Punjab and Sind Bank Specialist Officer Recruitment 2024 : ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾಗಿರುವ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (Punjab and Sind Bank) ಪ್ರಸ್ತುತ ದೇಶದ ವಿವಿಧೆಡೆ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ (Specialist Officer) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಸದರಿ ಬ್ಯಾಂಕ್ನಲ್ಲಿ ಉದ್ಯೋಗ ಹೊಂದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆಫೀಸರ್, ಮ್ಯಾನೇಜರ್, ಹಿರಿಯ ವ್ಯವಸ್ಥಾಪಕ, ಮುಖ್ಯ ವ್ಯವಸ್ಥಾಪಕರು ಪದನಾಮದ ಒಟ್ಟು 213 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ತಮಗೆ ಅನ್ವಯವಾಗುವ ಶುಲ್ಕವನ್ನು ಪಾವತಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ
- ಆಫೀಸರ್ : 56
- ಮ್ಯಾನೇಜರ್ : 117
- ಹಿರಿಯ ವ್ಯವಸ್ಥಾಪಕ : 33
- ಮುಖ್ಯ ವ್ಯವಸ್ಥಾಪಕರು : 07
- ಒಟ್ಟು ಹುದ್ದೆಗಳು : 213
ವಿದ್ಯಾರ್ಹತೆ ಏನು?
ಹುದ್ದೆಗಳಿಗೆ ಅನುಗುಣವಾಗಿ ಬಿಇ ಅಥವಾ ಬಿಟೆಕ್, ಸಿಎ, ಐಸಿಡಬ್ಲ್ಯುಎ, ಚಿಎಫ್ಎ, ಎಫ್ಆರ್ಎಂ, ಸಿಎಐಐಬಿ, ಎಂಬಿಎ, ಪಿಜಿಡಿಬಿಎ, ಪಿಜಿಡಿಬಿಎಂ, ಪಿಜಿಡಿಎಂ, ಎಂಎಸ್ಸಿ, ಎಂಎಸ್, ಸಿಎಸ್, ಎಂಸಿಎ, ಎಲ್ಎಲ್ಬಿ, ಎಂಟೆಕ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವೇತನ ಎಷ್ಟು?
- ಆಫೀಸರ್ ಹುದ್ದೆಗೆ : 48,480 – 85,920 ರೂಪಾಯಿ
- ಮ್ಯಾನೇಜರ್ ಹುದ್ದೆಗೆ : 64,820 – 93,960 ರೂಪಾಯಿ
- ಹಿರಿಯ ವ್ಯವಸ್ಥಾಪಕ ಹುದ್ದೆಗೆ : 85,920 – 10,5280 ರೂಪಾಯಿ
- ಮುಖ್ಯ ವ್ಯವಸ್ಥಾಪಕ ಹುದ್ದೆಗೆ 1,02,300 – 1,20,940 ರೂಪಾಯಿ
ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ ವಿವರ
ಎಸ್ಸಿ/ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ., ಸಾಮಾನ್ಯ, ಒಬಿಸಿ, ಹಾಗೂ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಗೇಟ್ನಲ್ಲಿ ಪಡೆದ ಅಂಕಗಳನ್ನು ಅಧರಿಸಿ ಅವರನ್ನು ಹುದ್ದೆಗೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಹುದ್ದೆಗೆ ಆಯ್ದು ಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಕೇಂದ್ರವನ್ನು ನಿಗದಿಪಡಿಸಲಾಗಿದೆ.
ವಯೋಮಿತಿ ವಿವರ
ಆಫೀಸರ್ ಹುದ್ದೆಗೆ 20-32 ವರ್ಷ, ಮ್ಯಾನೇಜರ್ ಹುದ್ದೆಗೆ 25-35 ವರ್ಷ, ಹಿರಿಯ ವ್ಯವಸ್ಥಾಪಕರು ಹುದ್ದೆಗೆ 25-38 ವರ್ಷ ಹಾಗೂ ಮುಖ್ಯ ವ್ಯವಸ್ಥಾಪಕರು ಹುದ್ದೆಗೆ 28-40 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಇನ್ನು ಒಬಿಸಿ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಪಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಸಲ್ಲಿಕೆ ವಿವರ
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
31-08-2024 - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
15-09-2024
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ punjabandsindbank.co.inಗೆ ಭೇಟಿ ನೀಡುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅಧಿಸೂಚನೆ : Download