Canara Bank Dairy and sheep free farming Training : ನೀವು ನಿರುದ್ಯೋಗಿಗಳೇ? ಸ್ವ-ಉದ್ಯೋಗವನ್ನು ಮಾಡಲು ಇಚ್ಚಿಸುತ್ತಿದ್ದೀರಾ? ಹೌದಾದಲ್ಲಿ ದಾವಣಗೆರೆಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ (Canara Bank Rural Self Employment Training Institute Davangere – RSETI) ಉದ್ಯಮಶೀಲರಾಗಲು ಬೇಕಾದ ಸಲಹೆ, ಸಹಕಾರ ಉಚಿತವಾಗಿ ಸಿಗಲಿದೆ. ಸದರಿ ತರಬೇತಿ ಸಂಸ್ಥೆಯು ಸರ್ಕಾರದ ವಿವಿಧ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಹಕಾರಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ.
ವಸತಿ, ಊಟೋಪಚಾರ ಸಹಿತ ಉಚಿತ ತರಬೇತಿ
2009ರಿಂದ ವಿವಿಧ ತರಬೇತಿಗಳನ್ನು ಆಯೋಜಿಸುತ್ತ ಬರುತ್ತಿರುವ ಈ ಸಂಸ್ಥೆಯು 17,918 ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ. ಇಲ್ಲಿ ತರಬೇತಿ ಪಡೆದ 14,485 ಅಭ್ಯರ್ಥಿಗಳು ಸ್ವ-ಉದ್ಯೋಗಿಗಳಾಗಿದ್ದಾರೆ.
ತರಬೇತಿ ನಂತರ ಸಾಲ ಸೌಲಭ್ಯಕ್ಕೆ ಬ್ಯಾಂಕುಗಳ ಸಂಪರ್ಕ ಕಲ್ಪಿಸುವುದರ ಜೊತೆಗೆ ಸ್ವ-ಉದ್ಯೋಗಿಗಳಾಗಲು ಸತತ ಸಲಹೆ, ಸಹಕಾರ ಕಲ್ಪಿಸಲಾಗುತ್ತದೆ.ಇದಕ್ಕಾಗಿ ಆಸಕ್ತ ಅಭ್ಯರ್ಥಿಗಳಿಗೆ ವಸತಿ, ಊಟೋಪಚಾರ ಸಹಿತ ಸಂಪೂರ್ಣ ಉಚಿತ ತರಬೇತಿ ನೀಡುತ್ತಿದೆ.
ಇದನ್ನೂ ಓದಿ: ಮೂರೇ ವರ್ಷಕ್ಕೆ ಭರ್ಜರಿ ಇಳುವರಿ ಕೊಡುವ ಗಿಡ್ಡ ತಳಿ ತೆಂಗು Malaysian Green Dwarf High Yielding Coconut
ಯಾವೆಲ್ಲ ತರಬೇತಿ ಸಿಗಲಿದೆ?
- ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತರಬೇತಿ (10 ದಿನಗಳು)
- ಕುರಿ ಸಾಕಾಣಿಕೆ (10 ದಿನಗಳು)
- ಮಹಿಳಾ ಹೊಲಿಗೆ ತರಬೇತಿ (30 ದಿನಗಳು)
- ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿ (30 ದಿನಗಳು)
- ವಿದ್ಯುತ್ ಪಂಪ್ಸೆಟ್ ಮತ್ತು ಮೋಟಾರ್ ರಿವೈಂಡಿಂಗ್ (30 ದಿನಗಳು)
- ಬೇಸಿಕ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ (30 ದಿನಗಳು)
- ಮೊಬೈಲ್ ಹ್ಯಾಂಡ್ಸೆಟ್ ದುರಸ್ತಿ (30 ದಿನಗಳು)
- ಕಂಪ್ಯೂಟರ್ ಡಿ.ಟಿ.ಪಿ (45 ದಿನಗಳು)
- ಕಂಪ್ಯೂಟರ್ ಟ್ಯಾಲಿ (30 ದಿನಗಳು)
- ಅಗರಬತ್ತಿ ತಯಾರಿಕೆ ತರಬೇತಿ (10 ದಿನಗಳು)
- ವಿಶೇಷ ಚೇತನರಿಗೆ ಉದ್ಯಮಶೀಲತಾ ತರಬೇತಿ (10 ದಿನಗಳು)
- ಸಣ್ಣ ಉದ್ದಿಮೆದಾರರಿಗೆ ಉದ್ಯಮಶೀಲತಾ ತರಬೇತಿ (13 ದಿನಗಳು)
- ಮೇಣದಬತ್ತಿ ತಯಾರಿಕೆ ತರಬೇತಿ (10 ದಿನಗಳು)
- ಅಣಬೆ ತರಬೇತಿ (10 ದಿನಗಳು)
- ಸ್ವ-ಉದ್ಯೋಗ ತರಬೇತಿ (6 ದಿನಗಳು)
- ಸಿಸಿ ಟಿವಿ ಕ್ಯಾಮರಾ, ಸೆಕ್ಯೂರಿಟಿ ಅಲಾರ್ಮ್ ಮತ್ತು
- ಸ್ಮೋಕ್ ಡಿಟೆಕ್ಟರ್ ಸ್ಥಾಪನೆ ಮತ್ತು ಸೇವೆ ತರಬೇತಿ (13 ದಿನಗಳು)
- ಕಾಸ್ಟೋಮ್, ಜ್ಯೂಯಲರಿ ಉದ್ಯಮಿ ತರಬೇತಿ (13 ದಿನಗಳು)
- ಪೇಪರ್ ಕವರ್, ಎನ್ವಲಪ್ ಮತ್ತು ಫೈಲ್ ಮೇಕಿಂಗ್ ತರಬೇತಿ (10 ದಿನಗಳು)
ಅರ್ಹತೆಗಳೇನಿರಬೇಕು?
ದಾವಣಗೆರೆಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಉಚಿತ ತರಬೇತಿ ಪಡೆಯಲು ಅಭ್ಯರ್ಥಿಯು ನಿರುದ್ಯೋಗಿಯಾಗಿರಬೇಕು. 18 ರಿಂದ 45 ವರ್ಷ ವಯಸ್ಸಾಗಿರಬೇಕು.
ಗ್ರಾಮೀಣ, ನಗರ, ಪಟ್ಟಣದ ಎಲ್ಲ ಅಭ್ಯರ್ಥಿಗಳಿಗೂ ತರಬೇತಿ ಪಡೆಯಲು ಅವಕಾಶವಿದೆ. ಸ್ವ-ಇಚ್ಛೆಯಿಂದ ಕಲಿಯಲು ಆಸಕ್ತಿ ಇರುವವರು, ಸ್ವಂತ ಉದ್ಯೋಗ ಮಾಡಲು ಇಚ್ಛೆಯುಳ್ಳವರು, ಬಿ.ಪಿ.ಎಲ್ ಕಾರ್ಡ್ ಇದ್ದವರಿಗೆ ಮೊದಲ ಆದ್ಯತೆ ಇದೆ.
ತರಬೇತಿಗೆ ಆಯ್ಕೆಯಾದವರು ನಾಲ್ಕು ಪಾಸ್ಪೋರ್ಟ್ ಸೈಜ್ ಫೋಟೋ, ಪಡಿತರ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ ನಕಲು ಪ್ರತಿ ತಮಗೆ ಬೇಕಾಗುವ ಔಷಧಿ / ದೈನಂದಿನ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು.
ಸಂಸ್ಥೆಯ ವಿಳಾಸ ಮತ್ತು ಬಸ್ ಮಾರ್ಗದ ಮಾಹಿತಿ
ತರಬೇತಿ ಸಂಸ್ಥೆ ವಿಳಾಸ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ರೇಷ್ಮೆ ತರಬೇತಿ ಕೇಂದ್ರದ ಆವರಣ, ಹಳೆತೋಳಹುಣಸೆ, ದಾವಣಗೆರೆ-577002
ದಾವಣಗೆರೆಯ ಹಳೇ ಬಸ್ ಸ್ಟಾಪ್ ಮತ್ತು ಹೊಸ ಬಸ್ ಸ್ಟಾಪ್’ನಿಂದ ಯುನಿವರ್ಸಿಟಿಗೆ ಹೋಗುವ ಬಸ್ಸುಗಳು (ಬಸ್ ನಂ. 101) ಹಾಗೂ ಬಾಡ ಕ್ರಾಸ್, ಸಂತೆಬೆನ್ನೂರಿಗೆ ಹೋಗುವ ಬಸ್ಗಳ ಮೂಲಕ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ತಲುಪಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 70199 80484, 79751 39332, 99641 11314, 94833 86143, 95383 95817, 94819 77076
ಇದನ್ನೂ ಓದಿ: ಇನ್ಮುಂದೆ ಈ ರೈತರ ಭೂಮಿ ಮಾರುವಂತಿಲ್ಲ, ಯಾರೂ ಖರೀದಿಸುವಂತೆಯೂ ಇಲ್ಲ | ಬಂತು ಹೊಸ ಕಾಯ್ದೆ PTCL Act Amendment