*ಜನವರಿ 23ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ International Organic Cereal Fair 2025*
ಅಂತಾರಾಷ್ಟ್ರೀಯ ವಾಣಿಜ್ಯ ಸಾವಯವ ಸಿರಿಧಾನ್ಯ ಮೇಳ (International Organic Cereal Fair 2025) ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಜನವರಿ 23ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯಲಿರುವ ಈ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ.
ದೇಶ-ವಿದೇಶಿಗರ ಬೃಹತ್ ಮೇಳ
ಮೇಳದಲ್ಲಿ ರೈತರು, ದೇಶೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು, ಸಾವಯವ ಮತ್ತು ಸಿರಿಧಾನ್ಯ ವಲಯದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳು, ವಿವಿಧ ಮಾರುಕಟ್ಟೆ ಕಂಪನಿಗಳು ಪಾಲ್ಗೊಳ್ಳಲಿವೆ. ಒಡಿಸ್ಸಾದ ಭುವನೇಶ್ವರ, ಹೈದ್ರಾಬಾದ್ ಹಾಗೂ ತೈವಾನ್ ರಾಷ್ಟ್ರದಲ್ಲಿ ಸಿರಿಧಾನ್ಯ ಮೇಳದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ರೋಡ್ ಶೋ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರದರ್ಶನದಲ್ಲಿ ಸ್ವಿಟ್ಸರ್ಲ್ಯಾಂಡ್. ಸ್ಪೇನ್, ಆಸ್ಟ್ರೇಲಿಯ, ಕೀನ್ಯಾ, ಜರ್ಮನ್, ತಾಂಜೇನಿಯ, ಇಟಲಿ, ಇಂಗ್ಲೆ೦ಡ್, ಪೆರು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮೇಳದಲ್ಲಿ ರಾಷ್ಟ್ರದ 27 ರಾಜ್ಯಗಳು ಪಾಲ್ಗೊಳ್ಳಲು ಈಗಾಗಲೇ ಹೆಸರು ನೋಂದಾಯಿಸಿವೆ. ವಿವಿಧ ರಾಜ್ಯಗಳ 10 ಮಂದಿ ಕೃಷಿ ಸಚಿವರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: MenasinaKayi Mela 2025 : ಜನವರಿ 31ರಿಂದ ಒಣ ಮೆಣಸಿನಕಾಯಿ ಮೇಳ
300ಕ್ಕೂ ಅಧಿಕ ಮಳಿಗೆಗಳು
ಸಿರಿಧಾನ್ಯ ಮೇಳದಲ್ಲಿ 300ಕ್ಕೂ ಹೆಚ್ಚು ಹವಾನಿಯಂತ್ರಿತ ಸಾವಯವ ಮತ್ತು ಸಿರಿಧಾನ್ಯಗಳ ಮಳಿಗೆಗಳು ಇರಲಿವೆ. 125ಕ್ಕೂ ಹೆಚ್ಚು ಮಾರಾಟಗಾರರು, 141 ಖರೀದಿದಾರರು ಹೆಸರು ನೋಂದಾಯಿಸಿದ್ದಾರೆ. ಅಲ್ಲದೆ ರಾಜ್ಯದ ವಿವಿಧ ಕಡೆಗಳಲ್ಲಿ ಇರುವ ಮಾರುಕಟ್ಟೆದಾರರು, ವ್ಯಾಪಾರಿಗಳು, ಎಫ್ಪಿಒ ಹಾಗೂ ವಿವಿಧ ಮಾರಾಟ ಒಕ್ಕೂಟಗಳು ಭಾಗವಹಿಸಲಿವೆ.
ಸಾವಯವ ಸಿರಿಧಾನ್ಯ ಮೇಳದಲ್ಲಿ ಪಾಲ್ಗೊಂಡವರು ಸಿರಿಧಾನ್ಯದಿಂದ ತಯಾರಿಸಿದ ವಿವಿಧ ಬಗೆಯ ತಿನಿಸು ಹಾಗೂ ಆಹಾರವನ್ನು ಸೇವಿಸಬಹುದಾಗಿದೆ. ವಿವಿಧ ಹೋಟೆಲ್, ರೆಸ್ಟೋರೆಂಟ್ಗಳು ಆಹಾರ ಮೇಳದಲ್ಲಿ ಪಾಲ್ಗೊಂಡು ವೈವಿಧ್ಯಮಯ ಮತ್ತು ರುಚಿಕರವಾದ ಸಾವಯವ ಹಾಗೂ ಸಿರಿಧಾನ್ಯಗಳ ಊಟ, ಉಪಾಹಾರಗಳನ್ನು ತಯಾರಿಸಲಿವೆ. ಆಹಾರದ ಜತೆಗೆ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: E-Swathu : ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ?
ಮೇಳದಲ್ಲಿ ರೈತರು ಪೋಷಿಸಿದ ದೇಶಿ ತಳಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ದೇಶಿ ಪೆವಿಲಿಯನ್’ನಲ್ಲಿ ರಾಜ್ಯದ ಆಯ್ದ 15 ಜಿಲ್ಲೆಗಳ 30 ದೇಶಿ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರನ್ನು ಆಹ್ವಾನಿಸಲಾಗಿದೆ. ಪೆವಿಲಿಯನ್ನಲ್ಲಿ ರೈತರು ಸಂರಕ್ಷಿಸಿರುವ ವಿವಿಧ ಬೆಳೆಗಳ ಬಿತ್ತನೆ ಬೀಜ, ತೆನೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಸಂಪೂರ್ಣ ಮಾಹಿತಿಯುಳ್ಳ Millets Brochure 2025 : Download
E-Swathu : ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ?