ಸರಕಾರಿ ಯೋಜನೆಸಾಲ ಯೋಜನೆ

ರೈತರಿಗೆ ₹5 ಲಕ್ಷದ ವರೆಗೆ ಬಡ್ಡಿ ಇಲ್ಲದ ಬೆಳೆಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ… Zero Interest Crop Loan

WhatsApp Group Join Now
Telegram Group Join Now

Zero Interest Crop Loan : ರೈತರು 5 ಲಕ್ಷ ರೂಪಾಯಿ ಶೂನ್ಯ ಬಡ್ಡಿ ಬೆಳೆ ಸಾಲ ಪಡೆಯಲು ಏನು ಮಾಡಬೇಕು? ಯಾವೆಲ್ಲ ಬ್ಯಾಂಕುಗಳು ಸಾಲ ನೀಡಲಿವೆ? ಬೇಕಾಗುವ ದಾಖಲೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

ರೈತರಿಗೆ ಬ್ಯಾಂಕ್‌ಗಳು ಒದಗಿಸುವ ಸಾಲಗಳಲ್ಲಿ ಬೆಳೆ ಸಾಲ ಮುಖ್ಯವಾದದ್ದು. ಉಳಿದಂತೆ ಅವಧಿ ಸಾಲ, ನಗದು ಸಾಲ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸೇರಿದಂತೆ ವಿವಿಧ ರೀತಿಯ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ, ಗೋದಾಮು, ಫಾರ್ಮ್ ಹೌಸ್, ಬೇಲಿ, ಕೊಳವೆ ಬಾವಿ, ಡ್ರಿಪ್ ಇರಿಗೇಷನ್ ಪಂಪ್‌ಸೆಟ್ ಖರೀದಿ, ಜಮೀನು ಅಭಿವೃದ್ಧಿ ಮುಂತಾದ ಉದ್ದೇಶಕ್ಕೆ ಸಾಲ ಪಡೆಯಲು ಅವಕಾಶವಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ 15 ಸಾವಿರ ಮೌಲ್ಯದ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ PM Vishwakarma Scheme free tool kit

ಬಡ್ಡಿ ಇಲ್ಲದ ಸಾಲದ ಮಿತಿ ಹೆಚ್ಚಳ

ರೈತರು ಪಡೆಯುವ ಎಲ್ಲ ಸಾಲಗಳಿಗೆ ಕೃಷಿ ಜಮೀನು ಇಲ್ಲವೇ ಬೆಳೆ ಆಧಾರವಾಗಿಟ್ಟುಕೊಂಡು ಸಾಲ ನೀಡಲಾಗುತ್ತದೆ. ಅಲ್ಪಾವಧಿ ಸಾಲ 1 ವರ್ಷಕ್ಕೆ ಸೀಮಿತ. ಆದರೆ ಇದು ಶೂನ್ಯ ಬಡ್ಡಿ ಅಂದರೆ ಬಡ್ಡಿ ಇಲ್ಲದ ಸಾಲವಾಗಿದೆ. ಮಧ್ಯಮಾವಧಿ 5 ವರ್ಷ ಮತ್ತು ದೀರ್ಘಾವಧಿ ಸಾಲವನ್ನು 10 ವರ್ಷ ಅವಧಿಗೆ ನೀಡಲಾಗುತ್ತದೆ. ಈ ವರ್ಷದಿಂದ ರಾಜ್ಯ ಸರಕಾರ ಶೂನ್ಯ ಬಡ್ಡಿ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ.

ವಿಶೇಷವೆಂದರೆ ಸಹಕಾರಿ ಬ್ಯಾಂಕ್‌ಗಳಲ್ಲಿ (Cooperative Bank) ಶೂನ್ಯ ಬಡ್ಡಿ ಸಾಲ ಪಡೆಯುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 2022-23ರಲ್ಲಿ ರಾಜ್ಯಾದ್ಯಂತ ಸುಮಾರು 19 ಲಕ್ಷ ರೈತರು 15,000 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದಿದ್ದಾರೆ. ರಾಜ್ಯಾದ್ಯಂತ 23 ಲಕ್ಷಕ್ಕೂ ಅಧಿಕ ರೈತರು 2023-24ನೇ ಸಾಲಿನಲ್ಲಿ 19,000 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದಿದ್ದಾರೆ.

