ಸುದ್ದಿಗಳು

Worldwide influence of Shiva : ವಿಶ್ವವ್ಯಾಪಿ ಪ್ರಭಾವಿಸಿದ ಪರಮಾತ್ಮ | ಶ್ರೀಲ೦ಕಾ, ನೇಪಾಳ, ಟಿಬೇಟ್, ಚೀನಾ, ಐರ್ಲೆಂಡ್, ಇಟಲಿ, ಆಫ್ರಿಕಾಗಳಲ್ಲೂ ಶಿವಾರಾಧನೆ

WhatsApp Group Join Now
Telegram Group Join Now

Worldwide influence of Shiva : ಆದಿ-ಅಂತ್ಯವಿಲ್ಲದ ಪರಶಿವನು ಎಲ್ಲ ಎಲ್ಲೆಗಳನ್ನೂ ಮೀರಿದ ಅನಂತಾತ್ಮನು. ಜಗತ್ತಿನಾದ್ಯಂತ ಶಿವ ಪ್ರಭಾವ ಮಾಹಿತಿ ಇಲ್ಲಿದೆ…

ಶಿವ ತನ್ನ ಸರಳತೆಯಿಂದಲೇ ಜಾತಿ-ಧರ್ಮ, ದೇಶ-ಭಾಷೆ, ಗಡಿಗಳನ್ನು ಮೀರಿ ಬಹುಜನರನ್ನು ಪ್ರಭಾವಿಸಿದ್ದಾನೆ. ಬಹು ಸಂಸ್ಕೃತಿಯನ್ನು ಆಕರ್ಷಿಸಿದ್ದಾನೆ. ಪ್ರಪಂಚದ ಬೇರೆ ಬೇರೆ ಪಂಗಡಗಳು, ಭಿನ್ನ ವಿಭಿನ್ನ ಸಂಸ್ಕೃತಿಗಳು ಶತ ಶತಮಾನಗಳಿಂದಲೂ ಶಿವನನ್ನು ನಾನಾ ಹೆಸರುಗಳಲ್ಲಿ ಆರಾಧಿಸಿಕೊಂಡು ಬಂದಿವೆ.

ಶ್ರೀಲ೦ಕಾ, ನೇಪಾಳ, ಟಿಬೇಟ್, ಚೀನಾ, ಐರ್ಲೆಂಡ್, ಇಟಲಿಯ ವ್ಯಾಟಿಕನ್ ಸಿಟಿ, ಆಫ್ರಿಕಾ ವಿಯೋಟ್ನಾಂ ದೇಶಗಳಲ್ಲೂ ಶಿವನ ಬೇರೆ ಬೇರೆ ಹೆಸರಿನ ದೇಗುಲಗಳಿವೆ. ಪ್ರಾಚೀನ ನಾಗರಿಕತೆಗಳಾದ ಹರಪ್ಪಾ ಸಂಸ್ಕೃತಿಯ ಮೂಲವೇ ಶಿವನಾಗಿದ್ದಾನೆ.

ಇದನ್ನೂ ಓದಿ: LPG cylinder subsidy extension : ಮುಂದಿನ ವರ್ಷದ ವರೆಗೂ ಇವರಿಗೆ ₹600 ರೂಪಾಯಿಗೆ ಸಿಲಿಂಡರ್ | ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ವಿಸ್ತರಣೆ

ಶ್ರೀಲಂಕಾ ಎಂಬ ಶಿವಭೂಮಿ

ರಾವಣನ ನಾಡು ಎಂದೇ ಬಿಂಬಿತವಾಗಿರುವ ನೆರೆಯ ಶ್ರೀಲಂಕಾದಲ್ಲಿ ತಿರುಕೆಥೀಸ್ವರಂ, ಮುನೇಸ್ವರಂ, ನಗುಲೇಸ್ವರಂ, ಕೊನೇಸ್ವರಂ ಹಾಗೂ ಥೊಂಡೀಸ್ವರA ಎಂಬ ಹೆಸರಿನ ಶಿವನ ಐದು ಪ್ರಮುಖ ದೇವಾಲಯಗಳಿವೆ. ವಿಶೇಷವೆಂದರೆ ಆ ನೆಲದ ಸಂತ ತಿರುಮೂರ್ಲರು ತನ್ನ ‘ತಿರುಮಂತಿರ೦’ ಕೃತಿಯಲ್ಲಿ ಶ್ರೀಲಂಕಾವನ್ನು ‘ಸಿವ ಪೂಮಿ’ ಅಂದರೆ ಶಿವನ ಭೂಮಿ ಎಂದೇ ಬಣ್ಣಿಸಿದ್ದಾರೆ.

ರಾಮಾಯಣದ ಮೂಲ ಪಾತ್ರಗಳಲ್ಲಿ ಒಂದಾಗಿರುವ ರಾವಣ ಶಿವನ ಪರಮ ಭಕ್ತ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗಾಗಿ ರಾವಣನೇ ಕಟ್ಟಿದ ಲಂಕೆಯನ್ನು ‘ಶಿವಭೂಮಿ’ ಎಂದು ಉಲ್ಲೇಖಿಸಿರುವುದರ ಹಿಂದೆ ಪರಂಪರೆಯ ನಿಗೂಢತೆಯೇ ಅಡಗಿದೆ.

ಇದನ್ನೂ ಓದಿ: Free Horticulture training with stipend : ರೈತರಿಗೆ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ತರಬೇತಿ ಜೊತೆಗೆ ₹17,500 ಶಿಷ್ಯವೇತನ

ನೇಪಾಳ ಪಶುಪತಿನಾಥ

ಭಾರತದ ಮತ್ತೊಂದು ನೆರೆಯ ರಾಷ್ಟçವಾದ ನೇಪಾಳದಲ್ಲಿ ಶಿವನು ಪಶುಪತಿನಾಥನೆಂದೇ ಸುಪ್ರಸಿದ್ಧ. ಇಲ್ಲಿ ಹಿಂದೂಗಳಲ್ಲದೆ ಬೌದ್ಧರಿಗೂ ಪಶುಪತಿನಾಥ ಪೂಜನೀಯ. ಭಾಗ್ಮತಿ ನದಿಯ ದಂಡೆಯ ಮೇಲಿರುವ ಪಶುಪತಿನಾಥ ದೇವಾಲಯ ಜಗತ್ತಿನ ಅನೇಕ ದೇಶಗಳ ಶಿವಭಕ್ತರನ್ನು ಆಕರ್ಷಿಸುತ್ತಿದೆ.

ಈ ಪುರಾತನ ದೇಗುಲದಲ್ಲಿ ಪಶುಪಾಲಕ ರೂಪದಲ್ಲಿರುವ ಶಿವ ಹಾಗೂ ಟಗರಿನ ಕೆತ್ತನೆಗಳಿವೆ. ಅದೇ ಪ್ರಕಾರ ಟಿಬೆಟಿಯನ್ ಬೌದ್ಧ ಧರ್ಮಿಯರಲ್ಲೂ ಶಿವನಿಗೆ ಅಗ್ರ ಸ್ಥಾನವಿದೆ. ಇಂಡೋ-ಟಿಬೆಟಿಯನ್ ವಜ್ರಾಯನ ಬೌದ್ಧ ಧರ್ಮದ ಪ್ರಾರಂಭಿಕ ಹಂತದ ಪಂಗಡಗಳಲ್ಲಿ ಒಂದಾದ ‘ನ್ಯಿಂಗ್ಮ’ ಪಂಗಡದ ಸಂರಕ್ಷಕನೇ ಈ ಶಿವ ಮಹಾದೇವ ಎನ್ನಲಾಗುತ್ತದೆ.

ಲ್ಹಾ ಛೆನ್ ಎಂದು ಕರೆಯಲ್ಪಡುವ ಮಹಾದೇವ ನ್ಯಿಂಗ್ಮದ ಪವಿತ್ರ ಧಾರ್ಮಿಕ ಗ್ರಂಥಗಳನ್ನು ಕಾಪಾಡುವ ದೈವವಾಗಿದೆ. ಟಿಬೆಟಿಯನ್ ಭಾಷೆಯಲ್ಲಿ ಲ್ಹಾ ಛೆನ್ ಅಂದರೆ ‘ಮಹಾ ದೇವರು’ ಎಂದರ್ಥ. ಇದು ವಿಶೇಷವಾಗಿ ಮಹಾದೇವನನ್ನು ಕುರಿತೇ ಸೂಚಿಸುವ ಪದವಾಗಿದೆ. ಶಿವರುದ್ರ ಬೌದ್ಧರ ತಾಂತ್ರಿಕ ಗ್ರಂಥಗಳಲ್ಲಿ ಬಹಳ ಪ್ರಚಲಿತವಾಗಿದ್ದಾನೆ.

