಹ ಬರದ ಛಾಯೆ ಆವರಿಸಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವವಾಗಿದೆ…

ಭಾರತೀಯ ಹವಾಮಾನ ಇಲಾಖೆಯು 2023ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ರಾಜ್ಯದ ಮಳೆ, ಬಿಸಿಲು, ಚಳಿ ಸೇರಿದಂತೆ ಹವಾಮಾನ ವಿದ್ಯಮಾನದ ಕುರಿತು ವರದಿ ಬಿಡುಗಡೆ ಮಾಡಿದೆ. 2023ನೇ ವರ್ಷ ಅತ್ಯಂತ ‘ಮಳೆ ಕೊರತೆಯ ವರ್ಷ’ (Rain deficit year) ಎಂದೇ ಈತನಕ ಅಂದಾಜಿಸಲಾಗಿತ್ತು. ಆದರೆ ತೀರಾ ಮಳೆ ಕೊರತೆಯ ವರ್ಷವೇನಲ್ಲ ಎಂಬ ಅಂಶ ಹಮಾಮಾನ ಇಲಾಖೆ ವರದಿಯಿಂದ ಸ್ಪಷ್ಟವಾಗಿದೆ.
ಹೌದು, ರಾಜ್ಯದಲ್ಲಿ ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರು ಹಂಗಾಮಿನುಲ್ಲಿ ಸರಾಸರಿ 120 ವಾಡಿಕೆ ಮಳೆಯ ದಿನಗಳನ್ನು ರಾಜ್ಯ ಹೊಂದಿದೆ. ಈ 120 ದಿನಗಳ ಪೈಕಿ 2023ರಲ್ಲಿ ಭರ್ತಿ 88 ದಿನಗಳ ಕಾಲ ಭಾರೀ ಮಳೆಯಾಗಿದೆ. ಆದರೂ ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು ಹೇಗೆ? ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿದೆ.
ಇದನ್ನೂ ಓದಿ: Village Accountant Recruitment 2024 |1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ | PUC ಪಾಸಾದವರಿಗೆ ಭರ್ಜರಿ ಅವಕಾಶ | ಕಂದಾಯ ಸಚಿವರ ಮಹತ್ವದ ಮಾಹಿತಿ…
ಶೇ.18ರಷ್ಟು ಮಳೆ ಕೊರತೆ : ರಾಜ್ಯದಲ್ಲಿ 2023ರ ಒಂದು ವರ್ಷದ ಅವಧಿಯಲ್ಲಿ ಶೇ.18ರಷ್ಟು ಮಳೆ ಕೊರತೆ ಉಂಟಾಗಿದೆ. ಇಡೀ ವರ್ಷದಲ್ಲಿ 88 ದಿನ 7 ಸೆಂಟಿ ಮೀಟರ್‌ಗಿಂತ ಅಧಿಕ ಪ್ರಮಾಣ ಮಳೆಯಾಗಿದೆ ಎಂದು ಭಾರತೀಯ ಹಮಾಮಾನ ಇಲಾಖೆ ತಿಳಿಸಿದೆ. ಯಾವ್ಯಾವ ಹಂಗಾಮಿನಲ್ಲಿ ಎಷ್ಟೆಷ್ಟು ಮಳೆ ಸುರಿದಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಮುಂಗಾರು ಹಂಗಾಮು: ಜೂನ್‌ನಿಂದ ಸೆಪ್ಟೆಂಬರ್‌ನ ಮುಂಗಾರಿನ ಅವಧಿಯಲ್ಲಿ 831.8 ಮಿಲಿ ಮೀಟರ್ ವಾಡಿಕೆ ಮಳೆಯಾಗಿದ್ದು; 678.4 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ಶೇ.18 ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಹಂಗಾಮಿನಲ್ಲಿ ಒಟ್ಟು 68 ದಿನ ಭಾರೀ ಮಳೆಯಾಗಿದೆ. 7ರಿಂದ 33 ಸೆಂಟಿ ಮೀಟರ್ ವರೆಗೆ ಮಳೆಯಾಗಿದೆ.
ಇದನ್ನೂ ಓದಿ: ಮತ್ತೆ ಮತ್ತೆ ಬರಗಾಲದ ಮುನ್ಸೂಚನೆ | ಹವಾಮಾನ ಇಲಾಖೆ ಹೊರಹಾಕಿದ ಮಾಹಿತಿ ಇಲ್ಲಿದೆ… Again and again drought forecast
