JobsNews

Central Bank of India Recruitment 2025 : ಪದವಿ ಪಾಸಾದವರಿಗೆ ಸೆಂಟ್ರಲ್ ಬ್ಯಾಂಕ್’ನಲ್ಲಿ ಉದ್ಯೋಗ

266 ವಲಯ ಆಧಾರಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ...

ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India – CBI) 266 ವಲಯ ಆಧಾರಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಅಸಕ್ತ ಉದ್ಯೋಗಾಕಾಂಕ್ಷಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now

ಅಹಮದಾಬಾದ್, ಚನ್ನೈ, ಗುವಾಹಟಿ, ಹೈದರಾಬಾದ್ ವಲಯದ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದ್ದು; ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕಾಗಿ 42 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಅಭ್ಯರ್ಥಿಗಳು ಯಾವುದಾದರು ಒಂದು ವಲಯಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅಭ್ಯರ್ಥಿಗಳು ಆಯಾ ರಾಜ್ಯದ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರಬೇಕು. ಭಾಷಾ ಪ್ರಾವೀಣ್ಯತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. 10, 12ನೇ ತರಗತಿಯಲ್ಲಿ ಆಯಾ ರಾಜ್ಯದ ಭಾಷೆಯಲ್ಲಿ ವ್ಯಾಸಂಗ ಮಾಡಿದ್ದರೆ ಪರೀಕ್ಷೆಯಿಂದ ವಿನಾಯ್ತಿ ಇರಲಿದೆ.

ಇದನ್ನೂ ಓದಿ: LIC Kanyadan Policy : ಈ ಯೋಜನೆಯಡಿ ಸಿಗಲಿದೆ ಹೆಣ್ಮಕ್ಕಳ ಮದುವೆಗೆ 31 ಲಕ್ಷ ರೂಪಾಯಿ 

ಶೈಕ್ಷಣಿಕ ಅರ್ಹತೆ

ವಲಯ ಆಧಾರಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ವಿಷಯದಲ್ಲಿ ಪದವಿ ಅಥವಾ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ ಅಥವಾ ತತ್ಸಮಾನ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.

ವೈದ್ಯಕೀಯ, ಇಂಜನೀಯರಿ೦ಗ್, ಚಾರ್ಟಡ್ ಅಕೌಂಟೆ೦ಟ್, ಕಾಸ್ಟ್ ಅಕೌಂಟೆ೦ಟ್’ನ೦ತಹ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ. ಆಫೀಸರ್/ಸೂಪರ್’ವೈಸರ್ ಕೇಡರ್ ಆಗಿ ಒಂದು ವರ್ಷ ಅಥವಾ ಕ್ಲರಿಕಲ್ ಕೇಡರ್ ಆಗಿ ಮೂರು ವರ್ಷ ಕೆಲಸದ ಅನುಭವ ಹೊಂದಿರಬೇಕು.

ಇದನ್ನೂ ಓದಿ: UCO Bank Recruitment 2025 : ಯುಕೋ ಬ್ಯಾಂಕ್ ನೇಮಕಾತಿ

ವಯೋಮಿತಿ ವಿವರ

ಸೆಂಟ್ರಲ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2024ರ ನವೆಂಬರ್ 30ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ರಿಂದ ಗರಿಷ್ಠ 32 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ವೇತನ ಶ್ರೇಣಿ ಎಷ್ಟು?

ಸೆಂಟ್ರಲ್ ಬ್ಯಾಂಕ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 48,480 ರೂ. ರಿಂದ 85,920 ರೂ. ವರೆಗೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಕೇಂದ್ರ

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಲಿಖಿತ ಪರೀಕ್ಷೆ ಇಂಗ್ಲಿಷ್ ಭಾಷೆ 20 ಅಂಕಗಳು, ಬ್ಯಾಂಕಿ೦ಗ್ ನಾಲೆಜ್ 60 ಅಂಕಗಳು, ಕಂಪ್ಯೂಟರ್ ನಾಲೆಜ್ 20 ಅಂಕಗಳು, ಪ್ರಸೆಂಟ್ ಎಕನಾಮಿಕ್ ಸಿನಾರಿಯೋ ಆ್ಯಂಡ್ ಜನರಲ್ ಅವೇರ್‌ನೆಸ್ 20 ಅಂಕಗಳು, ಒಟ್ಟು 120 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.

2025ರ ಮಾರ್ಚ್’ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಕರ್ನಾಟಕದಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೆಂಗಳೂರು ಪರೀಕ್ಷಾ ಕೇಂದ್ರವಾಗಿರಲಿದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡರಿಂದ ಮೂರು ವರ್ಷ ಪ್ರೊಬೇಷನರಿ ಅವಧಿ ಇರಲಿದೆ.

ಇದನ್ನೂ ಓದಿ: E-Swathu : ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ?

ಅರ್ಜಿ ಶುಲ್ಕ ವೆಷ್ಟು?

ಎಸ್ಸಿ/ಎಸ್ಟಿ, ಮಹಿಳೆ, ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ., ಇತರ ಎಲ್ಲ ವರ್ಗದ ಅಭ್ಯರ್ಥಿಗಳು 850 ರೂ. ಅರ್ಜಿ ಶುಲ್ಕವನ್ನು ವಿಧಿಸಿದ್ದು, ಆನ್‌ಲೈನ್ ಮೂಲಕ ಫೆಬ್ರವರಿ 9ರೊಳಗೆ ಶುಲ್ಕ ಪಾವತಿಸಬೇಕು. ಆಸಕ್ತ ಅಭ್ಯರ್ಥಿಗಳು centralbankofindia.co.inಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21-01-2025
  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 09-02-2025

ಅಧಿಸೂಚನೆ: Download

RRB Recruitment 2025 : ಹುಬ್ಬಳ್ಳಿ ರೈಲ್ವೇ ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!