ಇದನ್ನೂ ಓದಿ: Rain forecast 2024 : ಈ ವರ್ಷ ಮಳೆ ಬೆಳೆ ಸಮೃದ್ಧ | ದೈವವಾಣಿ ಮತ್ತು ಹವಾಮಾನ ಮುನ್ಸೂಚನೆ ಏನು ಹೇಳುತ್ತದೆ?

ಚೀನಾ, ಐರ್ಲೆಂಡ್’ನಲ್ಲೂ ಶಿವಾರಾಧನೆ

ಚೀನಾ, ಐರ್ಲೆಂಡ್’ನಲ್ಲಿಯೂ ಶಿವಾರಾಧನೆ ಸಾಮಾನ್ಯವಾಗಿದೆ. ಚೀನಾದ ಫುಜಿಯನ್ ಪ್ರಾಂತ್ಯದಲ್ಲಿರುವ ಖುವಾನ್ಜೊಹ ಪ್ರದೇಶದ ಕ್ಸಿನ್ಮೆನ್ ಎನ್ನುವ ಸ್ಥಳದಲ್ಲಿ ಆರನೇ ಶತಮಾನದ ಶಿವ ದೇಗುಲದ ಪಳೆಯುಳಿಕೆಗಳು ಕಂಡು ಬಂದಿವೆ. ವಿಶೇಷವೆಂದರೆ 1950ರ ಆಸುಪಾಸಿನಲ್ಲಿ ಮಕ್ಕಳಿಲ್ಲದ ಚೀನಿ ಮಹಿಳೆಯರು ಈ ದೇಗುಲಕ್ಕೆ ಹೋಗಿ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸಿದ್ದರ ಬಗ್ಗೆ ಹಲವೆಡೆ ವಿವರಣೆಗಳಿವೆ.

ಇನ್ನು ಐರ್ಲೆಂಡ್’ನಲ್ಲಿಯೂ ಪ್ರಾಚೀನ ಶಿವಲಿಂಗದ ಕುರುಹು ಲಭಿಸಿದೆ. ಈ ದೇಶದ ಕೌಂಟಿ ಮೆಥ್‌ನಲ್ಲಿ ಹಿಲ್ ಆಫ್ ತಾರಾ ಎನ್ನುವ ಬೆಟ್ಟದ ಮೇಲೆ ಸ್ಥಳೀಯರು Stone of Destiny ಎಂದು ಕರೆಯಲ್ಪಡುವ ‘ಲಿಯ ಫೇಯ್ಲ’ ಎನ್ನುವ ನಿಗೂಢವಾದ ಬೃಹತ್ ಶಿಲೆಯೊಂದಿದೆ.

ಅಲ್ಲಿನ ದಂತಕಥೆಗಳ ಪ್ರಕಾರ ಐರ್ಲೆಂಡನ್ನು ಕ್ರಿ.ಪೂ 1897ರಿಂದ 1700ರವರೆಗೆ ಆಳಿದ ಧನು ದೇವತೆಯ ಮಕ್ಕಳಾದ ತುವಾಥ ಡೇ ಡನನ್ ಅವರು ಈ ಬೃಹತ್ ಶಿಲೆಯನ್ನು ಸ್ಥಾಪಿಸಿದ್ದು; ಕ್ರಿ.ಶ 500ರ ವರೆಗೆ ಎಲ್ಲ ಐರಿಷ್ ರಾಜರ ಪಟ್ಟಾಭಿಷೇಕ ಇದರ ಸಮ್ಮುಖದಲ್ಲಿಯೇ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Panchamitra whatsapp Chat Service : ವಾಟ್ಸಾಪ್‌ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್‌ಗೆ ‘ಹಾಯ್’ ಅಂತ ಕಳಿಸಿ..