ಹಿಂಗಾರು ಹಂಗಾಮು: ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯ ಹಿಂಗಾರು ಹಂಗಾಮಿನಲ್ಲಿ 177.2 ಮಿಲಿ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ 113.3 ಮಿಲಿ ಮೀಟರ್ ಮಳೆಯಾಗಿದೆ. ಶೇ.36ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಹಂಗಾಮಿನಲ್ಲಿ ಒಟ್ಟು 10 ದಿನ 7ರಿಂದ 10 ಸೆಂಟಿ ಮೀಟರ್ ವರೆಗೆ ಮಳೆಯಾಗಿದೆ.
ಉಷ್ಣಾಂಶದ ಮಾಹಿತಿ : ಇನ್ನು ಇಡೀ ವರ್ಷದಲ್ಲಿ ವರದಿಯಾದ ಉಷ್ಣಾಂಶದ ಮಾಹಿತಿ ನೋಡುವುದಾದರೆ, ಜೂನ್ 3ರಂದು ಕಲಬುರಗಿಯಲ್ಲಿ ಅತಿ ಹೆಚ್ಚು (ಗರಿಷ್ಠ) ಉಷ್ಣಾಂಶ 42.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಜನವರಿ 9ರಂದು ಅತೀ ಕನಿಷ್ಠ ಉಷ್ಣಾಂಶ 5.5 ಡಿಗ್ರಿ ಸೆಲ್ಸಿಯಸ್ ಬೀದರ್‌ನಲ್ಲಿ ದಾಖಲಾಗಿತ್ತು.
ಇದನ್ನೂ ಓದಿ: Drought relief Release : 25 ಲಕ್ಷ ರೈತರ ಖಾತೆಗೆ ಬರ ಪರಿಹಾರ ಹಣ ಜಮಾ | ಕಂದಾಯ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…
ಚಂಡಮಾರುತಗಳ ಮಾಹಿತಿ : ಅದೇ ರೀತಿ ಅರಬ್ಬಿ ಸಮುದ್ರದಲ್ಲಿ ಎರಡು ಚಂಡಮಾರುತ ಹಾಗೂ ಬಂಗಾಳ ಕೊಲ್ಲಿಯಲ್ಲಿ ಮೂರು ಚಂಡಮಾರುತ ರೂಪುಗೊಂಡಿದ್ದವು. ಇದರಿಂದ ಸ್ವಲ್ಪ ಮಟ್ಟಿನ ಪ್ರಭಾವ ರಾಜ್ಯದ ಮೇಲೆ ಉಂಟಾಗಿದೆ. ಆದರೆ, ಹೆಚ್ಚಿನ ತೊಂದರೆ ಆಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೀಗೆ ಇಡೀ ವರ್ಷ ವಾಡಿಕೆಯ ಮಳೆಗಿಂತ ಸರಾಸರಿ ಮಳೆಯಾಗಿದ್ದರೂ ಸಹ 2023ನೇ ವರ್ಷ ಹೇಗೆ ಬರಪೀಡಿತ ವರ್ಷವಾಯಿತು? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಕೃಷಿ ಚಟುವಟಿಕೆಗೆ ಅನುಗುಣವಾಗಿ ಸಕಾಲಕ್ಕೆ ಮಳೆಯಾಗದಿರುವುದು, ಕೃಷಿಭೂಮಿಗಿಂತ ನಗರಪ್ರದೇಶ, ಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಸುರಿದಿರುವುದು ಸೇರಿದಂತೆ ಬರದ ಛಾಯೆಗೆ ವಿವಿಧ ಕಾರಣಗಳನ್ನು ಹವಾಮಾನ ತಜ್ಞರು ಅಂದಾಜಿಸುತ್ತಾರೆ.
ಇದನ್ನೂ ಓದಿ: ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ… WCD Karnataka Anganwadi Recruitment 2024
WhatsApp Group Join Now
Telegram Group Join Now

Related Posts

error: Content is protected !!