Govt SchemesNews

Crop Insurance Karnataka Status Check : ಮೊಬೈಲ್‌ನಲ್ಲೇ ಚೆಕ್ ಮಾಡಿ ಬೆಳೆವಿಮೆ ಪರಿಹಾರ | ಇಲ್ಲಿದೆ ಸರಳ ವಿಧಾನ

ಹವಾಮಾನ ವೈಪರೀತ್ಯದ ಕಾರಣದಿಂದ ಪದೇ ಪದೆ ನಷ್ಟಕ್ಕೆ ಒಳಗಾಗುವ ರೈತರನ್ನು ಸಂಕಷ್ಟದಿ೦ದ ಪಾರು ಮಾಡುವ ಸದುದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು (Pradhan Mantri Fasal Bima Yojana) ಜಾರಿಗೆ ತರಲಾಗಿದೆ. 2016ರ ಜನವರಿ 13 ರಂದು ಸದರಿ ಯೋಜನೆಯನ್ನು ಘೋಷಿಸಲಾಗಿದೆ. ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯ ನಿರ್ವಹಣೆಯಲ್ಲಿರುವ ಈ ಯೋಜನೆಯು ಕರ್ನಾಟಕ ಸೇರಿದಂತೆ ಭಾರತದ ಎಲ್ಲ ರಾಜ್ಯಗಳಲ್ಲೂ ಜಾರಿಯಲ್ಲಿದೆ.

WhatsApp Group Join Now
Telegram Group Join Now

ಬೆಳೆನಷ್ಟಕ್ಕೆ ಪರಿಹಾರ Crop insurance compensation

ಸರಕಾರ ನೇರ ಸಹಭಾಗಿತ್ವದಲ್ಲಿ ಕಡಿಮೆ ಮೊತ್ತದಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೆಳೆ ವಿಮೆ ಮಾಡಿಸಿದ ನಂತರ ನೈಸರ್ಗಿಕ ವಿಪತ್ತಿನಿಂದಾದ ಬೆಳೆ ನಷ್ಟಕ್ಕೆ ರೈತರು ವಿಮಾ ಹಕ್ಕು ಪಡೆಯಬಹುದು.

ಪ್ರಾಕೃತಿಕ ವಿಕೋಪಗಳಾದ ಬರ ಪರಿಸ್ಥಿತಿ, ಬಿರುಗಾಳಿ, ಬೆಂಕಿ ಅವಘಡದಿಂದಾದ ಹಾನಿ, ನೀರಿನಿಂದ ಉಂಟಾಗುವ ಹಾನಿ, ಪ್ರವಾಹ, ಅಕಾಲಿಕ ಮಳೆ, ಆಲಿಕಲ್ಲು ಮಳೆ, ಭೂ ಕುಸಿತ, ಕೀಟಬಾಧೆ ಇವುಗಳಿಂದ ಸಂಭವಿಸುವ ನಷ್ಟಕ್ಕೆ ರೈತರು ಪರಿಹಾರ ಪಡೆಯಬಹುದು.

ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | ₹8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

ಬೆಳೆ ಸಮೀಕ್ಷೆ

ವಿಮೆ ಮಾಡಿಸಿದ ರೈತರು ಬೆಳೆ ನಷ್ಟವಾದ ಮಾಹಿತಿಯನ್ನು ಬೆಳೆ ಸಮೀಕ್ಷೆ ಆಪ್‌ನಲ್ಲಿ ಅಪ್ಲೋಡ್ ಮಾಡಬೇಕು. ಒಂದು ವೇಳೆ ಮೊಬೈಲ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡುವುದು ಗೊತ್ತಿರದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಿಸಬಹುದು. ಬಳಿಕ ಪ್ರಕೃತಿ ವಿಕೋಪದಿಂದ ಬೆಳೆ ಹಾಳಾದಾಗ ರೈತರು ಯಾವ ವಿಮಾ ಕಂಪನಿಗಳಿಗೆ ಬೆಳೆ ವಿಮೆ ಮಾಡಿಸಿದ್ದಾರೋ ಆ ವಿಮಾ ಕಂಪನಿಗೆ 72 ಗಂಟೆಯೊಳಗೆ ಕರೆ ಮಾಡಬೇಕು.

