ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ (Ministry of Environment and Forests -India) ಅಧೀನದ ಐಸಿಎಫ್‌ಆರ್‌ಇ (ICFRE) ಸಂಸ್ಥೆಯು ಬೆಂಗಳೂರಿನಲ್ಲಿ ಗ್ರಂಥಾಲಯ ಮಾಹಿತಿ ಸಹಾಯಕ, ಗುಮಾಸ್ತ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಸದರಿ ಐಸಿಎಫ್‌ಆರ್‌ಇ (Indian Council of Forestry Research and Education – ICFRE) ಸಂಸ್ಥೆಯನ್ನು ಅರಣ್ಯ ವಲಯದಲ್ಲಿ ಸಂಶೋಧನೆ ಮತ್ತು ಶಿಕ್ಷಣವನ್ನು ನಿರ್ದೇಶಿಸಲು ಮತ್ತು ನಿರ್ವಹಿಸಲು ರಚಿಸಲಾಗಿದ್ದು; 10ನೇ, 12ನೇ ತರಗತಿ, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಹುದ್ದೆಗಳ ವಿವರ
- ಗ್ರಂಥಾಲಯ ಮಾಹಿತಿ ಸಹಾಯಕ : 01
- ಗುಮಾಸ್ತ : 04
- ಮಲ್ಟಿ ಟಾಸ್ಕಿಂಗ್ ಸ್ಟಾಫ್ : 12
- ಒಟ್ಟು ಹುದ್ದೆಗಳು : 17
ಅರ್ಜಿ ಶುಲ್ಕದ ವಿವರ
ಎಸ್ಸಿ/ಎಸ್ಟಿ, ಪಿಎಚ್ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇತರ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 800 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ ಮತ್ತು ಆಯ್ಕೆ ವಿವರ
ಗ್ರಂಥಾಲಯ ಮಾಹಿತಿ ಸಹಾಯಕ : ಈ ಹುದ್ದೆಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಜನರಲ್ ಅವೇರ್‌ನೆಸ್, ಮೆಂಟಲ್ ಎಬಿಲಿಟಿ ಮತ್ತು ರೀಸನಿಂಗ್, ಜನರಲ್ ಇಂಗ್ಲಿಷ್ ಮತ್ತು ಲೈಬ್ರರಿ ಸೈನ್ಸ್ ವಿಷಯಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಷಯಕ್ಕು 25 ಅಂಕ ಇರುತ್ತದೆ.
ಗುಮಾಸ್ತ : ಈ ಹುದ್ದೆಗೆ 12ನೇ ತರಗತಿಗತಿ ನಿಗದಿ ಮಾಡಲಾಗಿದೆ. ಈ ಹುದ್ದೆಗೂ ಕೂಡ ಲಿಖಿತ ಪರೀಕ್ಷೆ ಮತ್ತು ಟೈಪಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಕ್ವಾಂಟಿಟೇಟಿವ್ ಆ್ಯಪ್ಟಿಟ್ಯೂಡ್. ಜನರಲ್ ಇಂಗ್ಲಿಷ್, ಜನರಲ್ ಅವೇರ್‌ನೆಸ್ ಮತ್ತು ಜನರಲ್ ಇಂಟಲಿಜನ್ಸ್ ವಿಷಯಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಷಯಕ್ಕೂ 25 ಅಂಕ ಇರುತ್ತದೆ. ಟೈಪಿಂಗ್ ಪರೀಕ್ಷೆ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಇರುತ್ತದೆ.
ಮಲ್ಲಿ ಟಾಸ್ಕಿಂಗ್ ಸ್ಟಾಫ್ : ಈ ಹುದ್ದೆಗಳಿಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಜನರಲ್ ಇಂಟಲಿಜನ್ಸ್ ಮತ್ತು ರೀಸನಿಂಗ್, ಜನರಲ್ ಅವೇರ್‌ನೆಸ್, ನ್ಯೂಮರಿಕಲ್ ಆ್ಯಪ್ಟಿಟ್ಯೂಡ್ ಮತ್ತು ಜನರಲ್ ವಿಷಯಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಷಯಕ್ಕೂ 25 ಅಂಕ ಇರುತ್ತದೆ.
ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ Village Map information
ವಯೋಮಿತಿ ಮತ್ತು ವೇತನದ ವಿವರ
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಇದೇ ಜನವರಿ 3, 2025ಕ್ಕೆ ಅನ್ವಯವಾಗುವಂತೆ ಕನಿಷ್ಠ 18ರಿಂದ 27 ವರ್ಷದೊಳಗಿರಬೇಕು. ನೇಮಕವಾದ ಅಭ್ಯರ್ಥಿಗಳಿಗೆ ಸಿಪಿಸಿ 7ರ ಪ್ರಕಾರ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಸಂಬ೦ಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ The Director, Institute of Wood Science & Technology, 18th Cross, Malleswaram, Bengaluru-560003 ಈ ವಿಳಾಸಕ್ಕೆ ಕಳುಹಿಸಬೇಕು.
- ಅರ್ಜಿ ಸಲ್ಲಿಕೆ ಕೊನೇ ದಿನ : 03-01-2025
- ಹೆಚ್ಚಿನ ಮಾಹಿತಿಗೆ icfre.gov.in