ಕೃಷಿಸರಕಾರಿ ಯೋಜನೆ

Drought Relief Farmers Account : ರೈತರ ಖಾತೆಗೆ ಬರ ಪರಿಹಾರ ಹಣ ಜಮಾ | ನಿಮಗೆ ಹಣ ಬಂತಾ? ಚೆಕ್ ಮಾಡಿ

WhatsApp Group Join Now
Telegram Group Join Now

Drought Relief Farmers Account : ಈಚೆಗೆ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಕೇಂದ್ರ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ಸಂಪೂರ್ಣ ಫಲಾನುಭವಿ ರೈತರ ಖಾತೆಗೆ ಹಂತ ಹಂತವಾಗಿ ಜಮಾ ಮಾಡಲಾಗುತ್ತಿದೆ.

48.19 ಲಕ್ಷ ಹೆಕ್ಟೇರ್‌ನಲ್ಲಿ ನಷ್ಟ

ಕರ್ನಾಟಕದಲ್ಲಿ ಒಟ್ಟು 223 ತಾಲ್ಲೂಕುಗಳು ಬರಪೀಡಿತವೆಂದು ಘೋಷಿಸಲ್ಪಟ್ಟಿದ್ದು; ಇದರಲ್ಲಿ 196 ತಾಲ್ಲೂಕುಗಳು ತೀವ್ರ ಬರ ಎದುರಿಸುತ್ತಿವೆ. ಒಟ್ಟಾರೆ ಮಳೆ ಕೊರತೆಯಿಂದಾಗಿ ರಾಜ್ಯಾದ್ಯಂತ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ.

ಸಣ್ಣ ಮತ್ತು ಅತಿ ಸಣ್ಣ ರೈತರೇ ಹೆಚ್ಚಿನ ಪ್ರಮಾಣದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ’ಯಿಂದ (NDRF) ಶೀಘ್ರವೇ 18,177.44 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.

ಇದನ್ನೂ ಓದಿ: Drought Relief karnataka : ರೈತರ ಖಾತೆಗೆ ಕೇಂದ್ರ ಬರ ಪರಿಹಾರ ಜಮಾ

ಸಂಪೂರ್ಣ ಹಣ ರೈತರ ಖಾತೆಗೆ ಜಮಾ

ರಾಜ್ಯ ಸರ್ಕಾರ (Karnataka Govt) ಒಟ್ಟು 18,172 ಕೋಟಿ ರೂಪಾಯಿ ಪರಿಹಾರ ಕೇಳಿತ್ತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಕೇವಲ 3,454 ಕೋಟಿ ರೂಪಾಯಿ ಮಾತ್ರ ಪರಿಹಾರ ವಿತರಣೆ ಮಾಡಿದೆ. ಅಂದರೆ, ಕೇಳಿದ್ದರಲ್ಲಿ ಶೇ.19ರಷ್ಟು ಹಣವನ್ನು ಮಾತ್ರ ಕೊಟ್ಟಿದೆ.

ರಾಜ್ಯ ಸರಕಾರವು ಈಗಾಗಲೇ ಒಟ್ಟು 33.60 ಲಕ್ಷ ಮಂದಿ ರೈತರಿಗೆ ಮೊದಲ ಕಂತಿನ ಬರ ಪರಿಹಾರವನ್ನು ನೀಡಿದೆ. ಈಗ ಕೇಂದ್ರದಿ೦ದ ಬಂದಿರುವ ಹಣದಲ್ಲಿ ಅವರಿಗೆ ನೀಡಬೇಕಿರುವ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಹಾಕಲಾಗುತ್ತಿದೆ.

ಈಗ ಕೇಂದ್ರದಿ೦ದ ಬಂದಿರುವ ಸಂಪೂರ್ಣ ಹಣವನ್ನು ರೈತರಿಗೆ ಕೊಡಲಾಗುತ್ತಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇದಾವುದಕ್ಕೂ ಇದರಲ್ಲಿ ರಾಜ್ಯ ಸರಕರ ಬಳಸಿಕೊಂಡಿಲ್ಲ ಎನ್ನಲಾಗುತ್ತಿದೆ.

ಯಾವ ರೈತರಿಗೆ ಎಷ್ಟು ಪರಿಹಾರ?