ಆನಂತರ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾಳಾದ ಕುರಿತು ಪರಿಶೀಲನೆ ನಡೆಸುತ್ತಾರೆ. ನಷ್ಟವಾದ ಬೆಳೆಯ ಪ್ರಮಾಣವನ್ನು ಪರಿಶೀಲಿಸಿ ರೈತರಿಗೆ ಪರಿಹಾರ ನೀಡಲು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ. ಮೇಲಧಿಕಾರಿಗಳು ಕೆಲವು ದಿನಗಳ ನಂತರ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ ಮಾಡುತ್ತಾರೆ.

ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ

ಬೆಳೆವಿಮೆ ಪರಿಹಾರ ಚೆಕ್ ಮಾಡುವ ವಿಧಾನ

ರೈತರು ಈ ಕೆಳಗಿನ ಸರಳ ವಿಧಾನ ಅನುಸರಿಸುವ ಮೂಲಕ ತಮ್ಮ ಮೊಬೈಲ್‌ನಲ್ಲಿಯೇ ಬೆಳೆವಿಮೆ ಪರಿಹಾರದ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು. ರೈತರು ಬೆಳೆ ವಿಮೆ ಪ್ರೀಮಿಯಂ ಅನ್ನು ಯಾವ ಕಂಪನಿಗೆ ಪಾವತಿಸಲಾಗಿದೆ ಎಂಬುವುದನ್ನು ಹಾಗೂ ಬೆಳೆವಿಮೆ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👇

ನಂತರ ವರ್ಷ ಆಯ್ಕೆ ಮಾಡಿ, ಬಳಿಕ Kharif, Rabi, Summer ಮೂರು ಋತುಗಳ ಪೈಕಿ Kharif ಸೆಲೆಕ್ಟ್ ಮಾಡಿ Go/ಮುಂದೆ ಕ್ಲಿಕ್ ಮಾಡಿ. ಆಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ Notices, Farmers, Related Sites, Schemes Related Documents ಎಂಬ ನಾಲ್ಕು ಬಾಕ್ಸ್’ಗಳು ಕಾಣಿಸುತ್ತವೆ. ಅವುಗಳ ಪೈಕಿ ಎರಡನೇ Farmers ಬಾಕ್ಸ್’ನಲ್ಲಿ

»Premium Calculator
»Crop You can Insure
»Check Status
»Know Your Insurance Co.
»Find Gram Panchayat
»Crop Insurance Detail On Survey No.
»View Cut Off Dates

ಆಯ್ಕೆಗಳಿದ್ದು; ಅವುಗಳಲ್ಲಿ ಮೂರನೇ ಆಯ್ಕೆ »Check Status ಮೇಲೆ ಕ್ಲಿಕ್ ಮಾಡಿ, ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.

ಅಲ್ಲಿ Check Status By Type ಮುಂದೆ Proposal, Mobile No ಹಾಗೂ Aadhaar ಮೂರು ಆಯ್ಕೆಗಳಿದ್ದು; ಅದರಲ್ಲಿ Proposal ಅಥವಾ Mobile No ಸೆಲೆಕ್ಟ್ ಮಾಡಿ, ನಂತರ ವಿಮೆ ಕಟ್ಟಿದ Acknowledgment number ಅಥವಾ Mobile number ಹಾಕಿ Captcha type ಮಾಡಿ Search ಮೇಲೆ ಕ್ಲಿಕ್ ಮಾಡಿದರೆ ವಿಮೆ ಹಣ ಜಮಾ ಆದ ಬಗ್ಗೆ ಸಂಪೂರ್ಣ ವಿವರ ಸಿಗುತ್ತದೆ…

ಬೆಳೆ ವಿಮೆ ಮಾಹಿತಿ ಪಡೆಯಲು ಹಾಗೂ ತಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 1800180 1551 ಉಚಿತ ಸಹಾವಾಣಿ ನಂಬರಿಗೆ ಕರೆ ಮಾಡಬಹುದು.

ಮನೆಗೆ ಸೋಲಾರ್ ಕರೆಂಟ್ ಪಡೆಯಲು ₹78,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Articles

Leave a Reply

Your email address will not be published. Required fields are marked *

Back to top button
error: Content is protected !!