ತೂಕ ಇಳಿಕೆಗೆ ತೊಂಡೆಕಾಯಿ

Raitapi Jagattu

ತೊಂಡೆಕಾಯಿ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎಂಬ ಸಲಹೆ ನೀಡುತ್ತಾರೆ ತಜ್ಞರು.

ತೊಂಡೆಕಾಯಿಯಲ್ಲಿ ಫೈಬರ್, ವಿಟಮಿನ್ ಬಿ, ಬಿ1, ಬಿ2, ಬಿ3, ಬಿ6, ಬಿ9, ವಿಟಮಿನ್ ಸಿಗಳಿಂದ ಸಮೃದ್ಧವಾಗಿದೆ.

ಕ್ಯಾಲ್ಸಿಯಂ ಮೆಗ್ನೀಷಿಯಮ್, ಕಬ್ಬಿಣ, ರಂಜಕ, ಪೊಟ್ಯಾಷಿಯಮ್, ಸೋಡಿಯಂ ಮತ್ತು ಸತುವಿನಂಥ ಅನೇಕ ಪೋಷಕಾಂಶಗಳಿಂದ ಕೂಡಿದೆ.

ತೊಂಡಿಕಾಯಿ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು, ಜೀರ್ಣಕ್ರಿಯೆ, ಅಲ್ಸರ್ ಮತ್ತು ಗ್ಯಾಸ್’ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕರುಳು ಮತ್ತು ದೃಷ್ಟಿ ದೋಷಗಳನ್ನು ಸರಿಪಡಿಸಲು, ನರಮಂಡಲವನ್ನು ಬಲಪಡಿಸಲು ತೊಂಡಿಕಾಯಿ ಸಹಕಾರಿಯಾಗಿದೆ.

ಮುಖ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ತೊಂಡೆಕಾಯಿ ತುಂಬಾ ಉತ್ತಮ ತರಕಾರಿಯಾಗಿದ್ದು, ಬೊಜ್ಜು ನಿವಾರಣೆ ಗುಣಗಳಿಂದ ಸಮೃದ್ಧವಾಗಿದೆ.

ತೊಂಡಿಕಾಯಿ ಚಯಾಪಚಯ ಪ್ರಮಾಣವನ್ನೂ ಹೆಚ್ಚಿಸುತ್ತದೆ. ತೊಂಡೆಕಾಯಿಯನ್ನು ಪಲ್ಯ, ಸಲಾಡ್, ಸಾಂಬಾರ್ ಈ ರೂಪಗಳಲ್ಲಿ ಹೆಚ್ಚಾಗಿ ಸೇವನೆ ಮಾಡುತ್ತಾರೆ.

Health Benefits Of Coccinia Grandis