ಇದನ್ನೂ ಓದಿ: ಮೂರೇ ವರ್ಷಕ್ಕೆ ಭರ್ಜರಿ ಇಳುವರಿ ಕೊಡುವ ಗಿಡ್ಡ ತಳಿ ತೆಂಗು Coconut Farming

ಏನಿದು ಶೂನ್ಯ ಬಡ್ಡಿ ಸಾಲ?

ರಾಜ್ಯದ ರೈತರಿಗೆ ಸರಕಾರವು ಶೇಕಡಾ 3ರ ಬಡ್ಡಿ ದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬ೦ಧಿತ ಸಾಲಗಳನ್ನು ವಿತರಿಸುವ ಯೋಜನೆಯನ್ನು 2004ರಲ್ಲಿ ಅನುಷ್ಠಾನಗೊಳಿಸಿದೆ. 2012-13ನೇ ಸಾಲನಲ್ಲಿ 1 ಲಕ್ಷ ರೂಪಾಯಿ ವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿತ್ತು.

ಮಾರನೇ ವರ್ಷ ಅಂದರೆ 2013-14ನೇ ಸಾಲಿನಿಂದ 2 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲಮಿತಿ ವಿಸ್ತರಿಸಲಾಯಿತು. ಬಳಿಕ 2014-15ನೇ ಸಾಲಿನಿಂದ 2 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗುತ್ತಿದೆ. ಹಿಂದಿನ ಬಿಜೆಪಿ ಸರಕಾರ ಈ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಿತ್ತು. ಆದರೆ ಅದು ಅನುಷ್ಠಾನಗೊಳ್ಳುವ ಮೊದಲೇ ಚುನಾವಣೆ ಬಂದು ಹೊಸ ಸರಕಾರ ರಚನೆಯಾಯಿತು. ಈಗೀನ ಸರಕಾರ ಕೂಡ ಬೆಳೆಸಾಲ ಮಿತಿಯನ್ನು 3ರಿಂದ 5 ಲಕ್ಷಕ್ಕೆ ಹೆಚ್ಚಿಸಿದೆ.

Zero Interest Crop Loan

ಇದನ್ನೂ ಓದಿ: ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ Kisan Vikas Patra (KVP) Post Office Savings Scheme

ಯಾವೆಲ್ಲ ಬ್ಯಾಂಕುಗಳು ಸಾಲ ನೀಡುತ್ತವೆ?

ರೈತರ ಕೃಷಿ ಚಟುವಟಿಕೆಗೆ ನೆರವಾಗಲೆಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳು, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿ೦ದ (ಡಿಸಿಸಿ) ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ. ಕೃಷಿ ಚಚುವಟಿಕೆಗಷ್ಟೇ ಅಲ್ಲದೇ, ಕೃಷಿ ಉಪಕಸುಬುಗಳಾದ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ಹಾಗೂ ರೇಷ್ಮೆ ಶೆಡ್ ನಿರ್ಮಾಣಕ್ಕೂ 5 ಲಕ್ಷ ರೂಪಾಯಿ ವರೆಗೆ ಸಾಲ ಸಿಗಲಿದೆ.

ಸಾಲ ಪಡೆಯಲು ಯಾರೆಲ್ಲ ಅರ್ಹರು?

ಗಮನಾರ್ಹವೆಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿ೦ದ ಎಲ್ಲಾ ರೈತರಿಗೆ ಈ ಸಾಲ ಸಿಗುವುದಿಲ್ಲ. ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಮಾತ್ರ ಅವರಿಗೆ ಬ್ಯಾಂಕುಗಳಿ೦ದ ಸಾಲ ಸೌಲಭ್ಯ ಸಿಗಲಿದೆ.