ವ್ಯಾಟಿಕನ್ ನಗರದಲ್ಲೂ ಶಿವಗುರುತು

ಅದೇ ರೀತಿ ಕ್ರಿಶ್ಚಿಯನ್ ಪಂಗಡಗಳಲ್ಲಿ ಒಂದಾದ ಕೆಥೋಲಿಕ್ ಪಂಥದ ಕೇಂದ್ರಸ್ಥಳವಾದ ವ್ಯಾಟಿಕನ್ ನಗರದ ಉತ್ಖನನದಲ್ಲಿ ದೊರೆತ ಒಂದು ಶಿವಲಿಂಗವನ್ನು ರೋಮಿನ ವ್ಯಾಟಿಕನ್‌ನ ಎಟ್ರೂಸ್ಕನ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿರಿಸಲಾಗಿದೆ. ವಿಸ್ಮಯವೆಂದರೆ ಇಲ್ಲಿ ಪ್ರದರ್ಶನಕ್ಕಿಡಲಾದ ಶಿವಲಿಂಗಗಳ ಮಾದರಿಯ ಹಲವು ಶಿವಲಿಂಗಗಳು ಇಟಲಿಯಾದ್ಯಂತ ಉತ್ಖನನದ ಸಮಯದಲ್ಲಿ ಕಂಡು ಬಂದಿವೆ.

ಇನ್ನು ಪುರಾತನ ನಾಗರಿಕತೆಗಳಲ್ಲಿ ಒಂದಾದ ಹರಪ್ಪ ಸಂಸ್ಕೃತಿಯ ಕಣ ಕಣದಲ್ಲೂ ಶಿವನ ಹೆಗ್ಗುರುತಿರುವುದು ಈಗಾಗಲೇ ವಿವಿಧ ಹಂತಗಳಲ್ಲಿ ಜಗಜ್ಜಾಹೀರಾಗಿದೆ. 1940ರಲ್ಲಿ ಪುರಾತತ್ತ÷್ವ ಶಾಸ್ತçಜ್ಞ ಎಂ.ಎಸ್.ವಾಟ್ಸ್ ಎಂಬುವವರು ಐದು ಸಾವಿರ ವರ್ಷಗಳಷ್ಟು ಹಳೆಯ ಮೂರು ಶಿವಲಿಂಗಗಳನ್ನು ಹರಪ್ಪದಲ್ಲಿ ಕಂಡು ಹಿಡಿದಿದ್ದರು.

ಇದೇ ರೀತಿ ಆರು ಸಾವಿರ ವರ್ಷದಷ್ಟು ಪುರಾತನ ಶಿವಲಿಂಗವೊ೦ದನ್ನು ದಕ್ಷಿಣ ಆಫ್ರಿಕಾದ ಸುದ್ವಾರ ಎನ್ನುವ ಗುಹೆಯಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಜೊತೆಗೆ ವಿಯೆಟ್ನಾಂ ಮತ್ತು ಇಂಡೋನೇಷಿಯದ ಹಲವು ಪ್ರದೇಶಗಳಲ್ಲಿ ಸಾವಿರಾರು ವರ್ಷಗಳಷ್ಟು ಪುರಾತನ ಶಿವಲಿಂಗಗಳು ದೊರಕಿವೆ. ಹೇಗೇ ನೋಡಿದರೂ ಎಲ್ಲ ಎಲ್ಲೆಗಳನ್ನು ಮೀರಿದ ಮಹಾಮಲ್ಲನ ಹೆಗ್ಗುರುತಿರುವ ‘ವಿಶ್ವರೂಪ’ ಗೋಚರಿಸುತ್ತದೆ.

ಇದನ್ನೂ ಓದಿ: BMTC Conductor recruitment 2024 : ಪಿಯುಸಿ ಪಾಸಾದವರಿಗೆ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ 

Rain forecast 2024 : ಈ ವರ್ಷ ಮಳೆ ಬೆಳೆ ಸಮೃದ್ಧ | ದೈವವಾಣಿ ಮತ್ತು ಹವಾಮಾನ ಮುನ್ಸೂಚನೆ ಏನು ಹೇಳುತ್ತದೆ?

WhatsApp Group Join Now
Telegram Group Join Now

Related Posts

error: Content is protected !!