ಗರಿಷ್ಠ ಎರಡು ಹೆಕ್ಟೇರ್ ಅಂದರೆ ತಲಾ ಐದು ಎಕರೆಗೆ ಮಾತ್ರ ಬರ ಪರಿಹಾರ ನೀಡಲಾಗುತ್ತದೆ. ಇದರಲ್ಲಿ ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ಒಂದೊAದು ರೀತಿಯ ಪರಿಹಾರ ಮೊತ್ತ ನಿಗದಿ ಮಾಡಲಾಗಿದ್ದು; ಹೆಕ್ಟೇರ್‌ವಾರು ಮೊತ್ತದ ವಿವರ ಈ ಕೆಳಗಿನಂತಿದೆ:

  • ಮಳೆಯಾಶ್ರಿತ ಬೆಳೆ : ಹೆಕ್ಟೇರ್‌ಗೆ 8,500 ರೂಪಾಯಿಯಂತೆ ಎರಡು ಹೆಕ್ಟೇರ್‌ಗೆ 17,000 ರೂಪಾಯಿ
  • ನೀರಾವರಿ ಬೆಳೆ : ಹೆಕ್ಟೇರ್‌ಗೆ 17,000 ರೂಪಾಯಿಯಂತೆ ಎರಡು ಹೆಕ್ಟೇರ್‌ಗೆ 34,000 ರೂಪಾಯಿ
  • ಬಹುವಾರ್ಷಿಕ ಬೆಳೆ : ತೋಟಗಾರಿಕೆ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 22,500 ರೂಪಾಯಿಯಂತೆ ಎರಡು ಹೆಕ್ಟೇರ್‌ಗೆ 45,000 ರೂಪಾಯಿ

ನಿಮ್ಮ ಪರಿಹಾರ ಹಣ ಚೆಕ್ ಮಾಡಿ

ಈಗಾಗಲೇ ಬಹುತೇಕ ರೈತರಿಗೆ ಬರ ಪರಿಹಾರ ಹಣ ಜಮಾ ಆದ ಬಗ್ಗೆ ರೈತರು ಹೊಂದಿರುವ ಬ್ಯಾಂಕ್‌ನಿ೦ದ ನೇರವಾಗಿ ಮೊಬೈಲ್ SMS ಬಂದಿರುತ್ತದೆ. ಒಂದು ವೇಳೆ SMS ಬಾರದೇ ಇದ್ದರೆ ರಾಜ್ಯ ಸರಕಾರದ ‘ಪರಿಹಾರ ಹಣ ಸಂದಾಯ ವರದಿ’ ತಂತ್ರಾ೦ಶದ ಮೂಲಕ ಫಲಾನುಭವಿ ರೈತರು ತಮಗೆ ಸಂದಾಯವಾಗಿರುವ ಪರಿಹಾರ ಹಣದ ವಿವರ ತಿಳಿಯಬಹುದಾಗಿದೆ.

ನಾವು ಕೆಳಗೆ ನೀಡಿರುವ ‘ಪರಿಹಾರ ಹಣ ಸಂದಾಯ ವರದಿ’ ತಂತ್ರಾ೦ಶದ ಲಿಂಕ್ ಬಳಸಿ ರೈತರು ತಮ್ಮ ಆಧಾರ್ ನಂಬರ್ ನಮೂದಿಸಿ, ವರ್ಷ, ಋತು ಸೆಲೆಕ್ಟ್ ಮಾಡಿ ಕ್ಯಾಪ್ಚಾ ನಮೂದು ಮಾಡಿ ಸಬ್‌ಮಿಟ್ ಒತ್ತಿದರೆ ನಿಮಗೆ ಹಣ ಜಮಾ ವಿವರ ತಿಳಿಯಲಿದೆ.

Bara Parihara Link : Click Here

ಇನ್ನೊಂದು ವಿಧದಲ್ಲಿ ನಾವು ಕೆಳಗೆ ನೀಡಿರುವ DBT Karnataka ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ನಂಬರ್ ಆಧಾರಿತ ಒಟಿಪಿ ಮೂಲಕ ಸ್ವವಿವರ ನಮೂದಿಸಿ ಬರ ಪರಿಗಾರ ಜಮಾ ವಿವರವನ್ನು ಪರಿಶೀಲಿಸಬಹುದಾಗಿದೆ.

DBT Karnataka : Download

WhatsApp Group Join Now
Telegram Group Join Now

Related Posts

error: Content is protected !!