  • ರೈತರು ವಾಸವಿರುವ ಸ್ಥಳದ ಸಂಘ ಅಥವಾ ಜಮೀನು ಹೊಂದಿರುವ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ರೈತರು ಬೇರೆ ಕಡೆ ಸಾಲ ಪಡೆದಿರಬಾರದು.
  • ಎರಡು ಸಂಘಗಳ ಕಾರ್ಯ ವ್ಯಾಪ್ತಿಯಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ ಅಥವಾ ಭೂಮಿ ಮತ್ತು ವಾಸಸ್ಥಳ ವಿವಿಧ ಸಂಘದ ವ್ಯಾಪ್ತಿಯಲ್ಲಿದ್ದರೆ ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಿರುತ್ತಾನೆಯೋ ಆ ಸಂಘದಲ್ಲಿ ಪಡೆದ ಸಾಲಗಳಿಗೆ ಮಾತ್ರ ಬಡ್ಡಿ ಸಹಾಯಧನ ಅನ್ವಯವಾಗುತ್ತದೆ.
  • ಒಂದು ವೇಳೆ ರೈತನು ವಾಸಿಸುತ್ತಿರುವ ಪ್ರದೇಶದಲ್ಲಿ ಸಂಘವು ಇಲ್ಲದಿದ್ದರೆ ಅಥವಾ ಸಾಲ ನೀಡಲು ಸಂಘವು ಸಶಕ್ತರಾಗಿಲ್ಲದಿದ್ದರೆ ಅಂತಹ ಸಂಘದಿ೦ದ ನಿರಪೇಕ್ಷಣಾ ಪತ್ರ ಪಡೆದು ಸಂಬ೦ಧಿಸಿದ ಡಿಸಿಸಿ ಬ್ಯಾಂಕುಗಳ ಶಾಖೆಗಳಲ್ಲಿ ಸಾಲ ಪಡೆಯಬಹುದು.
  • ರೈತ ನೆರೆ ರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದಲ್ಲಿ ಭೂಮಿ ಇದ್ದರೆ ಅಂತಹ ರೈತರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

ಇದನ್ನೂ ಓದಿ: ರೈತರ ಖಾತೆಗೆ ಮುಂಗಾರು ಬೆಳೆ ವಿಮೆ ಪರಿಹಾರ | ಕೃಷಿ ಸಚಿವರ ಸೂಚನೆ 2023 Khariff Crop Insurance Settlement

ಏನೆಲ್ಲ ದಾಖಲೆಗಳು ಬೇಕು?

ಬಹುಮುಖ್ಯವಾಗಿ ಡಿಸಿಸಿ ಬ್ಯಾಂಕಿನಿ೦ದ ಸಾಲ ಪಡೆಯಬೇಕಾದರೆ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರಬೇಕು.

ಪಹಣಿ, ಆಧಾರ್ ಕಾರ್ಡ್ ಇರಬೇಕು. ರೈತರು ಯಾವ ಬ್ಯಾಂಕಿನಿ೦ದ ಸಾಲ ಪಡೆಯಲಿಚ್ಚಿಸುತ್ತಾರೋ ಅಲ್ಲಿಂದ ಅರ್ಜಿ ಪಡೆದುಕೊಳ್ಳಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಜಾತಿ ಮತ್ತು ಆದಾಯ ಪತ್ರ ಹೊಂದಿರಬೇಕು.

ಇದನ್ನೂ ಓದಿ: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಣೆಗೆ ಕಡಿಮೆ ಬಡ್ಡಿ ₹3 ಲಕ್ಷ ಸಾಲ | ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಅಭಿಯಾನ Kisan Credit Card Loan

WhatsApp Group Join Now
Telegram Group Join Now

Related Posts

error: Content is protected !!