ಜನವರಿ 1ರಿಂದಲೇ ರೈತರಿಗೆ ಸಿಗಲಿದೆ ₹2 ಲಕ್ಷ ಅಡಮಾನ ರಹಿತ ಕೃಷಿ ಸಾಲ Increase in Mortgage free Agriculture Loans
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ರೈತರಿಗೆ ಅಡಮಾನ ರಹಿತವಾಗಿ ನೀಡಲಾಗುವ ಕೃಷಿ ಸಾಲದ ಮೊತ್ತವನ್ನು 1.6 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗೆ ಹೆಚ್ಚಿಸಿದ್ದು, ಇದೇ 2025ರ ಜನವರಿ 1ರಿಂದಲೇ ಅಡಮಾನ ರಹಿತ (mortgage free loans) ಹೆಚ್ಚುವರಿ ಸಾಲ ಸೌಲಭ್ಯ ಜಾರಿಗೆ ಬರಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.
ಆರ್ಬಿಐ ಹೊಸ ಗವರ್ನರ್ (New Governor of RBI) ಆಗಿ ಸಂಜಯ್ ಮಲ್ಹೋತ್ರಾ (Sanjay Malhotra) ಅವರು ಅಧಿಕಾರ ವಹಿಸಿಕೊಂಡ ನಾಲ್ಕು ದಿನಗಳಲ್ಲೇ ಈ ಮಹತ್ವದ ನಿರ್ಧಾರ ಹೊರ ಬಿದ್ದಿದ್ದು, ಇದರಿಂದ ದೇಶದ ಶೇ.86ರಷ್ಟು ಸಣ್ಣ ರೈತರಿಗೆ ಹೆಚ್ಚುವರಿ ಸಾಲ ಸೌಲಭ್ಯ ಲಭ್ಯವಾಗಲಿದೆ.
ಬ್ಯಾಂಕುಗಳಿಗೆ ಹೊಸ ಮಾರ್ಗಸೂಚಿ
ಈ ಹೊಸ ಮಾರ್ಗಸೂಚಿಯನ್ನು (new guideline) ತ್ವರಿತವಾಗಿ ಅಳವಡಿಸಿಕೊಂಡು ರೈತರಿಗೆ ಸುಲಭವಾಗಿ ಅಡಮಾನ ರಹಿತ ಸಾಲ ನೀಡಲು ಬ್ಯಾಂಕ್ಗಳಿಗೆ ಸೂಚಿಸಲಾಗುವುದು. ಹೆಚ್ಚು ರೈತರನ್ನು ತಲುಪುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
ಇದರೊಂದಿಗೆ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಬಳಕೆಯನ್ನೂ ಉತ್ತೇಜಿಸಲಾಗುತ್ತಿದೆ. ಆರ್ಬಿಐನ ಈ ತೀರ್ಮಾನದಿಂದ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಒಳಗೊಂಡ೦ತೆ ಶೇ.86ರಷ್ಟು ರೈತರಿಗೆ ನೆರವಾಗಲಿದೆ ಎಂದು ಕೃಷಿ ಸಚಿವಾಲಯ (Ministry of Agriculture & Farmers’ Welfare) ಹೇಳಿದೆ.
ಇದರಿಂದ ರೈತರಿಗೆ ಏನು ಅನುಕೂಲ?
ಹಣಕಾಸು ವಲಯ ವ್ಯಾಪ್ತಿಗೆ ಕೃಷಿ ಕ್ಷೇತ್ರದ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸುವುದು, ರೈತರಿಗೆ ಹೆಚ್ಚಿನ ಹೂಡಿಕೆ ಹಾಗೂ ಅವರ ಜೀವನ ಕ್ರಮವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಸರಕಾರದ ಉದ್ದೇಶ. ಸಾಲದ ಮಿತಿ ಹೆಚ್ಚಳದಿಂದಾಗಿ ಕೃಷಿ ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.
ಈ ಹೊಸ ಸೌಲಭ್ಯದಿಂದಾಗಿ ರೈತರಿಗೆ ಇನ್ಮುಂದೆ ಯಾವುದೇ ಅಡಮಾನ ಇಲ್ಲದೇ ಅತೀ ಸುಲಭವಾಗಿ 2 ಲಕ್ಷ ರೂಪಾಯಿ ವರೆಗೂ ಕೃಷಿ ಸಾಲ ಸಿಗಲಿದೆ. ಸಾಲ ಪಡೆಯಲು ರೈತರು ಮನೆ, ಜಮೀನು ಆಡ ಇಡುವ ಅಗತ್ಯ ಇರುವುದಿಲ್ಲ ದೇಶದ ಶೇ.86 ಸಣ್ಣ ರೈತರಿಗೆ ಇದರಿಂದ ಪ್ರಯೋಜನ ಸಿಗಲಿದೆ.
3 Comments